ಗೋಚಾರ ಸ್ಥಿತಿಯ ಆಧಾರದಲ್ಲಿ ಫಲವನ್ನು ತಿಳಿಸುವಂಥ ಲೇಖನ ಇದು. ಶುಕ್ರ ಗ್ರಹಕ್ಕೆ ಸಂಬಂಧಿಸಿದ ವಿಚಾರ ಇಲ್ಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಪ್ರೀತಿ, ಸೌಂದರ್ಯ, ಐಶಾರಾಮಿ ಜೀವನ, ಕಲೆ, ಪ್ರೇಮ ಸಂಬಂಧ ಹಾಗೂ ಆರ್ಥಿಕ ಸಮೃದ್ಧಿಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಶುಕ್ರನು 2026ರ ಆಗಸ್ಟ್ 1ರಿಂದ ಸೆಪ್ಟೆಂಬರ್ 2ರವರೆಗೆ ತನ್ನ ನೀಚ ರಾಶಿಯಾದ ಕನ್ಯಾ ರಾಶಿಯಲ್ಲಿ ಸಂಚರಿಸುವಾಗ ಪೂರ್ಣ ಶುಭ ಫಲಗಳನ್ನು ನೀಡಲು ಸಾಧ್ಯವಾಗುವುದಿಲ್ಲ.
ಪರಮ ನೀಚ ಸ್ಥಿತಿ
ಕನ್ಯಾ ರಾಶಿಯು ಶುಕ್ರನಿಗೆ ನೀಚ ಕ್ಷೇತ್ರವಾಗಿದೆ. ಇದರಲ್ಲಿ ವಿಶೇಷವಾಗಿ ಚಿತ್ತಾ ನಕ್ಷತ್ರದ ಎರಡನೇ ಪಾದದಲ್ಲಿ (ಕನ್ಯಾ ರಾಶಿಯ 27 ಡಿಗ್ರಿಯಲ್ಲಿ) ಸಂಚರಿಸುವಾಗ ಶುಕ್ರನು ತನ್ನ ‘ಪರಮ ನೀಚ ಸ್ಥಿತಿ’ಯನ್ನು ತಲುಪುತ್ತಾನೆ. ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹದ ಪ್ರಾಯೋಗಿಕ ಹಾಗೂ ವಿಮರ್ಶಾತ್ಮಕ ಆಲೋಚನೆಗಳ ಪ್ರಭಾವದಿಂದಾಗಿ ಶುಕ್ರನ ಭಾವನಾತ್ಮಕ ಮತ್ತು ಕಲಾತ್ಮಕ ಗುಣಗಳು ಮರೆಯಾಗುತ್ತವೆ.
ಜಾಗತಿಕ ಪರಿಣಾಮಗಳು
- ಆರ್ಥಿಕ ಕ್ಷೇತ್ರದಲ್ಲಿ ಏರಿಳಿತ: ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹಠಾತ್ ಏರಿಳಿತಗಳು ಕಂಡುಬರುತ್ತವೆ. ಬ್ಯಾಂಕಿಂಗ್, ಫ್ಯಾಷನ್, ಕಾಸ್ಮೆಟಿಕ್ಸ್, ಸಿನಿಮಾ ಮತ್ತು ಐಷಾರಾಮಿ ವಸ್ತುಗಳ ಉದ್ಯಮದಲ್ಲಿ ಮಂದಗತಿ ಅಥವಾ ತಾತ್ಕಾಲಿಕ ನಷ್ಟದ ವಾತಾವರಣ ಉಂಟಾಗುತ್ತದೆ.
- ರಾಜತಾಂತ್ರಿಕ ಸಂಬಂಧಗಳು: ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಗಳು ಮತ್ತು ರಾಜತಾಂತ್ರಿಕ ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯ ಕೊರತೆ ಅಥವಾ ಭಿನ್ನಾಭಿಪ್ರಾಯಗಳು ಮೂಡುತ್ತವೆ.
- ಸಂಬಂಧ ಮತ್ತು ಸಾಂಸ್ಕೃತಿಕ ರಂಗ: ಜಾಗತಿಕವಾಗಿ ಜನರ ನಡುವಿನ ಭಾವನಾತ್ಮಕ ಬಾಂಧವ್ಯದಲ್ಲಿ ಬಿರು ಮೂಡುತ್ತದೆ. ಕಲಾತ್ಮಕ ಕ್ಷೇತ್ರಗಳಿಗೆ ಸವಾಲುಗಳು ಎದುರಾಗುತ್ತವೆ.
Lakshmi Red Coral: ಲಕ್ಷ್ಮೀ ಹವಳ ಧರಿಸುವುದರ ಪ್ರಯೋಜನಗಳು; ತ್ರಿಕೋನ ಹವಳದ ರಹಸ್ಯ!
ಕನ್ಯಾ ರಾಶಿ ಶುಕ್ರ ಸಂಚಾರದಿಂದ ದ್ವಾದಶ ರಾಶಿಗಳ ಮೇಲಿನ ಪ್ರಭಾವ
1. ಮೇಷ ರಾಶಿ
ಆರೋಗ್ಯದ ಮೇಲೆ ದುಷ್ಪ್ರಭಾವ ಉಂಟಾಗುತ್ತದೆ. ಶತ್ರುಗಳು ಅಥವಾ ಸ್ಪರ್ಧಿಗಳಿಂದ ತೊಂದರೆಗಳು ಎದುರಾಗುತ್ತವೆ. ಖರ್ಚುಗಳು ಹೆಚ್ಚಾಗುತ್ತವೆ, ಅನಗತ್ಯವಾಗಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ.
2. ವೃಷಭ ರಾಶಿ
ನಿಮ್ಮ ರಾಶ್ಯಾಧಿಪತಿಯೇ ನೀಚನಾಗಿರುವುದರಿಂದ ಹತಾಶೆ ಕಾಡುತ್ತದೆ. ಪ್ರೇಮ ಜೀವನದಲ್ಲಿ ಮನಸ್ತಾಪಗಳು ಉಂಟಾಗುತ್ತವೆ. ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.
3. ಮಿಥುನ ರಾಶಿ
ಸಾಕುಪ್ರಾಣಿಗಳು ಅಥವಾ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ. ಗೃಹ ಸಂಬಂಧಿತ ಖರ್ಚುಗಳು ಹೆಚ್ಚಾಗುತ್ತವೆ. ಮನೆ ಅಥವಾ ವಾಹನ ಖರೀದಿಯಲ್ಲಿ ಗೊಂದಲಗಳು ಉಂಟಾಗುತ್ತವೆ.
4. ಕಟಕ ರಾಶಿ
ಸಹೋದರ-ಸಹೋದರಿಯರೊಂದಿಗೆ ಭಿನ್ನಾಭಿಪ್ರಾಯಗಳು ಬರುತ್ತವೆ. ಪ್ರಯಾಣದ ಸಮಯದಲ್ಲಿ ತೊಂದರೆಗಳು ಎದುರಾಗುತ್ತವೆ. ಸಂವಹನದಲ್ಲಿ ಸ್ಪಷ್ಟತೆ ಕೊರತೆ ಉಂಟಾಗುತ್ತದೆ.
5. ಸಿಂಹ ರಾಶಿ
ಮಾತಿನ ಮೇಲೆ ನಿಗ್ರಹ ಅಗತ್ಯ, ಇಲ್ಲದಿದ್ದರೆ ಕುಟುಂಬದಲ್ಲಿ ಬಿರುಕು ಮೂಡುತ್ತದೆ. ಹಣಕಾಸಿನ ವಿಷಯದಲ್ಲಿ ಧನ ನಷ್ಟವಾಗುವ ಸನ್ನಿವೇಶಗಳು ಎದುರಾಗುತ್ತವೆ.
6. ಕನ್ಯಾ ರಾಶಿ
ಶುಕ್ರನು ನಿಮ್ಮ ರಾಶಿಯಲ್ಲೇ ಸಂಚರಿಸುವುದರಿಂದ ಮಾನಸಿಕ ಒತ್ತಡ ಅಥವಾ ಗೊಂದಲ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಣ್ಣ ವಿಷಯಗಳಿಗೂ ವಿಮರ್ಶಾತ್ಮಕ ಧೋರಣೆ ಹೆಚ್ಚಾಗುತ್ತದೆ.
7. ತುಲಾ ರಾಶಿ
ರಾಶ್ಯಾಧಿಪತಿ 12ನೇ ಮನೆಯಲ್ಲಿ ನೀಚನಾಗಿರುವುದರಿಂದ ಅತಿಯಾದ ಖರ್ಚುಗಳು ಎದುರಾಗುತ್ತವೆ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ವಿಳಂಬವಾಗುತ್ತದೆ. ಆರೋಗ್ಯದಲ್ಲಿ ಏರಿಳಿತಗಳು ಉಂಟಾಗುತ್ತವೆ.
8. ವೃಶ್ಚಿಕ ರಾಶಿ
ಆದಾಯದಲ್ಲಿ ಅಡೆತಡೆಗಳು ಎದುರಾಗುತ್ತವೆ. ಸ್ನೇಹಿತರ ಜೊತೆಗಿನ ಬಾಂಧವ್ಯದಲ್ಲಿ ತಪ್ಪು ತಿಳಿವಳಿಕೆಗಳು ಎದುರಾಗುತ್ತವೆ. ಆಸೆಗಳು ತಡವಾಗಿ ಈಡೇರುತ್ತವೆ.
9. ಧನು ರಾಶಿ
ಉದ್ಯೋಗ ಮತ್ತು ಕಾರ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗುತ್ತದೆ. ಸಹೋದ್ಯೋಗಿಗಳೊಂದಿಗೆ ವಾದ-ವಿವಾದಗಳು ಉಂಟಾಗುತ್ತವೆ. ಮೇಲಧಿಕಾರಿಗಳೊಂದಿಗೆ ಅಸಮಾಧಾನ ಮೂಡುತ್ತದೆ.
10. ಮಕರ ರಾಶಿ
ಭಾಗ್ಯ ಸ್ಥಾನದಲ್ಲಿ ಶುಕ್ರ ನೀಚನಾಗಿರುವುದರಿಂದ ಅದೃಷ್ಟದ ಬೆಂಬಲ ಕಡಿಮೆಯಾಗುತ್ತದೆ. ತಂದೆಯವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.
ಸ್ವಂತ ಮನೆ, ಸೈಟು ಖರೀದಿಗೆ ವಿಘ್ನವೇ? ಭೂಮಿ ದೋಷ ನಿವಾರಣೆಗೆ ಮಾಡಿ ತ್ರಿವಿಕ್ರಮ ಆರಾಧನೆ!
11. ಕುಂಭ ರಾಶಿ
ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ. ರಹಸ್ಯ ಶತ್ರುಗಳಿಂದ ತೊಂದರೆಗಳು ಬರುತ್ತವೆ. ಆಸ್ತಿ ಅಥವಾ ಹೂಡಿಕೆ ವಿಷಯಗಳಲ್ಲಿ ತಪ್ಪಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.
12. ಮೀನ ರಾಶಿ
ಸಪ್ತಮ ಭಾವದಲ್ಲಿ ಶುಕ್ರ ನೀಚನಾಗುವುದರಿಂದ ವ್ಯಾಪಾರ ಪಾಲುದಾರರೊಂದಿಗೆ ಮತ್ತು ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಮೂಡುತ್ತವೆ.
ಸರಳ ಪರಿಹಾರಗಳು
- ನಿತ್ಯ ಅಥವಾ ಶುಕ್ರವಾರದಂದು ಮಹಾಲಕ್ಷ್ಮಿ ದೇವಿಯ ಆರಾಧನೆ ಮಾಡಿ.
- ಶ್ರೀ ಸೂಕ್ತ ಅಥವಾ ಲಲಿತಾ ಸಹಸ್ರನಾಮ ಪಠಣ ಮಾಡುವುದು ಶುಭ.
- ಬಿಳಿ ಬಣ್ಣದ ವಸ್ತುಗಳು (ಹಾಲು, ಅಕ್ಕಿ, ಸಕ್ಕರೆ) ಅಥವಾ ಹಸುವಿಗೆ ಮೇವನ್ನು ದಾನ ಮಾಡುವುದು ನೀಚ ಶುಕ್ರನ ದುಷ್ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಲೇಖನ- ಶ್ರೀನಿವಾಸ ಮಠ









