ಅದೃಷ್ಟ ರತ್ನಗಳ ಪೈಕಿ ಹವಳ ಸಹ ಒಂದು. ಆದರೆ ಈ ಹವಳದಲ್ಲಿಯೂ ತ್ರಿಕೋನ ಆಕಾರದ ಹವಳ ಬಹಳ ವಿಶಿಷ್ಟ ಆದದ್ದು. ಇದನ್ನು ‘ಲಕ್ಷ್ಮೀ ಹವಳ’ ಎಂದು ಕರೆಯಲಾಗುತ್ತದೆ. ಹವಳ ಧಾರಣೆಯೇ ಮಾಡುವುದಾದರೆ ಈ ರೀತಿ ತ್ರಿಕೋನ ಆಕಾರದ ಹವಳ ಧರಿಸುವುದರಿಂದ ಶುಭ ಫಲಗಳು ಅನೇಕ.
ಜ್ಯೋತಿಷ್ಯ ಶಾಸ್ತ್ರ ಮತ್ತು ರತ್ನಶಾಸ್ತ್ರದ ಪ್ರಕಾರ, ಸಾಮಾನ್ಯವಾಗಿ ದೊರೆಯುವ ಹವಳಗಳಿಗಿಂತ ವಿಭಿನ್ನವಾಗಿ ಸ್ವಾಭಾವಿಕವಾಗಿಯೇ ತ್ರಿಕೋನ ಆಕಾರದಲ್ಲಿ ರೂಪುಗೊಂಡ ಹವಳಕ್ಕೆ ವಿಶೇಷ ಸ್ಥಾನವಿದೆ. ಇಂತಹ ಅಪರೂಪದ ಆಕಾರದ ಹವಳವನ್ನು “ಲಕ್ಷ್ಮೀ ಹವಳ” ಎಂದು ಕರೆಯಲಾಗುತ್ತದೆ. ಇದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಸಂಬಂಧಿಸಿದ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹವಳವನ್ನು ಜ್ಯೋತಿಷ್ಯದಲ್ಲಿ ಮಂಗಳ ಗ್ರಹದ ರತ್ನವೆಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹವು ಧೈರ್ಯ, ಶಕ್ತಿ, ಭೂಮಿ-ಆಸ್ತಿ ವ್ಯವಹಾರ ಮತ್ತು ರಕ್ತಕ್ಕೆ ಸಂಬಂಧಿಸಿದ ವಿಚಾರಗಳ ಅಧಿಪತಿ. ತ್ರಿಕೋನಾಕಾರದ ವಿಶೇಷ ಹವಳವು ಈ ಎಲ್ಲಾ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತದೆ.
ಲಕ್ಷ್ಮೀ ಹವಳವನ್ನು ಧರಿಸುವುದರಿಂದ ಈ ಕೆಳಗಿನ ಪ್ರಯೋಜನಗಳಾಗುತ್ತವೆ:
ರಿಯಲ್ ಎಸ್ಟೇಟ್ ಮತ್ತು ಆಸ್ತಿ ವ್ಯವಹಾರ
ಮಂಗಳ ಗ್ರಹವು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಗ್ರಹವಾಗಿರುವುದರಿಂದ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಈ ಹವಳ ಶುಭಕರವೆಂದು ಹೇಳಲಾಗುತ್ತದೆ. ಜಮೀನು, ಮನೆ ಖರೀದಿ-ಮಾರಾಟ ವ್ಯವಹಾರಗಳಲ್ಲಿ ಅಡಚಣೆಗಳು ಕಡಿಮೆಯಾಗಿ, ಒಳ್ಳೆಯ ಒಪ್ಪಂದಗಳು ಕೂಡಿ ಬರುತ್ತವೆ ಎಂಬುದು ನಂಬಿಕೆ.
ಸಲ್ಮಾನ್ ಖಾನ್ ರಿಂದ ಜಾನಿ ಡೆಪ್ ವರೆಗೆ ಎಲ್ಲರ ಮೆಚ್ಚಿನ ಈ ‘ಟರ್ಕೋಯ್ಸ್’ ರತ್ನದ ವಿಶೇಷತೆಗಳೇನು? ಯಾರಿಗೆ ಇದು ಶುಭ?
ವ್ಯಾಪಾರ-ವಹಿವಾಟಿನಲ್ಲಿ ಯಶಸ್ಸು
ಸಾಮಾನ್ಯವಾಗಿ ಯಾವುದೇ ರೀತಿಯ ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರಿಗೆ ಆತ್ಮವಿಶ್ವಾಸ, ನಿರ್ಣಯ ಶಕ್ತಿ ಮತ್ತು ಧೈರ್ಯ ಹೆಚ್ಚಾಗಿ, ವ್ಯವಹಾರದಲ್ಲಿ ಲಾಭ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ.
ರಕ್ತ ಸಂಚಾರ ಮತ್ತು ರಕ್ತದೊತ್ತಡ ಸಮತೋಲನ
ಹವಳವು ರಕ್ತಕ್ಕೆ ಸಂಬಂಧಿಸಿದ ಮಂಗಳ ಗ್ರಹದ ರತ್ನವಾಗಿರುವುದರಿಂದ, ಇದನ್ನು ಧರಿಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ ಮತ್ತು ರಕ್ತದೊತ್ತಡ ಸಮತೋಲನದಲ್ಲಿ ಇರುತ್ತದೆ.
ಅನೀಮಿಯಾ (ರಕ್ತಹೀನತೆ) ಸಮಸ್ಯೆಗೆ ಪರಿಹಾರ
ಇದೇ ರೀತಿ, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಈ ಹವಳ ಧಾರಣೆ ನೆರವಾಗುತ್ತದೆ.
ಸಾಲ ತೀರಿಸುವುದಕ್ಕೆ ಇರುವ ಅಡೆತಡೆಗಳ ನಿವಾರಣೆ
ಸಾಲ ಮರುಪಾವತಿಯಲ್ಲಿ ಎದುರಾಗುವ ಆರ್ಥಿಕ ಅಡಚಣೆಗಳನ್ನು ನಿವಾರಿಸಲು ಮತ್ತು ಸಾಲದಿಂದ ಮುಕ್ತಿ ಪಡೆಯಲು ಈ ಹವಳ ಸಹಕಾರಿ.
ನಿಮ್ಮ ಅದೃಷ್ಟ ಬದಲಿಸಬಲ್ಲ ಸೆವೆನ್ ಚಕ್ರ ಬ್ರೇಸ್‌ಲೆಟ್: ಯಾವ ರತ್ನದ ಲಾಭ ಏನು?
ಧಾರಣೆ ವಿಧಾನ ಮತ್ತು ಸಂಪ್ರದಾಯ
- ಹವಳವನ್ನು ಸಾಮಾನ್ಯವಾಗಿ ತಾಮ್ರ ಅಥವಾ ಬಂಗಾರದ ಉಂಗುರದಲ್ಲಿ ಜೋಡಿಸಿ ಧರಿಸಬೇಕು.
- ಮಂಗಳವಾರದಂದು, ಶುಭ ಮುಹೂರ್ತದಲ್ಲಿ ಧರಿಸುವುದು ಶ್ರೇಷ್ಠ.
- ಬಲಗೈ ಅನಾಮಿಕ ಬೆರಳಿನಲ್ಲಿ (ಉಂಗುರದ ಬೆರಳು- ರಿಂಗ್ ಫಿಂಗರ್) ಧರಿಸುವುದು ವಾಡಿಕೆ.
ಈ ತ್ರಿಕೋನ ಆಕಾರದ ಹವಳವನ್ನು ಕ್ಯಾಶ್ ಬಾಕ್ಸ್ ನಲ್ಲಿ, ಪರ್ಸ್ ನಲ್ಲಿ, ವ್ಯಾನಿಟಿ ಬ್ಯಾಗ್ ನಲ್ಲಿ, ಹಣ ಇಡುವಂಥ ಪೆಟ್ಟಿಗೆಯಲ್ಲಿ ಇಂಥ ಕಡೆ ಇಡಬಹುದು. ಒಂದು ವೇಳೆ ಉಂಗುರ, ಲಾಕೆಟ್ ಅಥವಾ ಬ್ರೇಸ್ ಲೆಟ್ ರೂಪದಲ್ಲಿ ಧರಿಸುವಂತಿದ್ದರೆ ಜಾತಕ ಪರಿಶೀಲನೆ ನಡೆಸಿ, ಜ್ಯೋತಿಷಿಗಳ ಸಲಹೆ ಪಡೆದು, ತಮ್ಮ ಜಾತಕದಲ್ಲಿ ಮಂಗಳ ಗ್ರಹದ ಸ್ಥಾನ-ಬಲ ಪರಿಶೀಲಿಸಿಕೊಳ್ಳುವುದು ಸೂಕ್ತ. ಆ ನಂತರ ಹವಳವನ್ನು ಧರಿಸಬಹುದಾ ಎಂಬುದನ್ನು ಖಚಿತ ಮಾಡಿಕೊಳ್ಳಿ.
ಮನೆಯ ಈ ದಿಕ್ಕಿನಲ್ಲಿ ‘ಪೈರೈಟ್’ ಫ್ರೇಮ್ ಇಟ್ಟರೆ ಸಾಕು; ಹಣವನ್ನು ಆಕರ್ಷಿಸುತ್ತೆ ಈ ‘ಮೂರ್ಖರ ಚಿನ್ನ’!
ನೀವು ಶುದ್ಧ ಮತ್ತು ಪ್ರಮಾಣೀಕೃತ (Certified) ತ್ರಿಕೋನ ಆಕಾರದ ಹವಳ (ಲಕ್ಷ್ಮೀ ಹವಳ) ಖರೀದಿಸಲು ಬಯಸಿದಲ್ಲಿ ಇಲ್ಲಿಗೆ ಭೇಟಿ ನೀಡಬಹುದು:
- ಮಳಿಗೆ: ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (JS Gems & Jewellery)
- ವಿಳಾಸ: ಪದ್ಮನಾಭನಗರ, ಬೆಂಗಳೂರು.
- ಸಂಪರ್ಕ ಸಂಖ್ಯೆ: 72047 36365
- ವೆಬ್‌ಸೈಟ್: jsgems.in
ಲೇಖನ- ಶ್ರೀನಿವಾಸ ಮಠ









