ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ಈ ವಿಶೇಷ ದಿನದಂದು ಸಮಸ್ತ ಭಕ್ತರ ಪಾಲಿಗೆ ಅತ್ಯಂತ ಮಂಗಳಕರವಾದ ಗಣೇಶ ಚತುರ್ಥಿಯ ಸಂಭ್ರಮ. ಈ ಬಾರಿ ಸೆಪ್ಟೆಂಬರ್ 14ನೇ ತಾರೀಕು ಬಂದಿದೆ. ವಿಘ್ನಗಳನ್ನು ನಿವಾರಿಸುವ, ಬುದ್ಧಿವೃದ್ಧಿಯನ್ನು ಕರುಣಿಸುವ ಪ್ರಥಮ ಪೂಜಿತ ಗಣಪತಿಯ ವಿಶೇಷ ಆರಾಧನೆಯ ಈ ಶುಭ ಸಂದರ್ಭದಲ್ಲಿ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಪ್ರಸಿದ್ಧ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಮೂರು ಕಾಯಿ ಅಷ್ಟ ದ್ರವ್ಯ ಹೋಮ ಹಾಗೂ ಹೂವಿನ ಸೇವೆ
ಆರ್.ಆರ್. ನಗರದ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮೂರು ಕಾಯಿ ಅಷ್ಟ ದ್ರವ್ಯ ಹೋಮವನ್ನು ಆಯೋಜಿಸಲಾಗಿದೆ. ಜತೆಗೆ ಸೇವಾಕರ್ತರಿಗೆ ಹೂವಿನ ಸೇವೆ ಸಲ್ಲಿಸುವ ಅವಕಾಶ ಸಹ ಇದೆ. ಈ ವಿಶೇಷ ಸಂದರ್ಭದಲ್ಲಿ ವಿಘ್ನಹರ್ತನಾದ ಗಣಪತಿಗೆ ಗಣಪತಿ ಹೋಮವನ್ನು ಮಾಡಿಸುವುದರಿಂದ ಭಕ್ತರಿಗೆ ಅತ್ಯುನ್ನತವಾದ ಮತ್ತು ವಿಶೇಷವಾದ ಫಲಗಳು ಪ್ರಾಪ್ತಿಯಾಗಲಿವೆ.
ಈ ಪವಿತ್ರ ಸೇವೆಯ ವಿವರಗಳು ಹೀಗಿವೆ:
- ಸೇವೆಯ ಮೊತ್ತ: ಈ ವಿಶೇಷ ಸೇವೆಗೆ ರೂ. 5,001/- ನಿಗದಿಪಡಿಸಲಾಗಿದೆ.
- ಮೂರು ಕಾಯಿ ಅಷ್ಟದ್ರವ್ಯ ಹೋಮ: ಈ ಸೇವೆ ಅಡಿಯಲ್ಲಿ ಮೂರು ಕಾಯಿ ಅಷ್ಟದ್ರವ್ಯ ಹೋಮವನ್ನು ಮಾಡಲಾಗುತ್ತದೆ, ಸೇವಾಕರ್ತರ ವಿಶೇಷ ಸಂಕಲ್ಪವನ್ನು ತೆಗೆದುಕೊಳ್ಳಲಾಗುವುದು.
- ವಿಶೇಷ ಹೂವಿನ ಸೇವೆ: ಇದರೊಂದಿಗೆ ದೇವರಿಗೆ ಅತ್ಯಂತ ಪ್ರಿಯವಾದ ಹೂವುಗಳಿಂದ ವಿಶೇಷ ಹೂವಿನ ಸೇವೆಯನ್ನು ನೆರವೇರಿಸಲಾಗುತ್ತದೆ.
ಕುರುಡುಮಲೆ ಗಣಪತಿ ದೇವಸ್ಥಾನದ ಸಾಲಿಗ್ರಾಮ ಶಿಲೆ ಮೂರ್ತಿಯ ಪವಾಡ ನಿಮಗೆ ಗೊತ್ತೆ?
ಹೋಮದಿಂದ ಪ್ರಾಪ್ತಿಯಾಗುವ ಶುಭ ಫಲಗಳು
ಈ ಅಷ್ಟದ್ರವ್ಯ ಗಣಪತಿ ಹೋಮ ಹಾಗೂ ಹೂವಿನ ಸೇವೆಯಲ್ಲಿ ಪಾಲ್ಗೊಳ್ಳುವುದರಿಂದ ಭಕ್ತರ ಜೀವನದ ವಿವಿಧ ಸಮಸ್ಯೆಗಳು ನಿವಾರಣೆಯಾಗಿ, ಸರ್ವ ಕಾರ್ಯಗಳಲ್ಲೂ ಜಯ ಸಿಗಲಿದೆ:
- ವಿವಾಹ ವಿಘ್ನಗಳ ನಿವಾರಣೆ: ಮದುವೆಯಲ್ಲಿ ಎದುರಾಗುತ್ತಿರುವ ಅನಗತ್ಯ ತಡೆಗಳು ಹಾಗೂ ವಿಳಂಬಗಳು ನಿವಾರಣೆಯಾಗಿ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲು ದಾರಿಯಾಗುತ್ತದೆ.
- ವಿದ್ಯಾಭ್ಯಾಸದ ಅಡೆತಡೆಗಳ ನಿವಾರಣೆ: ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗಿ, ವಿದ್ಯಾಭ್ಯಾಸದಲ್ಲಿ ಬರುವ ಎಲ್ಲ ರೀತಿಯ ಅಡೆತಡೆಗಳು ದೂರವಾಗಿ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ.
- ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು: ಹೊಸ ಉದ್ಯಮಗಳನ್ನು ಆರಂಭಿಸುವವರಿಗೆ ಅಥವಾ ಈಗಾಗಲೇ ವ್ಯಾಪಾರದಲ್ಲಿ ತೊಡಗಿರುವವರಿಗೆ ಆರ್ಥಿಕ ಅಭಿವೃದ್ಧಿ, ಲಾಭ ಹಾಗೂ ಯಶಸ್ಸು ಲಭಿಸುತ್ತದೆ.
- ಕೇತು ದೋಷ ನಿವಾರಣೆ: ಜಾತಕದಲ್ಲಿರುವ ಕೇತು ದೋಷದ ಪ್ರಭಾವಗಳು ತಗ್ಗಿ, ಇದರಿಂದ ಉಂಟಾಗುವ ಮಾನಸಿಕ ಹಾಗೂ ದೈಹಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
- ಸರ್ವ ಇಷ್ಟಾರ್ಥ ಸಿದ್ಧಿ: ಭಕ್ತರ ಮನಸ್ಸಿನ ಕೋರಿಕೆಗಳು ಈಡೇರಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ನಾಳೆ ಈ ಪವಿತ್ರ ಸೇವೆಯಲ್ಲಿ ಪಾಲ್ಗೊಂಡು ವಿಘ್ನರಾಜನ ಕೃವೆಗೆ ಪಾತ್ರರಾಗಿ, ನಿಮ್ಮ ಜೀವನದ ಸಕಲ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಿ. ಗಣಪತಿಯ ಹಾಗೂ ಸಾಯಿ ಬಾಬಾ ಅವರ ಕೃಪೆ ನಿಮ್ಮೆಲ್ಲರ ಮೇಲಿರಲಿ.
ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲು ಹಾಗೂ ಸೇವೆಗೆ ಕಾಣಿಕೆ ನೀಡಲು 9980 300790 ಹಾಗೂ 91106 16295 ಈ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಿ ಎಂದು ನರಸಿಂಹ ದೇವರ ಉಪಾಸಕರೂ ಆದ ಮಂಜುನಾಥ್ ಎನ್ ಭಾರದ್ವಾಜ್ ಅವರು ತಿಳಿಸಿದ್ದಾರೆ.
ಲೇಖನ- ಶ್ರೀನಿವಾಸ ಮಠ









