ಗುರು ಗ್ರಹದ ಅತಿಚಾರ ಸಂಚಾರ: ಖ್ಯಾತ ಜ್ಯೋತಿಷಿ ವೇಣುಸ್ವಾಮಿಯಿಂದ ಸ್ಫೋಟಕ ಭವಿಷ್ಯ!

Astrologer Venu Swamy and a conceptual representation of Jupiter transit with zodiac signs.
ಗುರು ಗ್ರಹದ ಅತಿಚಾರ ಸಂಚಾರ: ದೇಶದಲ್ಲಿ ಸಂಭವಿಸಲಿರುವ ಬದಲಾವಣೆಗಳ ಬಗ್ಗೆ ಜ್ಯೋತಿಷಿ ವೇಣುಸ್ವಾಮಿ ಅವರ ಸ್ಫೋಟಕ ಭವಿಷ್ಯ.

ಇದೇ ಜೂನ್ ಎರಡನೇ ತಾರೀಕು ಕರ್ಕಾಟಕ ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತಿದೆ. ಈ ಅವಧಿಯಲ್ಲಿ ಗುರು ಗ್ರಹವು ತನ್ನ ಸಾಮಾನ್ಯ ವೇಗಕ್ಕಿಂತ ಶೀಘ್ರವಾಗಿ ಸಂಚರಿಸುವುದರಿಂದ ಅತಿಚಾರ ಎಂದು ಇದನ್ನು ಕರೆಯಲಾಗುತ್ತದೆ. ಗುರು ಗ್ರಹದ ಸಂಚಾರದ ವಿವರ ಈ ಕೆಳಕಂಡಂತೆ ಇದೆ.

ಜೂನ್ 2, 2026ರಿಂದ ಅಕ್ಟೋಬರ್ 31, 2026ರ ತನಕ ಕರ್ಕಾಟಕ ರಾಶಿಯಲ್ಲಿ 

ಅಕ್ಟೋಬರ್ 31, 2026ರಿಂದ ಜನವರಿ 25, 2027ರ ತನಕ ಸಿಂಹ ರಾಶಿಯಲ್ಲಿ 

ಜನವರಿ 25, 2027ರಿಂದ ಜೂನ್ 26, 2027ರ ತನಕ ಮತ್ತೆ ಕರ್ಕಾಟಕ ರಾಶಿಯಲ್ಲಿ ಗುರು ಗ್ರಹದ ಸಂಚಾರ

ಈ ಸಂದರ್ಭದಲ್ಲಿ ಆಗುವಂಥ ಕೆಲವು ಅನಾಹುತಗಳ ಬಗ್ಗೆ ತೆಲುಗು ಭಾಷಿಕ ರಾಜ್ಯಗಳಲ್ಲಿ ಪ್ರಖ್ಯಾತರಾದ ಜ್ಯೋತಿಷಿ ವೇಣುಸ್ವಾಮಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಸಂಬಂಧವಾಗಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ. ಅವರು ನುಡಿದಿರುವ ಭವಿಷ್ಯದ ಪ್ರಮುಖಾಂಶಗಳು ಹೀಗಿವೆ:

  • ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಆಗಲಿದೆ. ಒಂದು ವೇಳೆ ವಿಜಯ್ ಮುಖ್ಯಮಂತ್ರಿಯೇ ಆದರೂ ಅಲ್ಲಿ ನೂರಕ್ಕೆ ಸಾವಿರದಷ್ಟು ಮತ್ತೆ ಚುನಾವಣೆ ಆಗುತ್ತದೆ. ವಿಜಯ್ ಹೆಸರಿನ ಜೊತೆಗೆ ನಟಿ ತ್ರಿಷಾ ಹೆಸರು ಸಹ ತಳುಕು ಹಾಕಿಕೊಂಡು, ಚುನಾವಣೆಗೆ ಮುಂಚಿನಿಂದಲೂ ಜನರ ಮಧ್ಯೆ ಚರ್ಚೆಯಲ್ಲಿದೆ. ವಿಜಯ್ ಅವರ ವೈಯಕ್ತಿಕ ಜಾತಕದಲ್ಲಿ ಉತ್ತಮ ಯೋಗವಿದೆ, ಆದರೆ ತ್ರಿಷಾ ಹೆಸರು ತಳುಕು ಹಾಕಿಕೊಂಡಿದ್ದರಿಂದ ವಿಜಯ್ ಜಾತಕದಲ್ಲಿನ ಉತ್ತಮ ಯೋಗಕ್ಕೆ ಬಂದಿದೆ. ಇನ್ನು ಆರು ತಿಂಗಳಿಗೆ ಆಗಬಹುದು ಅಥವಾ ಒಂದು ವರ್ಷದಲ್ಲಿಯೇ ಆಗಬಹುದು, ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಆಗಲಿದೆ.
  • ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಮುಂದಿನ ಎರಡು ವರ್ಷಗಳ ಕಾಲ ತೀವ್ರತರದಲ್ಲಿ ಹಿಂಸಾ ಕೃತ್ಯಗಳು, ಭಯೋತ್ಪಾದನಾ ಕೃತ್ಯಗಳು ನಡೆದು, ಮತಕಲಹಗಳು, ಬಂದ್ ಇವೆಲ್ಲ ಆಗಿ, ರಾಷ್ಟ್ರಪತಿ ಆಡಳಿತ ಹೇರುವ ಯೋಗ ಕಂಡುಬರುತ್ತಿದೆ. ಮಮತಾ ಬ್ಯಾನರ್ಜಿ ರಾಜಕೀಯ ಜೀವನದ ಅಂತ್ಯವಿದು. ಇನ್ನು ರಾಜಕೀಯದ ಭವಿಷ್ಯ ಇನ್ನು ಅವರಿಗಿಲ್ಲ.

ವೈಭವ್ ಸೂರ್ಯವಂಶಿ ಜಾತಕ ವಿಶ್ಲೇಷಣೆ: ವೇಣು ಸ್ವಾಮಿ ನುಡಿದ ಭವಿಷ್ಯವೇನು?

  • 2026ರ ಜೂನ್ ನಿಂದ ಸೆಪ್ಟೆಂಬರ್ ತನಕದ ಅವಧಿಯಲ್ಲಿ ಈಶಾನ್ಯ ರಾಜ್ಯಗಳ ಮೇಲೆ ಹಾಗೂ ದೆಹಲಿ ಮೇಲೆ ಭಯೋತ್ಪಾದನೆ ದಾಳಿಗಳು ಆಗುತ್ತವೆ. ಈಶಾನ್ಯ ರಾಜ್ಯಗಳಲ್ಲಿ ಭೂಕಂಪನಗಳು ಸಂಭವಿಸುವ ಯೋಗ ಸಹ ಇದೆ.
  • 2026ರ ಜೂನ್ ನಿಂದ ಸೆಪ್ಟೆಂಬರ್ ತನಕದ ಅವಧಿಯಲ್ಲಿ ವಿಮಾನ ಅಪಘಾತಗಳು ಸಂಭವಿಸಲಿದ್ದು, ಸೆಲೆಬ್ರಿಟಿಯೊಬ್ಬರು (ಕ್ರೀಡೆ, ಸಿನಿಮಾ, ರಾಜಕಾರಣ ಹೀಗೆ ಯಾವುದೇ ಕ್ಷೇತ್ರದ ಸೆಲಿಬ್ರಿಟಿ ಆಗಿರಬಹುದು) ವಿವಾದಾತ್ಮಕವಾದ ಸಾವನ್ನು ಅಪ್ಪುತ್ತಾರೆ.
  • ಇನ್ನು ಇದೇ ಅವಧಿಯಲ್ಲಿ ವಿವಾದಕ್ಕೆ ಗುರಿ ಆಗುವ ರೀತಿಯಲ್ಲಿಯೋ ಅಥವಾ ಸಹಜವಾಗಿಯೇ ಆಗಲಿ ವಿಶ್ವ ಮಟ್ಟದ ಅತ್ಯಂತ ಪ್ರಮುಖ ನಾಯಕರೊಬ್ಬರು ಇಲ್ಲಿಂದ ನಿರ್ಗಮಿಸಲಿದ್ದಾರೆ (ನಿಧನರಾಗುತ್ತಾರೆ).
  • ತೆಲಂಗಾಣದಲ್ಲಿ ಪ್ರಮುಖ ವ್ಯಕ್ತಿಗಳು 2026ರ ಜೂನ್ ನಿಂದ ಸೆಪ್ಟೆಂಬರ್ ತನಕದ ಅವಧಿಯಲ್ಲಿ ಜೈಲು ಸೇರುತ್ತಾರೆ.
  • ಯಾರ ಹೆಸರು A, D, C, M, S, L, I, T ಈ ಇಂಗ್ಲಿಷ್ ಅಕ್ಷರದಿಂದ ಆರಂಭವಾಗುತ್ತದೋ ಅಂಥವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ರಾಶಿಗತವಾಗಿ ಮೇಷ, ಸಿಂಹ, ಕುಂಭ, ಮೀನ ರಾಶಿಗಳವರು ತೊಂದರೆಗಳನ್ನು ಅನುಭವಿಸುತ್ತಾರೆ.

ಗುರು ದೋಷ ನಿವಾರಣೆಗೆ, ಬೃಹಸ್ಪತಿ ಅನುಗ್ರಹಕ್ಕೆ ಅಧಿಕ ಜ್ಯೇಷ್ಠ ಮಾಸದಲ್ಲಿ ಮಹಾ ಬೃಹಸ್ಪತಿ ಯಾಗ

ಗುರು ಗ್ರಹದ ಅತಿಚಾರ ಸಂಚಾರದ ಪರಿಣಾಮವಾಗಿ ಈ ಎಲ್ಲ ಬೆಳವಣಿಗೆಗಳು ಸಂಭವಿಸಲಿವೆ.

ಮೂಲ ಮಾಹಿತಿ- ಜ್ಯೋತಿಷಿ ವೇಣುಸ್ವಾಮಿ

ನಿರೂಪಣೆ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts