ಶ್ರೀಕರ ನಾರಾಯಣ ಧಾರ್ಮಿಕ ಪ್ರತಿಷ್ಠಾನದಿಂದ ಆರ್ ಆರ್ ನಗರ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಅಖಂಡ ಮಹಾಗಣಪತಿ ಹೋಮ

A photo showing Purohit Manjunath N Bharadwaj performing the Akhanda Maha Ganapathi Homa at the Shirdi Sai Baba Mandir premises in Bangalore. He is seated on the floor, surrounded by ceremonial items like a metal bucket, flowers, and a brass pot, while placing offerings into a square fire pit from which smoke is rising. He is wearing a light mint-green traditional attire and has a watch on his left wrist.
ಬೆಂಗಳೂರಿನ ಆರ್ ಆರ್ ನಗರದಲ್ಲಿನ ಶಿರಡಿ ಸಾಯಿ ಬಾಬ ಮಂದಿರದ ಆವರಣದಲ್ಲಿ ಅಖಂಡ ಮಹಾಗಣಪತಿ ಹೋಮವನ್ನು ನೆರವೇರಿಸುತ್ತಿರುವ ಮಂಜುನಾಥ್ ಎನ್. ಭಾರದ್ವಾಜ್.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್. ನಗರ) ಇರುವ ಶಿರಡಿ ಸಾಯಿ ಬಾಬ ಮಂದಿರ ಪ್ರಾಂಗಣದಲ್ಲಿ ಅಖಂಡ ಮಹಾಗಣಪತಿ ಹೋಮವನ್ನು ನಡೆಸುತ್ತಾ ಬರಲಾಗುತ್ತಿದೆ. ನಿತ್ಯವೂ ಗಣಹೋಮ ನಡೆಯುತ್ತಿದ್ದು, ಭಕ್ತಾದಿಗಳು ಸೇವಾ ಸಂಕಲ್ಪವನ್ನು ನೀಡಿ, ಇದರಲ್ಲಿ ಪಾಲ್ಗೊಳ್ಳುತ್ತಾ ಇದ್ದಾರೆ. ವೃತ್ತಿಯಿಂದ ಪುರೋಹಿತರೂ ಆದಂಥ ಮಂಜುನಾಥ್ ಎನ್. ಭಾರದ್ವಾಜ್ ಅವರು ಈ ಕೈಂಕರ್ಯದ ಸಂಕಲ್ಪವನ್ನು ಮಾಡಿದ್ದು, ಈ ಬಗ್ಗೆ ಶ್ರೀಗುರುಭ್ಯೋ.ಕಾಮ್ ಜೊತೆಗೆ ಮಾತನಾಡಿದರು.

ನಿತ್ಯ ಗಣಹೋಮದ ಮಹತ್ವ ಮತ್ತು ವಿವಿಧ ಸಮಸ್ಯೆಗಳಿಗೆ ಪರಿಹಾರ

“ಕೇತು ಗ್ರಹಕ್ಕೆ ಸಂಬಂಧಿಸಿದ ದೋಷಗಳು ಇರುವವರಿಗೆ ಗಣಪತಿಯ ಅನುಗ್ರಹ ವಿಶೇಷವಾಗಿ ಆಗಬೇಕು. ಇನ್ನು ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳ ನಿವಾರಣೆಗೆ, ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ, ವ್ಯಾಪಾರ- ವ್ಯವಹಾರದಲ್ಲಿ ಏಳ್ಗೆಗೆ, ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕೊರತೆ ಎದುರಾಗಿದ್ದಲ್ಲಿ ಅದರ ನಿವಾರಣೆಗೆ, ವಿದೇಶಗಳಲ್ಲಿ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿದ್ದು ಅದರಲ್ಲಿ ಅಡೆತಡೆಗಳು ಬರುತ್ತಾ ಇದ್ದಲ್ಲಿ ಅದರ ನಿವಾರಣೆಗೆ, ಆರೋಗ್ಯ ಸಮಸ್ಯೆಯಿಂದ ಹೊರಬರುವುದಕ್ಕೆ, ಸಾಲ ಬಾಧೆಯಿಂದ ಮುಕ್ತರಾಗುವುದಕ್ಕೆ, ಮನೆ ನಿರ್ಮಾಣ, ಸೈಟು ಖರೀದಿ, ಉದ್ಯೋಗ ಬದಲಾವಣೆಗೆ, ಉದ್ಯೋಗ ಜೀವನ ಆರಂಭದ ಹಂತದಲ್ಲಿ ಇರುವವರಿಗೆ ಹೀಗೆ ಯಾವುದೇ ಸಮಸ್ಯೆಗಳಿಗೆ ಮಹಾ ಗಣಪತಿ ಹೋಮದಿಂದ ಅನುಗ್ರಹ ಆಗುತ್ತದೆ ಎಂಬುದಕ್ಕೆ ಶಾಸ್ತ್ರ ಪ್ರಮಾಣಗಳಿವೆ. 

ದುರ್ಗಾ ದೀಪ ನಮಸ್ಕಾರ ಪೂಜೆ ಹಿನ್ನೆಲೆ, ಮಹತ್ವ, ಜ್ಯೋತಿಷ್ಯದ ವಿಶೇಷ ಪ್ರಯೋಜನಗಳು

“ಆ ಕಾರಣದಿಂದ ನಿತ್ಯವೂ (ಅಖಂಡವಾಗಿ) ಮಹಾಗಣಪತಿ ಹೋಮವನ್ನು ನಡೆಸುತ್ತಾ ಇದ್ದೇವೆ. ಸೇವೆಗೆ ಕೊಡಬೇಕು ಅಂದುಕೊಳ್ಳುವವರು, ಈ ಹೋಮದಲ್ಲಿ ತಮ್ಮದೊಂದು ಕಾಣಿಕೆ ಇರಲಿ ಎಂದುಕೊಳ್ಳುವವರು ಕೊಡಬಹುದು. ಹಾಗಂತ ಕಡ್ಡಾಯ ಏನಲ್ಲ. ಸಂಕಲ್ಪದ ಸಮಯಕ್ಕೆ ಇಲ್ಲಿಗೆ ಬಂದು, ತಮ್ಮ ಹೆಸರನ್ನು ಸಂಕಲ್ಪಕ್ಕೆ ಕೊಡಬಹುದು. ಪೂರ್ಣಾಹುತಿ ಮುಗಿಯುವ ತನಕ ಇಲ್ಲಿಯೇ ಇದ್ದಲ್ಲಿ ಹೋಮ ಪ್ರಸಾದವನ್ನಂತೂ ನೀಡಿಯೇ ನೀಡುತ್ತೇವೆ. ಆಸ್ತಿಕ ಬಂಧುಗಳು ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬಹುದು. 

ಹೋಮದಲ್ಲಿ ಭಕ್ತರು ಪಾಲ್ಗೊಳ್ಳುವುದು ಹೇಗೆ ಮತ್ತು ಸೇವಾ ವಿವರಗಳು

“ಇನ್ನೂ ಹೆಚ್ಚಿನ ಮಾಹಿತಿ ಬೇಕು ಹಾಗೂ ತಾವು ಇದರಲ್ಲಿ ಹೇಗೆ ಸೇವೆ ಸಲ್ಲಿಸಬಹುದು ಎಂದು ತಿಳಿದುಕೊಳ್ಳಲು ಬಯಸುವವರು 9980 300790 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಇನ್ನು ಈ ವಿಚಾರವು ಹೆಚ್ಚೆಚ್ಚು ಜನರನ್ನು ತಲುಪಬೇಕು. ಆ ಮಹಾಗಣಪತಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂಬ ಉದ್ದೇಶ ನಮ್ಮದು. ಇನ್ನೂ ಕೆಲವರು ತಾವು ಗಣಪತಿ ಹೋಮವನ್ನು ಮಾಡಿಸಬೇಕು ಎಂದುಕೊಂಡು, ಎಲ್ಲಿ- ಹೇಗೆ ಮಾಡಿಸಬೇಕು ಎಂದು ಗೊತ್ತಿರುವುದಿಲ್ಲ. ಅಂಥವರು ಸಹ ಈ ಮೂಲಕ ಹೋಮ ಮಾಡಿಸಬಹುದು. ಒಂದು ದಿನದ ಹೋಮಕ್ಕೆ ಆಗಬಹುದಾದ ಸಂಪೂರ್ಣ ವೆಚ್ಚವನ್ನು ವಹಿಸಿಕೊಳ್ಳಬಹುದು ಅಥವಾ ಹೋಮಕ್ಕಾಗಿ ಬಳಸುವಂಥ ಪದಾರ್ಥಗಳ ಪೈಕಿ ತಮ್ಮಿಂದ ಸಾಧ್ಯವಾದ ಸೇವೆಯನ್ನು ನೀಡಬಹುದು.

“ಶ್ರೀಕರ ನಾರಾಯಣ ಧಾರ್ಮಿಕ ಪ್ರತಿಷ್ಠಾನ ಎಂದು ಮಾಡಿಕೊಂಡು, ಅದರ ಅಡಿಯಲ್ಲಿ ನಾವು ಈ ಅಖಂಡ ಮಹಾಗಣಪತಿ ಹೋಮವನ್ನು ನಡೆಸುತ್ತಾ ಬರುತ್ತಿದ್ದೇವೆ. ಇನ್ನು ಇದೇ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನಾಮಕರಣ, ನಿಶ್ಚಿತಾರ್ಥ, ಉಪನಯನ, ಆಯುಷ್ಯ ಶಾಂತಿ ಸೇರಿ ವಿವಿಧ ಸಮಾರಂಭ ಆಯೋಜಿಸಲು ಬೇಕಾದ ಎಲ್ಲ ಅನುಕೂಲಗಳು ಇವೆ. ಸುಮಾರು ಮುನ್ನೂರು ಜನರು ಪಾಲ್ಗೊಳ್ಳಬಹುದಾದಂಥ ಕಾರ್ಯಕ್ರಮವನ್ನು ಸಹ ಇಲ್ಲಿ ಮಾಡುವ ಅನುಕೂಲ ಇದೆ. ಊಟ- ತಿಂಡಿ, ಪುರೋಹಿತರ ವ್ಯವಸ್ಥೆ ಸಕಲವೂ ಲಭ್ಯ ಇವೆ. ಈ ಅನುಕೂಲವನ್ನು ಬಳಸಿಕೊಳ್ಳಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ,” ಎಂದು ಅವರು ಹೇಳಿದರು.

Kaal Sarp Yoga: ಕಾಳಸರ್ಪ ಯೋಗ ಅಂದರೇನು, ಎಷ್ಟು ವಿಧಗಳಿವೆ, ಅದರ ಪರಿಣಾಮಗಳ ವಿವರ ಇಲ್ಲಿದೆ

ಪುರೋಹಿತ ಮಂಜುನಾಥ್ ಎನ್. ಭಾರದ್ವಾಜ್ ಅವರ ಸಂಪರ್ಕ ವಿವರಗಳು

ಮತ್ತೊಮ್ಮೆ ಸಂಪರ್ಕ ಸಂಖ್ಯೆಯನ್ನು ನೀಡುತ್ತಿದ್ದೇವೆ,  9980 300790 ಹಾಗೂ 91106 16295. ಈ ಎರಡೂ ಸಂಖ್ಯೆಯ ಮೂಲಕ ಮಂಜುನಾಥ್ ಅವರನ್ನು ಸಂಪರ್ಕಿಸಬಹುದು. ದಶಾಸಂಧಿ ಶಾಂತಿ, ನವಗ್ರಹ ಶಾಂತಿ, ದುರ್ಗಾ ದೀಪ ನಮಸ್ಕಾರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ, ವಹಿಸಿಕೊಳ್ಳುವುದಕ್ಕೆ ಬೇಕಾದ ಸಕಲ ವ್ಯವಸ್ಥೆಯೂ ಇದೆ.

ಶಿರಡಿ ಸಾಯಿಬಾಬ ಮಂದಿರ ಲೊಕೇಷನ್: shri Sai Mandhira
https://maps.google.com/?q=12.914330,77.511421

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts