ಇದೇ ಜೂನ್ ತಿಂಗಳ 2ನೇ ತಾರೀಕಿಗೆ ಗುರು ಗ್ರಹ ಮಿಥುನ ರಾಶಿಯಿಂದ ಕರ್ಕಾಟಕಕ್ಕೆ ಪ್ರವೇಶ ಮಾಡುತ್ತದೆ. ಹೀಗೆ ಗುರು ಸಂಚಾರದಿಂದ ಶುಭಾಶುಭ ಫಲಗಳು ಏನೇ ಇದ್ದರೂ ಶುಭ ಫಲದ ಸಂಪೂರ್ಣ ಪ್ರಾಪ್ತಿಗೆ ಹಾಗೂ ಅಶುಭ ಫಲದ ಪ್ರಮಾಣ ತಗ್ಗುವುದಕ್ಕೆ ಗುರು ಅನುಗ್ರಹ ಬಹಳ ಮುಖ್ಯ. ಆದ್ದರಿಂದಲೇ ಇದೇ ಜೂನ್ ನಲ್ಲಿ ಅಧ್ಯಾತ್ಮ ಚಿಂತಕರೂ- ದೇವೀ ಉಪಾಸಕರೂ ಆದ ಮಂಜುನಾಥ್ ಅವರು ವೇದೋಕ್ತವಾಗಿ “ಮಹಾ ಬೃಹಸ್ಪತಿ ಯಾಗ”ವನ್ನು ಆಯೋಜಿಸುತ್ತಿದ್ದಾರೆ.
ಗುರುವಿಗೆ ಕರ್ಕಾಟಕ ಉಚ್ಚ ಸ್ಥಿತಿ ಆಗುತ್ತದೆ. ಕಾಲ ಪುರುಷನ ನಾಲ್ಕನೇ ಮನೆಯಲ್ಲಿ, ಗುರು ಗ್ರಹ ಉಚ್ಚ ಸ್ಥಿತಿ ತಲುಪುವುದರಿಂದ ದ್ವಾದಶ ರಾಶಿಗಳ ಮೇಲೆ ಏನೇನು ಫಲ ಎಂಬುದನ್ನು ತಿಳಿಯುವುದಕ್ಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://srigurubhyo.com/category/planet-predictions/
ಗೋಚಾರದಲ್ಲಿ ಗುರು ಗ್ರಹದ ಅಶುಭ ಸ್ಥಾನದ ಫಲಗಳು ಎದುರಾಗುವಂಥ ರಾಶಿಗಳವರು ಹಾಗೂ ಅದೇ ರೀತಿ ಜನ್ಮ ಜಾತಕದಲ್ಲಿ ಗುರು ಗ್ರಹದ ದೋಷ ಇರುವವರು ಈ ಯಾಗಕ್ಕೆ ಸಂಕಲ್ಪ ಮಾಡಿಸಬಹುದು. ಅಷ್ಟೇ ಅಲ್ಲ, ಗುರು ಗ್ರಹದ ಸಂಪೂರ್ಣ ಶುಭ ಫಲದ ಅನುಭ ಪಡೆಯುವುದಕ್ಕೆ ಸಹ ಈ ಯಾಗವು ಸಹಾಯ ಮಾಡುತ್ತದೆ. ಇದರ ಜೊತೆಗೆ ಜನ್ಮ ಜಾತಕದಲ್ಲಿನ ಗುರು ಗ್ರಹ ದೋಷ ಪರಿಹಾರಕ್ಕೂ ಇದು ಅತ್ಯುತ್ತಮವಾದ ಅವಕಾಶ.
ಕರ್ಮವಿಪಾಕ ಸಂಹಿತಾ ಮತ್ತು ದಾರಿದ್ರ್ಯ ಮುಕ್ತಿ: ಶಾಸ್ತ್ರಗಳು ಹೇಳುವ ಗುಟ್ಟುಗಳೇನು?
ಇನ್ನು ಈ ಯಾಗದ ಸಮಯದಲ್ಲಿಯೇ ‘ಕಲಿಯುಗ ಶುಕಾಚಾರ್ಯರು’ ಎಂದೇ ಹೆಸರಾದ ಸುವಿದ್ಯೇಂದ್ರ ತೀರ್ಥರಿಗೆ ‘ಗುರು ಕಾಣಿಕೆ’ಯನ್ನು ಸಮರ್ಪಣೆ ಮಾಡುವ ಸಂಕಲ್ಪ ಸಹ ಮಾಡಲಾಗಿದೆ. ಗುರು ಗ್ರಹದ ಅನುಗ್ರಹಕ್ಕೆ ಗುರುಗಳ ಆರಾಧನೆಯೂ ಒಂದು ಮಾರ್ಗವಾಗುವುದು ಹೌದು. ಆದ್ದರಿಂದಲೇ ಈ ಸಂಕಲ್ಪ ಮಾಡಲಾಗಿದೆ.
ಮೇ ಹದಿನೇಳರಿಂದ ಅಧಿಕ ಜ್ಯೇಷ್ಠ ಮಾಸ ಆರಂಭವಾಗಲಿದ್ದು, ಜೂನ್ ಹದಿನೈದನೇ ತಾರೀಕಿನ ತನಕ ಇರಲಿದೆ. ‘ಅಧಿಕಸ್ಯ ಅಧಿಕ ಫಲಂ’ ಎಂಬ ಮಾತಿನಂತೆ, ಈ ಅವಧಿಯಲ್ಲಿ ಮಾಡುವ ದೇವತಾ ಕಾರ್ಯಗಳು, ದಾನ- ಧರ್ಮಗಳಿಗೆ ಹೆಚ್ಚಿನ ಫಲವೂ ಹೌದು.
https://srigurubhyo.com/adhika-jyeshtha-masa-2026-significance-rules-and-rituals-kannada/
ವೇದಾಧ್ಯಯನ ಮಾಡಿ, ನಿತ್ಯಾನುಷ್ಠಾನದಲ್ಲಿ ಇರುವ ಕೆಲವು ವಿಪ್ರರಿಗೆ ಈ ಯಾಗದ ಸಂದರ್ಭದಲ್ಲಿಯೇ ‘ಘೃತ ದಾನ’ (ತುಪ್ಪದ ದಾನ) ಸಹ ಮಾಡಲಾಗುವುದು. ಇಷ್ಟೇ ಅಲ್ಲದೆ, ಇತರ ಪುಣ್ಯಕರ ಹಾಗೂ ಪ್ರಮಾಣ ವಚನಗಳು ಇರುವಂಥ ಹೋಮ- ಗುರು ಸಮರ್ಪಣೆ- ದಾನ ಇತ್ಯಾದಿಗಳನ್ನು ಮಾಡುವುದಕ್ಕೆ ಸಂಕಲ್ಪ ಮಾಡಲಾಗಿದೆ ಎಂದು ಮಂಜುನಾಥ್ ಅವರು ‘ಶ್ರೀಗುರುಭ್ಯೋ.ಕಾಮ್’ಗೆ ಮಾಹಿತಿ ನೀಡಿದ್ದಾರೆ.
ಕರ್ಕಾಟಕ ರಾಶಿಯಲ್ಲಿ ಗುರು ಗ್ರಹದ ಸಂಚಾರ ವೇಳೆ ಬೃಹಸ್ಪತಿ ಶಾಂತಿಯ ಅಗತ್ಯ ಇರುವ ರಾಶಿಗಳ ವಿವರ ಹೀಗಿದೆ:
ಕರ್ಕಾಟಕ- ಜನ್ಮ ಗುರು
ಸಿಂಹ- ವ್ಯಯ ಗುರು
ಧನುಸ್ಸು- ಅಷ್ಟಮ ಗುರು
ಕುಂಭ- ಷಷ್ಠ್ಯ ಗುರು
ಸಿಂಹ ರಾಶಿಯಲ್ಲಿ ಗುರು ಗ್ರಹದ ಸಂಚಾರ ವೇಳೆ ಬೃಹಸ್ಪತಿ ಶಾಂತಿಯ ಅಗತ್ಯ ಇರುವ ರಾಶಿಗಳ ವಿವರ ಹೀಗಿದೆ:
ಸಿಂಹ- ಜನ್ಮ ಗುರು
ಕನ್ಯಾ- ವ್ಯಯ ಗುರು
ಮಕರ- ಅಷ್ಟಮ ಗುರು
ಮೀನ- ಷಷ್ಠ್ಯ ಗುರು
ಶ್ರೀದಧಿವಾಮನ ಸ್ತೋತ್ರಮ್: ಮನೆಯಲ್ಲಿ ಸದಾ ಅನ್ನ, ಐಶ್ವರ್ಯ ತುಂಬಿರಲು ಈ ಸಣ್ಣ ಸ್ತೋತ್ರ ದಿನವೂ ಪಠಿಸಿ
ಈ ಜಪ ಸಹಿತವಾದ ಹೋಮ, ಗುರುಗಳ ಆರಾಧನೆ ಸೇರಿ ಅಧಿಕ ಜ್ಯೇಷ್ಠ ಮಾಸದ ಕೆಲವು ದಾನ- ಧರ್ಮಗಳನ್ನು ಆಯೋಜನೆಗೆ ಆಸ್ತಿಕ ಬಂಧುಗಳು ಕೈ ಜೋಡಿಸಿದಲ್ಲಿ ಗುರು ಅನುಗ್ರಹ ಮತ್ತು ಪುಣ್ಯ ಸಂಚಯನ ಎರಡೂ ಸಾಧ್ಯವಿದೆ. ಈ ಕಾರ್ಯದಲ್ಲಿ ಪಾಲ್ಗೊಳ್ಳುವುದು ಹೇಗೆ, ಕಾರ್ಯಕ್ರಮದ ಸಂಪೂರ್ಣ ಮಾಹಿತಿಗೆ ಮಂಜುನಾಥ್ ಭಾರದ್ವಾಜ್ ಮೊಬೈಲ್ ಫೋನ್ ಸಂಖ್ಯೆ 9980 300790 ಸಂಪರ್ಕಿಸಿ.
ಮಂಜುನಾಥ್ ಎನ್. ಭಾರದ್ವಾಜ್ ಪರಿಚಯ
ಮಂಜುನಾಥ್ ಎನ್. ಭಾರದ್ವಾಜ್ ಅವರು ಹುಟ್ಟಿದ್ದು ಮದನಪಲ್ಲಿಯಲ್ಲಿ. ಆ ನಂತರ ಬಾಲ್ಯ ಹಾಗೂ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ. ಅವರ ಅಧ್ಯಾತ್ಮದ ಚಿಂತನೆ, ಆಲೋಚನೆ ಹಾಗೂ ವೇದ ಕಲಿಕೆ ಇವೆಲ್ಲವೂ ರೂಪುಗೊಂಡಿದ್ದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ. ಅಲ್ಲಿ ಶಿಕ್ಷಣ ಪಡೆದವರು ಪೇಜಾವರ ಮಠದ ಪೀಠಾಧಿಪತಿಗಳಾಗಿದ್ದ ವಿಶ್ವೇಶ ತೀರ್ಥರ ಕಾರುಣ್ಯ, ಅನುಗ್ರಹದಿಂದ ಪೌರೋಹಿತ್ಯ ವೃತ್ತಿಯಲ್ಲಿ ತಮ್ಮದೇ ಆದ ನೆಲೆಯನ್ನು ಕಂಡುಕೊಂಡಿರುವವರು. ದುರ್ಗಾ ದೀಪ ನಮಸ್ಕಾರ ಪೂಜೆಯನ್ನು ಮಂಜುನಾಥ್ ಅವರಿಂದ ಮಾಡಿಸಿದಲ್ಲಿ ಆ ದೈವಿಕವಾದ ಅನುಭವವೇ ಬೇರೆ ಎಂದು ಸ್ಮರಿಸುವವರು ಅನೇಕರು. ಇಲ್ಲಿಯ ತನಕ ಸಾವಿರಕ್ಕೂ ಹೆಚ್ಚು ದುರ್ಗಾ ದೀಪ ನಮಸ್ಕಾರ ಪೂಜೆಯನ್ನು ಮಾಡಿಸಿರುವ ಅವರ ಬಳಿ ಜ್ಯೋತಿಷ್ಯ ಸಲಹೆಗಾಗಿ ಕೂಡ ಜನರು ಬರುವುದುಂಟು.
ಲೇಖನ- ಶ್ರೀನಿವಾಸ ಮಠ









