ಸೋದೆ ಕ್ಷೇತ್ರದಲ್ಲಿ ಅಧಿಕ ಮಾಸಕ್ಕೆ ‘ಅಪೂಪ ದಾನ’ ಸೇವೆಗೆ ಭಕ್ತರಿಗೆ ಅವಕಾಶ

A traditional brass plate stacked with 33 Apoopa deep-fried sweets along with a small golden idol and a copper kalasha inside the ancient Sode Vadiraja Mutt temple premises.
ಸೋದೆ ಶ್ರೀವಾದಿರಾಜ ಮಠದಲ್ಲಿ ಅಧಿಕ ಮಾಸದ ನಿಮಿತ್ತ ಹಮ್ಮಿಕೊಳ್ಳಲಾಗಿರುವ ವಿಶೇಷ 'ಅಪೂಪ ದಾನ' ಸೇವೆ ಪ್ರಾತಿನಿಧಿಕ ಚಿತ್ರ.

ಮೇ 17ನೇ ತಾರೀಕಿನಿಂದ ಅಧಿಕ ಜ್ಯೇಷ್ಠ ಮಾಸದ ಆರಂಭವಾಗಿದೆ. ಜೂನ್ 15ರ ತನಕ ಅಧಿಕ ಮಾಸ ಇರುತ್ತದೆ. ಈ ಸಂದರ್ಭದಲ್ಲಿ ಅಪೂಪ ದಾನ ಮಾಡುವುದು ಬಹಳ ಶ್ರೇಷ್ಠವಾದದ್ದು. ಇದಕ್ಕೆ ಸಂಬಂಧಿಸಿದಂತೆ ಸೋದೆ ವಾದಿರಾಜರ ಮಠದಿಂದ ಒಂದೊಳ್ಳೆ ಅವಕಾಶ ನೀಡಲಾಗಿದೆ. ಮಠದ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ಇದ್ದು, ಅದರಲ್ಲಿ ಇರುವ ಒಕ್ಕಣೆ ಹೀಗಿದೆ: ಸನಾತನ ಧರ್ಮದಲ್ಲಿ ಅಧಿಕ ಮಾಸಕ್ಕೆ (ಪುರುಷೋತ್ತಮ ಮಾಸ) ಅತ್ಯಂತ ವಿಶೇಷ ಪ್ರಾಶಸ್ತ್ಯವಿದೆ. ಈ ಪವಿತ್ರ ಕಾಲದಲ್ಲಿ ಮಾಡುವ ದಾನ, ಧರ್ಮ ಹಾಗೂ ಸೇವೆಗಳು ಅನಂತ ಫಲವನ್ನು ನೀಡುತ್ತವೆ ಎಂಬ ದೃಢವಾದ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ,  ಸೋದೆ ಶ್ರೀವಾದಿರಾಜ ಮಠವು ಭಕ್ತಾದಿಗಳಿಗಾಗಿ ವಿಶೇಷ ಸೇವಾ ಸೌಲಭ್ಯಗಳನ್ನು ಹಮ್ಮಿಕೊಂಡಿದೆ.

1. ಅಧಿಕ ಮಾಸದ ಮಹಿಮೆ ಮತ್ತು ‘ಅಪೂಪ ದಾನ’

ಶಾಸ್ತ್ರಗಳ ಪ್ರಕಾರ, ಅಧಿಕ ಮಾಸದಲ್ಲಿ ಬೆಲ್ಲ ಮತ್ತು ತುಪ್ಪದಿಂದ ತಯಾರಿಸಿದ ‘ಮೂವತ್ತಮೂರು ಅಪೂಪ’ (ಅತಿರಸ)ಗಳನ್ನು ಕಂಚಿನ ಪಾತ್ರೆಯಲ್ಲಿಟ್ಟು, ಸುವರ್ಣ ಸಹಿತವಾಗಿ ಯೋಗ್ಯರಾದ ಬ್ರಾಹ್ಮಣರಿಗೆ ದಾನ ಮಾಡುವುದು ಅತ್ಯಂತ ಶ್ರೇಷ್ಠ.

  • ಭೂದಾನದ ಫಲ: ಈ ದಾನವು ಭೂದಾನಕ್ಕೆ ಸಮಾನವಾದ ಮಹಾ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ.
  • ಪುರಾಣೋಕ್ತಿ: ಅಪೂಪಗಳಲ್ಲಿ (ಅತಿರಸ) ಎಷ್ಟು ರಂಧ್ರಗಳಿವೆಯೋ, ಅಷ್ಟು ವರ್ಷಗಳ ಕಾಲ ಸ್ವರ್ಗಲೋಕದಲ್ಲಿ ವಾಸಿಸುವ ಪುಣ್ಯ ಭಕ್ತರಿಗೆ ಲಭಿಸುತ್ತದೆ ಎಂಬ ಉಲ್ಲೇಖವಿದೆ.

ಅಧಿಕ ಮಾಸ 2026: ಯಾವ ದಾನ ಮಾಡಿದರೆ ಏನು ಫಲ? ಅತಿರಸ ದಾನದ ಮಹತ್ವ ಮತ್ತು ಪೂರ್ಣ ಮಾಹಿತಿ ಇಲ್ಲಿದೆ

2. ಸೋದೆ ಕ್ಷೇತ್ರದಲ್ಲಿ ವಿಶೇಷ ಸೇವೆಗಳ ವಿವರ

ಶ್ರೀರಮಾತ್ರಿವಿಕ್ರಮ ದೇವರು ಹಾಗೂ ಶ್ರೀಗುರುರಾಜರ ಸನ್ನಿಧಿಯಾದ ಸೋದೆ ಕ್ಷೇತ್ರದಲ್ಲಿ ಮೇ 17 ರಿಂದ ಜೂನ್ 15ರ ವರೆಗೆ ಅಧಿಕ ಮಾಸದ ಪರ್ವಕಾಲದ ನಿಮಿತ್ತ ಭಕ್ತರಿಗೆ ಈ ಕೆಳಗಿನ ಸೇವೆಗಳನ್ನು ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ:

ಸೇವೆಯ ಹೆಸರು ಸೇವಾ ಕಾಣಿಕೆ (₹)
ಅಪೂಪ ದಾನ ₹ 3,333
ಅಪೂಪ ಸಮರ್ಪಣೆ ₹ 333

3. ಸೇವೆ ಸಲ್ಲಿಸುವ ಸುಲಭ ವಿಧಾನ

ದೂರದ ಊರುಗಳಲ್ಲಿರುವ ಭಕ್ತರ ಅನುಕೂಲಕ್ಕಾಗಿ ಮಠದ ವತಿಯಿಂದ ಸುಲಭವಾದ ಡಿಜಿಟಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ:

  • ವಾಟ್ಸಾಪ್ ಮೂಲಕ ಬುಕಿಂಗ್: ಸೇವೆ ಮಾಡಿಸುವ ಭಕ್ತರು ತಮ್ಮ ಹೆಸರು, ನಕ್ಷತ್ರ ಮತ್ತು ವಿಳಾಸದ ಸಂಪೂರ್ಣ ವಿವರಗಳನ್ನು ವಾಟ್ಸಾಪ್ (WhatsApp) ಮೂಲಕ 9483357005 ಸಂಖ್ಯೆಗೆ ಕಳುಹಿಸಬಹುದು.
  • ಪ್ರತ್ಯಕ್ಷ ಸೇವೆ: ಅಧಿಕ ಮಾಸದ ಅವಧಿಯಲ್ಲಿ ಭಕ್ತರು ನೇರವಾಗಿ ಸೋದೆ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರತ್ಯಕ್ಷವಾಗಿಯೂ ಅಪೂಪ ದಾನವನ್ನು ನೆರವೇರಿಸಬಹುದಾಗಿದೆ.

ಹಣ ಪಾವತಿಗೆ ಕ್ಯೂಆರ್ ಕೋಡ್ ಲಿಂಕ್- https://www.sodematha.in/index.html

ಪುರುಷೋತ್ತಮ ಮಾಸದಲ್ಲಿ ಮೊರದ ಬಾಗಿನ ನೀಡುವ ಕ್ರಮ ಹೇಗೆ? ಇಲ್ಲಿದೆ ಡಾ. ಭೀಮಸೇನಾಚಾರ್ಯ ಅತನೂರು ಅವರ ವಿಶೇಷ ಮಾಹಿತಿ

ವಿಶೇಷ ಸೂಚನೆ: ಪವಿತ್ರವಾದ ಈ ಪುರುಷೋತ್ತಮ ಮಾಸದಲ್ಲಿ ಗುರುರಾಜರ ಸನ್ನಿಧಿಯಲ್ಲಿ ವಿಶೇಷ ಸೇವೆ ಸಲ್ಲಿಸಿ, ಶ್ರೀಹರಿ-ವಾಯು-ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಲು ಇದು ಅತ್ಯಂತ ಸುಸಂದರ್ಭವಾಗಿದೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts