ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಸೇವಾ ವಿವರ ಇಲ್ಲಿದೆ

Sri Raghavendra Swamy Matha Mantralaya 355th Aradhana Mahotsava 2026 banner showing dates from August 27 to September 2
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ - 2026. ಆಗಸ್ಟ್ 27 ರಿಂದ ಸೆಪ್ಟೆಂಬರ್ 02ರವರೆಗೆ ನಡೆಯುವ ಈ ಮಹೋತ್ಸವದಲ್ಲಿ ಆನ್‌ಲೈನ್ ಮೂಲಕ ಸೇವೆಗಳನ್ನು ಕಾಯ್ದಿರಿಸಿ.

ಮಂತ್ರಾಲಯವು ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಸಜ್ಜಾಗಿದೆ. ಈ ಮಹೋತ್ಸವವು ಆಗಸ್ಟ್ 27 ರಿಂದ ಸೆಪ್ಟೆಂಬರ್ 02, 2026 ರವರೆಗೆ ನಡೆಯಲಿದ್ದು, ಭಕ್ತರಿಗೆ ವಿಶೇಷ ಪೂಜೆ ಮತ್ತು ಸೇವೆಗಳಲ್ಲಿ ಪಾಲ್ಗೊಳ್ಳಲು ಇದು ಅಪೂರ್ವ ಅವಕಾಶವಾಗಿದೆ.

ಆರಾಧನಾ ಮಹೋತ್ಸವದ ವೈಶಿಷ್ಟ್ಯಗಳು

ಈ ಆರಾಧನಾ ಮಹೋತ್ಸವದಲ್ಲಿ ಅನ್ನದಾನ, ಅಲಂಕಾರ, ರಥೋತ್ಸವ ಮತ್ತು ವಿವಿಧ ವಿಶೇಷ ಸೇವೆಗಳನ್ನು ಆಯೋಜಿಸಲಾಗಿದೆ. ಭಕ್ತರು ಅಧಿಕೃತ ಜಾಲತಾಣದ ಮೂಲಕ ಈ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಮತ್ತು ಡಿಜಿಟಲ್ ರಶೀದಿಯನ್ನು ಪಡೆಯಬಹುದು.

ಲಭ್ಯವಿರುವ ಪ್ರಮುಖ ಸೇವೆಗಳು

ಭಕ್ತರು ತಮ್ಮ ಇಚ್ಛೆಯಂತೆ ವಿವಿಧ ಸೇವೆಗಳನ್ನು ಆರಿಸಿಕೊಳ್ಳಬಹುದು:

  • ಸಂಪೂರ್ಣ ಆರಾಧನಾ ಅನ್ನದಾನ ಸೇವೆ (3 ದಿನಗಳು): ₹ 10,00,000
  • ಒಂದು ದಿನದ ಆರಾಧನಾ ಅನ್ನದಾನ ಸೇವೆ: ₹ 3,00,000
  • ವಿಶೇಷ ಫಲಪಂಚಾಮೃತ ಸೇವೆ: ₹ 25,000
  • ಸಾಮೂಹಿಕ ಮಹಾ ರಥೋತ್ಸವ ಸೇವೆ (ಉತ್ತರಾರಾಧನೆ): ₹ 2,000
  • ಸಾಮೂಹಿಕ ಆರಾಧನಾ ಅನ್ನದಾನ ಸೇವೆ: ₹ 2,000
  • ಸಾಮೂಹಿಕ ಆರಾಧನಾ ಪುಷ್ಪಾಲಂಕಾರ ಸೇವೆ: ₹ 2,000
  • ಸಾಮೂಹಿಕ ಹಸ್ತೋದಕ ಸಹಿತ ಅನ್ನದಾನ: ₹ 1,000
  • ಮಧ್ಯಾರಾಧನಾ ಸಾಮೂಹಿಕ ವಿಶೇಷ ಫಲಪಂಚಾಮೃತ ಸೇವೆ: ₹500 (ಸೂಚನೆ: ಭಕ್ತರು ಯಾವುದೇ ಮೊತ್ತವನ್ನು ಆರಾಧನಾ ದಾನವಾಗಿ ನೀಡಲು ಅವಕಾಶವಿರುತ್ತದೆ.)

ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿಗಳು ಜನಿಸಿದ ಪುಣ್ಯಭೂಮಿ ಭುವನಗಿರಿ: ಈ ಕ್ಷೇತ್ರದ ವಿಶೇಷತೆಗಳೇನು?

ಗಮನಿಸಬೇಕಾದ ಪ್ರಮುಖ ಅಂಶಗಳು

  1. ನೋಂದಣಿ: ಸೇವೆಗಳನ್ನು ಆನ್‌ಲೈನ್ ಮೂಲಕ ಮಾತ್ರ ಕಾಯ್ದಿರಿಸಬೇಕು.
  2. ಭಾಷೆ: ಭಕ್ತರ ವಿವರಗಳು ಮತ್ತು ವಿಳಾಸವನ್ನು ಕಡ್ಡಾಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಮೂದಿಸಬೇಕು.
  3. ಪ್ರಸಾದ: ಪ್ರಸಾದವನ್ನು ಭಾರತದ ವಿಳಾಸಗಳಿಗೆ ಮಾತ್ರ ಕಳುಹಿಸಲಾಗುತ್ತದೆ.
  4. ಸಹಾಯವಾಣಿ: ಯಾವುದೇ ತಾಂತ್ರಿಕ ಸಮಸ್ಯೆಗಳು ಅಥವಾ ಪಾವತಿ ಸಂಬಂಧಿತ ಪ್ರಶ್ನೆಗಳಿದ್ದಲ್ಲಿ onlineservices@srsmatha.org ಗೆ ಇಮೇಲ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಮತ್ತು ಸೇವೆಗಳನ್ನು ಬುಕ್ ಮಾಡಲು ಮಠದ ಅಧಿಕೃತ ಜಾಲತಾಣವಾದ srsmatha.org ಅನ್ನು ಸಂಪರ್ಕಿಸಿ.

ರಾಯರ ವರ್ಧಂತಿ ವಿಶೇಷ: ಕಷ್ಟಗಳನ್ನು ನೀಗಿಸುವ ಶ್ರೀ ರಾಘವೇಂದ್ರ ಸ್ತೋತ್ರದ ಮಹತ್ವ ನಿಮಗೆ ಗೊತ್ತೇ?

ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಿತೀಯ (ಪೂರ್ವಾರಾಧನೆ), ತೃತೀಯ (ಮಧ್ಯಾರಾಧನೆ) ಹಾಗೂ ಚತುರ್ಥಿ (ಉತ್ತರಾರಾಧನೆ) ನಡೆಯುತ್ತದೆ. ಈ ವರ್ಷ ಆಗಸ್ಟ್ 29, 30 ಹಾಗೂ 31ನೇ ತಾರೀಕಿನಂದು ನಡೆಯುತ್ತದೆ. 

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts