ಶ್ರೀಕರ ನಾರಾಯಣ ಧಾರ್ಮಿಕ ಪ್ರತಿಷ್ಠಾನದಿಂದ ರಾಜರಾಜೇಶ್ವರಿ ನಗರ ಶಿರಡಿ ಸಾಯಿಬಾಬ ಮಂದಿರದಲ್ಲಿ ನಾಗರ ಪಂಚಮಿಯಂದು ಆಶ್ಲೇಷ ಬಲಿ ಪೂಜೆ

Priests performing Nagara Panchami serpent idol worship and Ashlesha Bali homa at a temple in Bangalore.
ರಾಜರಾಜೇಶ್ವರಿ ನಗರ ಶಿರಡಿ ಸಾಯಿಬಾಬ ಮಂದಿರದಲ್ಲಿ ನಾಗರ ಪಂಚಮಿ ಹಾಗೂ ಆಶ್ಲೇಷ ಬಲಿ ಪೂಜೆ ಕಾರ್ಯಕ್ರಮ. (ಪ್ರಾತಿನಿಧಿಕ ಚಿತ್ರ)

ಇದೇ ಆಗಸ್ಟ್ 17ನೇ ತಾರೀಕಿನ (17-8-2026) ಸೋಮವಾರದಂದು ‘ನಾಗರ ಪಂಚಮಿ’ ಇದೆ. ಈ ವಿಶೇಷ ಕಾಲದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಶಿರಡಿ ಸಾಯಿಬಾಬ ಮಂದಿರ ಪ್ರಾಂಗಣದಲ್ಲಿ ಆಶ್ಲೇಷ ಬಲಿ ಪೂಜೆ- ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶ್ರೀಕರ ನಾರಾಯಣ ಧಾರ್ಮಿಕ ಪ್ರತಿಷ್ಠಾನದಿಂದ ಈ ಕಾರ್ಯಕ್ರಮಗಳು ನಡೆಯುತ್ತಿದ್ದು, ಈಗಾಗಲೇ ಇಲ್ಲಿ ಕ್ಷಿಪ್ರ ಪ್ರಸಾದ ಅಖಂಡ ಮಹಾಗಣಪತಿ ಹೋಮವನ್ನು ನಿತ್ಯವೂ ನಡೆಸಲಾಗುತ್ತಿದೆ. ನಾಗರ ಪಂಚಮಿಯ ದಿನದಂದು ಆಯೋಜಿಸಿರುವ ಕಾರ್ಯಕ್ರಮಗಳಿಗಾಗಿ ಸೇವಾಕರ್ತರು ಕಾಣಿಕೆ ಸಮರ್ಪಣೆ ಮಾಡಬಹುದು ಹಾಗೂ ಸೇವಾ ಸಂಕಲ್ಪವನ್ನು ನೀಡಬಹುದು ಎಂದು ಅಧ್ಯಾತ್ಮ ಚಿಂತಕರು ಹಾಗೂ ಶ್ರೀಕರ ನಾರಾಯಣ ಧಾರ್ಮಿಕ ಪ್ರತಿಷ್ಠಾನದ ಪ್ರವರ್ತಕರೂ ಆದ ಮಂಜುನಾಥ್ ಎನ್. ಭಾರದ್ವಾಜ್ ಅವರು ‘ಶ್ರೀಗುರುಭ್ಯೋ.ಕಾಮ್’ಗೆ ತಿಳಿಸಿದ್ದಾರೆ.

“ನಾಗರ ಪಂಚಮಿಯ ದಿನದಂದು ನಾಗನ ಆರಾಧನೆ ಮಾಡುವುದು ಮತ್ತೂ ವಿಶೇಷವಾದದ್ದು. ಆದ್ದರಿಂದ ಆ ದಿನ ನಾಗನ ಶಿಲೆಗೆ ವಿಶೇಷ ಅಭಿಷೇಕ, ಆಶ್ಲೇಷ ಬಲಿ ಪ್ರಧಾನ ಪೂಜೆ, ಆಶ್ಲೇಷ ಬಲಿ ಹಾಗೂ ನಂತರದಲ್ಲಿ ಹೋಮವನ್ನು ಆಯೋಜಿಸಲಾಗಿದೆ. ವರ್ಷಾ ವರ್ಷ ಆಶ್ಲೇಷ ಪೂಜೆ ಹಾಗೂ ನಾಗಾರಾಧನೆ ಮಾಡುವುದರಿಂದ ಕುಟುಂಬಗಳಿಗೆ ಸರ್ವ ರೀತಿಯಲ್ಲೂ ಶ್ರೇಯಸ್ಸು ಹಾಗೂ ಏಳ್ಗೆ. ಇನ್ನೂ ಕೆಲವರಿಗೆ ಜಾತಕ ರೀತಿಯಾಗಿಯೂ ಆಶ್ಲೇಷ ಬಲಿ ಪೂಜೆ ಮಾಡಿಸುವಂತೆ ಜ್ಯೋತಿಷಿಗಳು ತಿಳಿಸುತ್ತಾರೆ. ಅಂಥವರು ಸಹ ನಾಗರ ಪಂಚಮಿಯ ಈ ವಿಶೇಷ ದಿನ ನಡೆಯುವ ವೇದೋಕ್ತ ರೀತಿಯ ಪೂಜೆ- ಪುರಸ್ಸರಾದಿಗಳಲ್ಲಿ ಪಾಲ್ಗೊಳ್ಳಬಹುದು. ಮತ್ತು ಅದೇ ಸಮಯಕ್ಕೆ ಸೇವಾ ಸಂಕಲ್ಪವನ್ನು ಸಹ ನೀಡಬಹುದು,” ಎಂದರು.

ಮನೆ ಕಟ್ಟುವಾಗ ನಾಗರ ಹಾದಿ ಮುಚ್ಚಿದರೆ ಅಪಾಯ ತಪ್ಪಿದ್ದಲ್ಲ! ಏನಿದು ಸರ್ಪ ವೀಥಿ ನಿರೋಧನ ದೋಷ?

ಇನ್ನೂ ಮುಂದುವರಿದು ಅವರು ಮಾತನಾಡಿ, “ಈಗಾಗಲೇ ಅಖಂಡ ಕ್ಷಿಪ್ರ ಪ್ರಸಾದ ಮಹಾಗಣಪತಿ ಹೋಮ ನಿತ್ಯವೂ ನಡೆಯುತ್ತಿದ್ದು, ನಾಗರ ಪಂಚಮಿಯಂದು ಸಹ ಮಹಾ ಗಣಪತಿ ಪೂಜೆ, ಗುರು ಪೂಜೆಯನ್ನೂ ಮಾಡುತ್ತೇವೆ. ನಾಗನ ಆರಾಧನೆ, ಗಣಪತಿ ಹೋಮ ಇವೆಲ್ಲವೂ ಒಂದು ಕಡೆಗೆ ನಡೆಯುವುದು ಸಹ ಒಂದು ಸುಕೃತ ಹಾಗೂ ಸೇವಾ ಕೈಂಕರ್ಯಕ್ಕೂ ಒಂದು ಅವಕಾಶ ಇರುವುದು ವಿಶೇಷ. ಯಾರಿಗೆ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಹಾಗೂ ಸೇವೆಗೆ ಕಾಣಿಕೆ ನೀಡಬೇಕು ಎಂಬ ಉದ್ದೇಶ ಇರುತ್ತದೋ ಅಂಥವರು 9980 300790 ಹಾಗೂ 91106 16295 ಈ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು,” ಎಂದು ಪ್ರಧಾನ ಪುರೋಹಿತರಾದ ಮಂಜುನಾಥ್ ಅವರು ತಿಳಿಸಿದ್ದಾರೆ.

ಜಾತಕದಲ್ಲಿ ಕುಜ ದೋಷ, ರಾಹು ದೋಷ, ಕೇತುವಿನ ದೋಷ, ಸರ್ಪ ದೋಷ ಸೇರಿದಂತೆ ವಿವಾಹ ದೋಷಗಳು, ಸಂತಾನ ದೋಷಗಳು, ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಂದ ಹೊರಬರುವುದಕ್ಕೆ ಸಹ ನಾಗನ ಆರಾಧನೆಯಿಂದ ಅನುಗ್ರಹ ಆಗುತ್ತದೆ. ಇನ್ನು ಪದೇಪದೇ ಮನೆಯ ಬಳಿ ಹಾವುಗಳು ಕಾಣಿಸಿಕೊಳ್ಳುವುದು, ಕನಸಿನಲ್ಲಿಯೂ ಸರ್ಪ ದರ್ಶನ ಹಾಗೂ ಹಾವು ಕಡಿತ ಆದಂತೆ ಕಾಣಿಸಿಕೊಳ್ಳುವುದು, ಸರ್ಪವೀಥಿ ನಿರೋಧನ ದೋಷ ಇರುವುದು ಮೊದಲಾದ ದೋಷಗಳಿಗೂ ನಾಗನ ಆರಾಧನೆ ಮಾಡುವುದು ಬಹಳ ಮುಖ್ಯ ಆಗುತ್ತದೆ. ಎಲ್ಲರಿಗೂ ಸುಬ್ರಹ್ಮಣ್ಯನ ಅನುಗ್ರಹ ಆಗಲಿ ಎಂದು ಮಂಜುನಾಥ್ ಹೇಳಿದರು.

ರಡಿ ಸಾಯಿಬಾಬ ಮಂದಿರ ಲೊಕೇಷನ್: shri Sai Mandhira
https://maps.google.com/?q=12.914330,77.511421

ಲೇಖನ- ಶ್ರೀನಿವಾಸ ಮಠ 

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts