ಜ್ಯೋತಿಷ್ಯ ಕಲಿಕೆಗೆ ಬಹಳ ಅನುಕೂಲ ಆಗುವಂಥ ಪ್ರಾಥಮಿಕ ಮಾಹಿತಿಯ ಭಂಡಾರವೇ ಇರುವ ಪುಸ್ತಕವೊಂದರ ಪರಿಚಯ ಮಾಡಿಕೊಡುತ್ತಿದ್ದೇನೆ. ಈ ಪುಸ್ತಕದ ಹೆಸರು ಜ್ಯೋತಿಷ್ಯ ಉದಯ ದೀಪಿಕಾ, ಇದರ ಲೇಖಕರು ಕೆ. ಪ್ರಕಾಶ್ ರಾವ್. ದಿ ಕರ್ನಾಟಕ ಅಕಾಡೆಮಿ ಫಾರ್ ಸ್ಟಡೀಸ್ ಅಂಡ್ ರೀಸರ್ಚ್ ಆನ್ ಅಸ್ಟ್ರಾಲಜಿ, ಬೆಂಗಳೂರು ಇಲ್ಲಿನ ಕಾರ್ಯದರ್ಶಿಗಳು.
ಇನ್ನು ಈ ಪುಸ್ತಕವನ್ನು ಶ್ರೀ ವಿನಾಯಕ ಪ್ರಕಾಶನದಿಂದ ಪ್ರಕಟಿಸಲಾಗಿದೆ. ಬೆಲೆ 180 ರೂಪಾಯಿ ಮಾತ್ರ. ಈ ಪುಸ್ತಕದಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳು ಇವೆ. ಪಂಚಾಂಗ ಅಂದರೇನು, ಕುಂಡಲಿ ವಿಧಾನಗಳು, ದ್ವಾದಶ ಲಗ್ನಗಳ ಭಾವಗಳಿಗೆ ಅಧಿಪತಿಗಳು, ಗೋಚಾರ ಫಲ, ವಿಂಶೋತ್ತರಿ ದಶಾ, ಇತರ ಮುಖ್ಯ ವಿಷಯಗಳು ಹೀಗೆ ಪ್ರಾಥಮಿಕವಾಗಿ ಜ್ಯೋತಿಷ್ಯ ಕಲಿಕೆಗೆ ಸಹಾಯ ಆಗುವ ಮುಖ್ಯ ಮಾಹಿತಿಗಳಿವೆ.
ಇನ್ನು ಈ ಪುಸ್ತಕದ ಜೊತೆಗೆ ಸಹಾಯ ಆಗುವಂಥ ಮಾಹಿತಿಯೊಂದನ್ನು ನೀಡಲಾಗುತ್ತಿದೆ.
ಜ್ಯೋತಿಷ್ಯ- ವಿಜ್ಞಾನದ ಸಮನ್ವಯಕಾರ: ಜ್ಯೋತಿರ್ವಿಜ್ಞಾನದ ಮಹಾಪುರುಷ ವರಾಹಮಿಹಿರ
ಅದೇನೆಂದರೆ, ಕರ್ನಾಟಕ ಜ್ಯೋತಿಷ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (ನೋಂ). ಈ ಸಂಸ್ಥೆಯು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ಈ ಸಂಸ್ಥೆಯು 2010ರಿಂದ ಪ್ರತಿ ವರ್ಷವೂ ಕನ್ನಡದಲ್ಲಿ ಜ್ಯೋತಿಷ ಪ್ರವೇಶ, ಜ್ಯೋತಿಷ ಪ್ರವೀಣ, ಜ್ಯೋತಿಷ ರತ್ನ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ.
ಇದರ ಜೊತೆಗೆ ಸಂಸ್ಕೃತ ವಿಶ್ವವಿದ್ಯಾಲಯದ ಜ್ಯೋತಿಷ ಸರ್ಟಿಫಿಕೇಟ್, ಜ್ಯೋತಿಷ ಡಿಪ್ಲೊಮಾದ ಉಪನ್ಯಾಸಗಳನ್ನು ನಡೆಸುತ್ತಾ ಬರುತ್ತಿದೆ. ಪ್ರತಿ ವರ್ಷದ ಏಪ್ರಿಲ್/ಮೇ ತಿಂಗಳಲ್ಲಿ ಜ್ಯೋತಿಷ ತರಗತಿಗಳು ಆರಂಭವಾಗುತ್ತವೆ.
ಪಂಡಿತ್ ವಿಠ್ಠಲ್ ಭಟ್ ಅವರಿಂದ 2026ರ ವರ್ಷ ಭವಿಷ್ಯ: ಶ್ರೀಗುರುಭ್ಯೋ.ಕಾಮ್ ವಿಶೇಷ ಸಂದರ್ಶನ
ಜ್ಯೋತಿಷವನ್ನು ಕ್ರಮಬದ್ಧವಾಗಿ ಹಾಗೂ ಶೈಕ್ಷಣಿಕವಾಗಿ ಕಲಿಯಲು ಬಯಸುವವರಿಗೆ ಈ ಸಂಸ್ಥೆಯಿಂದ ಸಹಾಯ ಆಗುತ್ತದೆ. ಕೋರ್ಸ್ ಸೇರುವುದಕ್ಕೆ ದೂರವಾಣಿ ಸಂಖ್ಯೆ- 080- 22279208, ಮೊಬೈಲ್ ಫೋನ್ ಸಂಖ್ಯೆಗಳಾದ 9611129208, 9844475547, 9902990973 ಸಂಪರ್ಕಿಸಬಹುದು.
ಲೇಖನ- ಶ್ರೀನಿವಾಸ ಮಠ









