ಫ್ರಾನ್ಸ್ ಅಧ್ಯಕ್ಷನಿಗೆ ಕುತ್ತು ತಂದ ಶನಿ: ಭಾರತದ ನಾಯಕರಿಗೂ ಇದೆ ಮಂದಾಷ್ಟಮ ಎಚ್ಚರಿಕೆ!

A pensive profile of French President Emmanuel Macron against a black background.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

ಮಂದಸ್ಯ ಮಂದಾಷ್ಟಮ- ಹೀಗೆ ಸತತವಾಗಿ ಶನಿಯ ಪ್ರಭಾವವನ್ನು, ಅದರ ತೀಕ್ಷ್ಣತೆಯನ್ನು ವಿವರಿಸುತ್ತಾ, ಎಚ್ಚರಿಸುತ್ತಾ ಬರುತ್ತಿರುವ ಖ್ಯಾತ ಜ್ಯೋತಿಷಿಗಳಾದ ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ಹೊಸದಾದ ಉದಾಹರಣೆಗಳು ಹಾಗೂ ಎಂಥವರನ್ನೂ ಬೆಚ್ಚಿ ಬೀಳಿಸುವಂಥ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ವೈದಿಕ ಜ್ಯೋತಿಷ್ಯದ ವಿಚಾರದಲ್ಲಿ ಅವರಿಗೆ ಇರುವ ಅನುಭವದ ಆಳ ಹಾಗೂ ಜ್ಞಾನದ ಅಗಾಧತೆಗೆ ಅಳತೆಗೋಲು ಎಂಬುದು ಇಲ್ಲವೇನೋ ಎಂದು ಅಚ್ಚರಿಯಾಗುವಂಥ ಹಲವು ಭವಿಷ್ಯವಾಣಿಗಳಲ್ಲಿ ಈಗ ಅವರು ತಿಳಿಸಿರುವ ಸಂಗತಿ ಹೊಸ ಸೇರ್ಪಡೆ ಆಗುವುದರಲ್ಲಿ ಅನುಮಾನವಿಲ್ಲ. ಪ್ರಕಾಶ್ ಅಮ್ಮಣ್ಣಾಯ ಅವರ ಭವಿಷ್ಯ ವಾಣಿಯನ್ನು ನಿರಂತರವಾಗಿ ಅನುಸರಿಸುವವರಿಗೆ ಹಾಗೂ ಅಧ್ಯಯನಕ್ಕೆ ಬಳಸುವವರಿಗೆ ಈ ಲೇಖನದ ಓದು ಇನ್ನಷ್ಟು ಕುತೂಹಲ- ಆಸಕ್ತಿ ಮತ್ತು ಜ್ಯೋತಿಷ್ಯದ ಮೇಲೆ ಶ್ರದ್ಧೆ ಬೆಳೆಸುತ್ತದೆ. ಇಂದಿನ ಲೇಖನ ಇರುವುದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜನ್ಮ ಜಾತಕ ವಿಶ್ಲೇಷಣೆ ಬಗ್ಗೆ.

ಮ್ಯಾಕ್ರನ್ ಅವರದು ಮೇಷ ರಾಶಿ, ಅಂದರೆ ಅಲ್ಲಿಯೇ ಚಂದ್ರ. ಮಕರ ಲಗ್ನ.

ಮಿಥುನದಲ್ಲಿ ಗುರು.

ಕರ್ಕಾಟಕದಲ್ಲಿ ಕುಜ.

ಸಿಂಹದಲ್ಲಿ ಶನಿ.

ಕನ್ಯಾದಲ್ಲಿ ರಾಹು.

ವೃಶ್ಚಿಕದಲ್ಲಿ ಶುಕ್ರ.

ಮೀನದಲ್ಲಿ ಕೇತು.

ಧನುಸ್ಸು ರಾಶಿಯಲ್ಲಿ ರವಿ ಹಾಗೂ ಬುಧ.

ಜಾತಕದಲ್ಲಿ ಅದ್ಭುತ ಯೋಗವಿದ್ದರೂ ಫಲ ಸಿಗುತ್ತಿಲ್ಲವೇ? ಲಕ್ಷ ಜಾತಕ ವಿಶ್ಲೇಷಿಸಿದ ಪ್ರಕಾಶ್ ಅಮ್ಮಣ್ಣಾಯ ಬಿಚ್ಚಿಟ್ಟ ರಹಸ್ಯಗಳಿವು!

ಈ ಜಾತಕದಲ್ಲಿ ಎರಡು ಪರಿವರ್ತನೆ ಯೋಗ ಇದೆ. ಮಿಥುನ- ಧನುಸ್ಸು ರಾಶಿಗಳ ಅಧಿಪತಿಗಳಾದ ಬುಧ- ಗುರು ಪರಸ್ಪರ ಅದಲು ಬದಲಾಗಿದ್ದಾರೆ. ಅದೇ ರೀತಿ ಮೇಷ- ಕರ್ಕಾಟಕ ರಾಶಿಯ ಅಧಿಪತಿಗಳಾದ ಕುಜ- ಚಂದ್ರ ಅದಲು ಬದಲು ಆಗಿದ್ದಾರೆ. ಈಗ ರಾಹು ದಶೆ ನಡೆಯುತ್ತಾ ಇದೆ. 

ಜನ್ಮ ಜಾತಕದಲ್ಲಿ ನೀಚ ಕುಜ, ಕಡಿಮೆ ಅಂಶದ (7°) ಶನಿ ದುರ್ಬಲ. ಅದು ಇರೋದು ಸಿಂಹದಲ್ಲಿ. ಸಿಂಹಕ್ಕೆ ಅಷ್ಟಮ ಮೀನ. ಅಂದರೆ ಇವರಿಗೆ ಮಂದಾಷ್ಟಮೇ ಮಂದಃ. ಇದು ಅಪಾಯಕಾರಿ. ನರೇಂದ್ರ ಮೋದಿಗೂ ಇಲ್ಲೇ ಬಲಿಷ್ಠ ಶನಿ. ದೇಹಕ್ಕೆ ಸಮಸ್ಯೆ ಇಲ್ಲದಿದ್ದರೂ ದೇಶದ ನಾಯಕರಾಗಿ ಇರುವುದರಿಂದ ದೇಶಕ್ಕೆ ಅಪಾಯದ ಸ್ಥಿತಿ. ಸಿದ್ಧರಾಮಯ್ಯನವರಿಗೂ ಇಂಥದ್ದೇ ಸ್ಥಿತಿ. ಅಧಿಕಾರದಿಂದ ಇಳಿದರೂ ಅಪವಾದ ಬೆನ್ನಟ್ಟುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರಿಗೂ ಜನ್ಮಜಾತಕದಲ್ಲಿ ಸಿಂಹದಲ್ಲಿ ಶನಿ ಬಲಿಷ್ಠ.ಈಗಾಗಲೇ ಅವರ ದೇಶದ ಮೇಲೆ ಆಕ್ರಮಣಗಳಾಗುತ್ತಿವೆ.

ಮ್ಯಾಕ್ರಾನ್ ಅವರಿಗೆ ಗೋಚರದ ಸಮಸ್ಯೆ ಮಾತ್ರವಲ್ಲ, ರಾಹುದಶೆ ನಡೆಯುತ್ತಾ ಇದೆ. ಇದರಲ್ಲಿ ರಾಹುವಿನ ಚತುರ್ಥ ರವಿಯು ಶಿರೋವೇದನೆ ನೀಡಿಯಾನು. ಇಷ್ಟೆಲ್ಲ ಒಟ್ಟಿಗೆ ಬಂದಾಗ ಮಹಾ ಅಪಾಯವೇ ಎದುರಿಗೆ ನಿಲ್ಲಬಹುದು.

ಒಟ್ಟಿನಲ್ಲಿ ಯಾರದು ಸಿಂಹ ರಾಶಿಯೋ ಸಿಂಹ ಲಗ್ನವೋ ಜನ್ಮ ಜಾತಕದಲ್ಲಿ ಸಿಂಹದಲ್ಲಿ ಶನಿ ಇದೆಯೋ ಅಂಥವರಿಗೆ ಅಪವಾದ ಅಪಾಯ ಎಂದು ನಾವು ಸೂಚಿಸುತ್ತೇವೆ. ಇತ್ತೀಚೆಗೆ ಟೈಗರ್ ಶ್ರಾಫ್ ಗೆ ಅಪಾಯ ಬಂದದ್ದೂ ಅವರ ಜನ್ಮ ಜಾತಕ  ಕುಂಡಲಿಯಲ್ಲಿ ಇರುವ ಧನುರಾಶಿಯ ಶನಿಯಿಂದ ಸದ್ಯದ ಗೋಚಾರದಲ್ಲಿನ ಮೀನ ಶನಿಯು ಚತುರ್ಥದಲ್ಲಿ ಇರುವುದರಿಂದ ಎಂಬುದನ್ನು ಗಮನಿಸಬಹುದು. 

ಕುಮಾರಣ್ಣನಿಗೆ ಮತ್ತೆ ಸಿಎಂ ಯೋಗ: ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ರಾಜಕೀಯ ವಿಶ್ಲೇಷಣೆ

ಶನಿವತ್ ರಾಹು ಎಂದಿದ್ದಾರೆ. ಅಂದರೆ ರಾಹುವು ಶನಿಯ ರೀತಿ ಫಲವನ್ನು ನೀಡುತ್ತಾನೆ. ಅಂಥ ರಾಹುವಿನ ದಶೆ ನಡೆಯುತ್ತಾ ಇದೆ. ಮಕರ ರಾಶಿಯ ಅಧಿಪತಿಯಾದ ಶನಿಯು ಮ್ಯಾಕ್ರನ್ ಗೆ ಜನ್ಮ ಜಾತಕದಲ್ಲಿ ಲಗ್ನಕ್ಕೆ ಅಷ್ಟಮ ರಾಶಿಯಾದ- ಶತ್ರುವಿನ ಮನೆಯಾದ ರವಿಯ ಮನೆಯಲ್ಲಿ ಇದೆ. 

ಈಗ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೀವ ಉಳಿಸಿಕೊಳ್ಳಬೇಕು. ಏಕೆಂದರೆ  ರಾಶಿಯ ದೃಷ್ಟಿಯಿಂದ ಕೂಡ ಗೋಚಾರ ಶನಿಯ ಪ್ರಭಾವ ತೀಕ್ಷ್ಣವಾಗಿದೆ. ಈ ವ್ಯಕ್ತಿಗೆ “ಏನೂ” ಆಗಬಹುದು. 

ಯಾರ ಜನ್ಮ ಜಾತಕದಲ್ಲಿ ಸಿಂಹಸ್ಥ ಶನಿ, ವೃಶ್ಚಿಕ ಶನಿ, ಸಿಂಹಸ್ಥ ಚಂದ್ರ, ವೃಶ್ಚಿಕದಲ್ಲಿ ಚಂದ್ರ ಇದೆಯೋ ಅತಿ ಜಾಗ್ರತೆಯಿಂದ ಇರಬೇಕು.   

ಜಗತ್ತನ್ನು ಅನೇಕರು ಕಣ್ಣಾಡಿಸಿ‌ ನೋಡ್ತಾರೆ, ನಾವೂ ನೋಡ್ತೇವೆ. ನೋಡುವ ದೃಷ್ಟಿಕೋನಗಳು ಬೇರೆ ಬೇರೆ ಇರುತ್ತದೆ. ಹೀಗೆ ಯಾಕೆ ಎಂದು ನಾವು ಜ್ಯೋತಿಷ್ಯ ರೀತಿಯಲ್ಲಿ ನೋಡಿದಾಗ ಒಂದೊಂದು ಸಮಸ್ಯೆಯ ಕಾರಣಗಳು ಗೊತ್ತಾಗುತ್ತವೆ. 

ಯಾವಾಗ ಶನಿಯು ಮೀನ ರಾಶಿ ಸಂಚಾರಕ್ಕೆ ಇಳಿದನೋ ಅಲ್ಲಿಂದ ಜಗತ್ತು ನಡುಗಲು ಶುರುವಾಗಿದೆ. ಒಂದು ವಿಮಾನವು ತನ್ನ ಪಥವನ್ನು ಸೇರಿ ಚಲಿಸಲು ತಲ್ಲಣಿಸುತ್ತಿದೆಯೋ ಅಲ್ಲಿ ನಾವು ಮೊದಲು ನೋಡೋದು ವಾತಾವರಣ, ನಂತರ ಚಾಲಕನನ್ನು.

ಮೀನ ರಾಶಿಯ ಶನಿಯು ಕಳೆದ ಬಾರಿ (ಮೂವತ್ತು ವರ್ಷಗಳ ಹಿಂದೆ) ಇದ್ದ ಸ್ಥಿತಿಗಿಂತ ಈ ಸಲದ ಸ್ಥಿತಿಗೆ ವ್ಯತ್ಯಾಸ ಇದೆ. ಅಂದರೆ ಅಯನಾಂಶ (angle)ದ ಆಧಾರ. ಉತ್ತರ ಅಯನಾಂಶಕ್ಕೆ ಹೋದಂತೆ ಶನಿಯ ಪ್ರಭಾವವೂ ವ್ಯತ್ಯಾಸ ಆಗುತ್ತಾ ಹೋಗುತ್ತದೆ. ಮುಂದಿನ ದಿನಗಳಲ್ಲಿ ಶನಿಯು ಸಂಚಾರ ಮಾಡುತ್ತಾ ರೋಹಿಣೀ ನಕ್ಷತ್ರದ ಉತ್ತರ ಶರದ ಸಂಚಾರ ಕಾಲ. ಇದನ್ನು ‘ರೋಹಿಣಿ ಶಕಟ ಭೇದ’ ಎನ್ನುತ್ತಾರೆ. ಅತ್ಯಂತ ದೊಡ್ಡ ಗಾತ್ರಗಳ ನಕ್ಷತ್ರ ಪುಂಜ ಇದು. ಅತ್ಯಂತ ಪ್ರಖರತೆ ಇರುವಂತದ್ದು. ಕೋಟಿ ಸೂರ್ಯರ ಪ್ರಖರತೆ ಇದಕ್ಕಿದೆ. ಅಂತಹ ನಕ್ಷತ್ರದಿಂದ ಹೀರಿಕೊಂಡ ಶಕ್ತಿಯನ್ನು ಶನಿ ಮಾತ್ರ ಪ್ರಕಟಿಸಬಹುದು. ಅಂದರೆ ಶನಿಯು ಧರ್ಮ ಸಂರಕ್ಷಣಾ ಪ್ರೇರಕ. ಇದು ಮುಂಬರುವ ದಿನಗಳ (ಏಳು ವರ್ಷ) ಫಲ.

ಇಂತಹ ಫಲಗಳನ್ನು ಪ್ರಯೋಗಿಸಲು ಅಂತಹ ಆತಂಕ ಉಳ್ಳ ವಾತಾವರಣದಲ್ಲಿ ಮಾತ್ರ ಪ್ರಯೋಗವಾದಾಗ ಅದಕ್ಕೆ ಬೆಲೆ ಬರುತ್ತದೆ. ಮುಂದಿನ ಏಳು ವರ್ಷ ಧರ್ಮ ಕಲಹ, ಮತ ಕಲಹ, ಸಮುದಾಯ ಕಲಹ. ಪರಿಣಾಮ ಒಂದು ಸಮುದಾಯವೇ ನಾಶವಾದೀತು. ಹಿಟ್ಲರನ ಕಾಲದಲ್ಲಿ ಯಹೂದಿಗಳ ನಾಶವಾಗಿ ಪುನಃ ಬಲಿಷ್ಟ ಆಗಲು ಇಷ್ಟು ಸಮಯ ಹಿಡಿಯಿತು. ಈ ಕಾಲ ಸನ್ನಿಹಿತವಾಗುತ್ತಿದ್ದಂತೆಯೇ ದುಷ್ಟ ಅಧರ್ಮಿಗಳ ಉತ್ಸಾಹ ಜಾಸ್ತಿಯಾಗುತ್ತದೆ. ಅದು ಈಗ ಶುರುವಾಗಿದೆ.

AI ವರ್ಸಸ್ ಅನುಭವಿ ಜ್ಯೋತಿಷಿ: ಫಲ ನಿರ್ಣಯದ ಸೂಕ್ಷ್ಮತೆಗಳೇನು?

ಜ್ಯೋತಿಷ್ಯವನ್ನು ಆಳವಾಗಿ ಅಧ್ಯಯನ ಮಾಡಿ ಹೇಳುವ ಫಲ ಸುಳ್ಳಾಗದು.

ಸರಿ, ಇದಕ್ಕೆಲ್ಲ ಪರಿಹಾರ ಏನು ಅಂತೀರಾ? ಈ ಪ್ರಶ್ನೆಗೆ ಉತ್ತರ: ಅವಸರದ ನಿರ್ಧಾರ ಬೇಡ, ತಾಳ್ಮೆ ಸಂಯಮಗಳಿರಲಿ.

ಲೇಖನ- ಪ್ರಕಾಶ್ ಅಮ್ಮಣ್ಣಾಯ

ನಿರೂಪಣೆ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts