ಕರ್ನಾಟಕ ಜ್ಯೋತಿಷಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಕುಕ್ಕೆ ಸುಬ್ರಹ್ಮಣ್ಯದ ಸ್ವರ್ಣಾರ್ಚನೆಗೆ ಸಲಹೆ

A split image showing the colorful gopuram of Kukke Subramanya Temple on the left and Prime Minister Narendra Modi in a traditional greeting pose (Namaste) on the right.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪ್ರಧಾನಿ ನರೇಂದ್ರ ಮೋದಿ - ಅಧ್ಯಾತ್ಮ ಮತ್ತು ನಾಯಕತ್ವದ ಒಂದು ನೋಟ.

‘ಸ್ವರ್ಣಾರ್ಚನೆ’ ಎಂಬ ಪದ ಕುತೂಹಲ ಹುಟ್ಟಿಸಿತು. ಅದು ಹೇಗೆಂದರೆ, ಉಡುಪಿಯ ಕಾಪು ಮೂಲದ ಜ್ಯೋತಿಷಿಗಳೂ ಅಧ್ಯಾತ್ಮ ಚಿಂತಕರು ಆದ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮದೊಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಅದರ ಒಕ್ಕಣೆ ಹೀಗಿದೆ:

ಮೋದಿಯವರು 2027 June ವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಬಹಳ ಎಚ್ಚರ ಇರಬೇಕು. ಈಗ ಸಂಘರ್ಷಕ್ಕೆ ಕಾಯುತ್ತಿದ್ದಾರೆ. ಕುಕ್ಕೇ ಸುಬ್ರಹ್ಮಣ್ಯಕ್ಕೆ ಸ್ವರ್ಣಾರ್ಚನೆ ಮಾಡಿದರೆ ನಿಶ್ಚಿತವಾಗಿ ಮಹಾಶಕ್ತಿ ಪ್ರಾಪ್ತಿಯಾದೀತು ಅಂತ ಇದೆ.

ಈ ಪೋಸ್ಟ್ ನಲ್ಲಿ ಗಮನ ಸೆಳೆಯುವುದು ಆರಂಭದ ಸಾಲು: ಸಾಧ್ಯ ಇದ್ದವರು ತಿಳಿಸಿ. ನಾನು ಹಲವು ಬಾರಿ ತಿಳಿಸಿದ್ದೇನೆ ಎಂಬ ವಾಕ್ಯ. ಏನಿದು ಸ್ವರ್ಣಾರ್ಚನೆ ಎಂಬ ಮಾಹಿತಿ ತೆಗೆದುಕೊಳ್ಳಲು “ಶ್ರೀಗುರುಭ್ಯೋ.ಕಾಮ್”ನಿಂದ ಪ್ರಕಾಶ್ ಅಮ್ಮಣ್ಣಾಯ ಅವರಿಗೆ ಕರೆ ಮಾಡಲಾಯಿತು. ಅವರು ನೀಡಿದ ಮಾಹಿತಿ ಹೀಗಿದೆ: ಹಿಂದೆ ಇಕ್ಕೇರಿಯ ರಾಜರು, ಮೈಸೂರು ಅರಸರು ಸಹಸ್ರ ಪುತ್ಥಳಿ ಅರ್ಚನೆ ‌ಮಾಡಿದ ಉಲ್ಲೇಖ ಇದೆ. ಈಗ ಅಷ್ಟು ಸಾಧ್ಯ ಇಲ್ಲದಿದ್ದರೂ ಮುಷ್ಟಿಯಲ್ಲಿ ಸ್ವರ್ಣದ ಪುಡಿಯನ್ನು ಅರ್ಚನೆ ಮಾಡಿದರೆ ಸಹಸ್ರ ಪುತ್ಥಳಿ ಅರ್ಚನೆಯ ಫಲ ಇದೆ.

ಭಕ್ತಿ ಹಾಗೂ ಸಗೌರವ ಪೂಜೆಗೆ ಮಿಗಿಲಿಲ್ಲ. ಈ ‘ಸ್ವರ್ಣಾರ್ಚನೆ’ ಪೂಜೆ ಕೂಡ ಇವತ್ತಿಗೆ ಜನ ಸಾಮಾನ್ಯರು ಹುಬ್ಬೇರಿಸುವಂತೆ ಮಾಡುವ ಆರಾಧನೆ. ಆದರೆ ಅಸಾಧ್ಯವಾ, ಮಾಡುವುದಕ್ಕೆ ಕಷ್ಟವಾ ಅಂದರೆ, ಈ ಲೇಖನವನ್ನು ಪೂರ್ಣವಾಗಿ ಓದಿದ ನಂತರ ನೀವೇ ನಿರ್ಧರಿಸಿಕೊಳ್ಳಿ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಅತ್ಯಂತ ವಿಶೇಷ ಮತ್ತು ಶ್ರದ್ಧಾಪೂರ್ವಕ ಸೇವೆಗಳಲ್ಲಿ ‘ಸ್ವರ್ಣಾರ್ಚನೆ’ ಕೂಡ ಒಂದು. ಇದರ ಬಗ್ಗೆ ಸರಳ ವಿವರ ಇಲ್ಲಿದೆ:

ಸ್ವರ್ಣಾರ್ಚನೆ ಅಂದರೆ ಏನು?

‘ಸ್ವರ್ಣ’ ಎಂದರೆ ಚಿನ್ನ, ‘ಅರ್ಚನೆ’ ಎಂದರೆ ಪೂಜೆ. ದೇವಸ್ಥಾನದ ಗರ್ಭಗುಡಿಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಗೆ ಅಥವಾ ದೇವರಿಗೆ ಅರ್ಪಿಸಲಾದ ಚಿನ್ನದ ಬಿಲ್ವಪತ್ರೆ ಅಥವಾ ಚಿನ್ನದ ಹೂವುಗಳಿಂದ ಮಾಡುವ ಪೂಜೆಯೇ ಸ್ವರ್ಣಾರ್ಚನೆ.

ಸರ್ಪದೋಷ ನಿವಾರಣೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ: ಆದಿ ಸುಬ್ರಹ್ಮಣ್ಯದಿಂದ ರಥೋತ್ಸವದವರೆಗೆ ಸಂಪೂರ್ಣ ವಿವರ

ಸೇವೆಯ ಮುಖ್ಯಾಂಶಗಳು:

  • ಪೂಜಾ ವಿಧಾನ: ಅರ್ಚಕರು ಮಂತ್ರಗಳನ್ನು ಪಠಿಸುತ್ತಾ, ಪ್ರತಿಯೊಂದು ನಾಮಾವಳಿಗೂ ಒಂದೊಂದು ಚಿನ್ನದ ಪುಷ್ಪ ಅಥವಾ ಬಿಲ್ವಪತ್ರೆಯನ್ನು ದೇವರಿಗೆ ಅರ್ಪಿಸುತ್ತಾರೆ.
  • ಸಂಕಲ್ಪ: ಭಕ್ತರು ತಮ್ಮ ಹೆಸರಿನಲ್ಲಿ ಅಥವಾ ಕುಟುಂಬದವರ ಹೆಸರಿನಲ್ಲಿ ಸಂಕಲ್ಪ ಮಾಡಿಸಿ ಈ ಸೇವೆಯನ್ನು ಸಲ್ಲಿಸಬಹುದು.
  • ಪ್ರಸಾದ: ಈ ಸೇವೆಯನ್ನು ಮಾಡಿಸಿದ ಭಕ್ತರಿಗೆ ದೇವಸ್ಥಾನದ ವತಿಯಿಂದ ವಿಶೇಷ ಪ್ರಸಾದದ ವ್ಯವಸ್ಥೆ ಇರುತ್ತದೆ.

ಈ ಸೇವೆಯ ವಿಶೇಷತೆ:

ಸಾಮಾನ್ಯವಾಗಿ ಹೂವು ಅಥವಾ ತುಳಸಿಯಿಂದ ಅರ್ಚನೆ ಮಾಡುವುದು ವಾಡಿಕೆ. ಆದರೆ ಭಕ್ತಿ ಮತ್ತು ಸಮರ್ಪಣಾ ಭಾವದ ಪ್ರತೀಕವಾಗಿ ದೇವರಿಗೆ ಅತ್ಯಂತ ಅಮೂಲ್ಯವಾದ ಲೋಹದಿಂದ (ಚಿನ್ನ) ಪೂಜೆ ಮಾಡಿಸುವುದು ಶ್ರೇಷ್ಠ ಎಂಬ ನಂಬಿಕೆ ಭಕ್ತರಲ್ಲಿದೆ. ಕುಕ್ಕೆಯಂತಹ ಪವಿತ್ರ ಕ್ಷೇತ್ರದಲ್ಲಿ ನಾಗದೋಷ ಪರಿಹಾರ ಅಥವಾ ಇಷ್ಟಾರ್ಥ ಸಿದ್ಧಿಗಾಗಿ ಅನೇಕರು ಈ ಸೇವೆಯನ್ನು ಮಾಡಿಸುತ್ತಾರೆ.

ದೇಶದ ಪ್ರಧಾನಮಂತ್ರಿ ಪೂಜೆ ಏಕೆ ಮಾಡಿಸಬೇಕು?

ದೇಶವನ್ನು ಮುನ್ನಡೆಸಬೇಕಾದ ಪ್ರಧಾನಮಂತ್ರಿ ಅಡೆ-ತಡೆಗಳ ನಿವಾರಣೆಗೆ, ದೇಶದ ರಕ್ಷಣೆಗೆ ಸುಬ್ರಹ್ಮಣ್ಯನಲ್ಲಿ ಪ್ರಾರ್ಥಿಸಿ, ಈ ಸ್ವರ್ಣಸೇವೆ ಮಾಡಿಸಿದಲ್ಲಿ ಅದರಿಂದ ದೇಶಕ್ಕೆ- ದೇಶವಾಸಿಗಳಿಗೆ ರಕ್ಷಣೆಯನ್ನು, ಶುಭವನ್ನು ವೃದ್ಧಿಸುತ್ತದೆ. ಆ ಕಾರಣದಿಂದ ಈ ‘ಸ್ವರ್ಣಸೇವೆ’ಯನ್ನು ಮಾಡಿಸುವಂತೆ ಪ್ರಕಾಶ್ ಅಮ್ಮಣ್ಣಾಯ ಅವರು ಸಲಹೆ ನೀಡುತ್ತಾ ಬಂದಿದ್ದಾರೆ.

ಜಾತಕದಲ್ಲಿ ಅದ್ಭುತ ಯೋಗವಿದ್ದರೂ ಫಲ ಸಿಗುತ್ತಿಲ್ಲವೇ? ಲಕ್ಷ ಜಾತಕ ವಿಶ್ಲೇಷಿಸಿದ ಪ್ರಕಾಶ್ ಅಮ್ಮಣ್ಣಾಯ ಬಿಚ್ಚಿಟ್ಟ ರಹಸ್ಯಗಳಿವು!

ಕೊನೆ ಮಾತು:

ಒಂದು ವೇಳೆ ವೈಯಕ್ತಿಕವಾಗಿ ಯಾರಾದರೂ ಈ ಸೇವೆಯನ್ನು ಮಾಡಿಸಬೇಕು ಎಂದುಕೊಂಡಲ್ಲಿ ನಿಖರವಾದ ಶುಲ್ಕ ಮತ್ತು ಸಮಯವನ್ನು ತಿಳಿದುಕೊಳ್ಳಲು ನೀವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅಥವಾ ದೇವಸ್ಥಾನದ ಮಾಹಿತಿ ಕೇಂದ್ರವನ್ನು ಸಂಪರ್ಕಿಸುವುದು ಉತ್ತಮ, ಏಕೆಂದರೆ ಸೇವಾ ಶುಲ್ಕಗಳಲ್ಲಿ ಕಾಲಕಾಲಕ್ಕೆ ಬದಲಾವಣೆಗಳಾಗುವ ಸಾಧ್ಯತೆ ಇರುತ್ತದೆ.

ಮಾಹಿತಿ- ಪ್ರಕಾಶ್ ಅಮ್ಮಣ್ಣಾಯ

ಲೇಖನಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts