ಜ್ಯೋತಿಷ್ಯ ರೀತಿಯಾಗಿ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂದುಕೊಳ್ಳುವವರು ತಿಳಿದುಕೊಳ್ಳಬೇಕಾದ ಪ್ರಾಥಮಿಕ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಪರಿಹಾರ ಅಂದಾಗ ಜನ್ಮ ಜಾತಕದಲ್ಲಿ ಇರುವಂಥ ದೋಷಗಳು, ದಶಾ- ಭುಕ್ತಿಗೆ ಸಂಬಂಧಿಸಿದಂತೆ ಇರುವ ದೋಷಗಳು ಹಾಗೂ ಗೋಚಾರದಲ್ಲಿ ಆಗುವಂಥ ಪ್ರಮುಖ ಗ್ರಹ ಬದಲಾವಣೆಗಳಿಗೆ ಸಂಬಂಧಿಸಿದಂತೆ ಮಾಡಬೇಕಾದ ಶಾಂತಿಗಳು ಮಾಡಿಕೊಳ್ಳುವುದು ಕ್ರಮ. ಇದನ್ನು ಹೊರತುಪಡಿಸಿದರೆ ಕಾಮ್ಯಾರ್ಥವಾಗಿ ಮಾಡುವಂಥ ಪೂಜೆ- ಪುನಸ್ಕಾರಗಳು ಸಹ ಇವೆ. ಉದಾಹರಣೆಗೆ ಸಾರ್ವಜನಿಕ ಬದುಕಿನಲ್ಲಿ ಆಕರ್ಷಣಾ ಶಕ್ತಿಗಾಗಿ, ವಿದ್ಯೆ ಕಲಿಕೆಗಾಗಿ, ಆರೋಗ್ಯ, ಆಯುಷ್ಯ, ದಾಂಪತ್ಯ ಸಾಮರಸ್ಯ ಹೀಗೆ ಯಾವುದನ್ನು ಬೇಕು ಎಂದು ಬಯಸಿ ಪೂಜೆ ಮಾಡುತ್ತೇವೋ ಅವು ಕಾಮ್ಯಾರ್ಥ ಪೂಜೆ ಆಗುತ್ತದೆ. ಇದರ ಜೊತೆಜೊತೆಗೆ ಕ್ಷೇತ್ರ ದರ್ಶನ ಹಾಗೂ ರತ್ನ ಧಾರಣೆ ಇದರಿಂದ ಅನುಗ್ರಹ ಮತ್ತೂ ಬಲಗೊಳ್ಳುತ್ತದೆ. ಇದು ಸಹ ವೈದ್ಯಕೀಯ ಚಿಕಿತ್ಸೆ ರೀತಿಯಲ್ಲಿಯೇ ಇರುತ್ತದೆ.
ಚುಚ್ಚುಮದ್ದು, ಮಾತ್ರೆ, ಆಹಾರ ಪಥ್ಯ, ಜೀವನಶೈಲಿ ಹೀಗೆ ಯಾವುದು ಅಗತ್ಯವೋ ಅದನ್ನು ಮಾಡಿಕೊಂಡಲ್ಲಿ ಫಲಿತಾಂಶ ನಿರೀಕ್ಷೆ ಮಾಡಬಹುದು. ಪೂಜೆ- ಪುರಸ್ಸರಾದಿಗಳನ್ನು ಗುಮಾನಿಯಿಂದ ನೋಡುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಆ ಕಾರಣದಿಂದ ತೀರ್ಥ ಕ್ಷೇತ್ರಗಳು- ದೇವತಾ ಸಾನ್ನಿಧ್ಯಗಳು ತುಂಬಿ ತುಳುಕುತ್ತಿವೆ. ಇನ್ನು ಗುಮಾನಿಯ ವ್ಯಾಪ್ತಿಯಲ್ಲಿಯೇ ಬರುವಂಥದ್ದು ರತ್ನಧಾರಣೆ. ಈ ವಿಷಯದಲ್ಲಿ ಆಗುವ ಸಮಸ್ಯೆ ಏನೆಂದರೆ, ‘ಇಷ್ಟು ಬೆಲೆ ಕೊಟ್ಟು ತೆಗೆದುಕೊಳ್ಳಬೇಕಾ?” ಇಷ್ಟು ಹಣಕ್ಕೆ ಚಿನ್ನವನ್ನು ತೆಗೆದಿಟ್ಟುಕೊಂಡರೆ ಅದನ್ನು ನಮಗೆ ಹಣದ ಅಗತ್ಯ ಇರುವಾಗ ಮಾರಾಟ ಮಾಡಬಹುದು ಎಂದು ಆಲೋಚಿಸುತ್ತಾರೆ. ಮತ್ತೊಂದು ಸವಾಲು ಏನೆಂದರೆ, ಗುಣಮಟ್ಟದ ಬಗ್ಗೆ ಖರೀದಿ ಮಾಡುವವರಿಗೆ ಗೊತ್ತಾಗಲ್ಲ ಅನ್ನುವ ಆತಂಕ ಸಹ ಇದೆ.
ನಿಮ್ಮ ಅದೃಷ್ಟ ರತ್ನ ಯಾವುದು? ರಾಶಿ ಮತ್ತು ಲಗ್ನಕ್ಕೆ ಅನುಗುಣವಾಗಿ ರತ್ನ ಧರಿಸುವ ಶಾಸ್ತ್ರೋಕ್ತ ಕ್ರಮಗಳು
ರತ್ನ ಧಾರಣೆ ಬಗ್ಗೆ ಕೆಲವು ಮುಖ್ಯ ವಿಚಾರಗಳನ್ನು ತಿಳಿಸುತ್ತಾ ಇದ್ದೀನಿ:
- ಆಯಾ ರತ್ನವನ್ನು ಯಾವ ಲೋಹದಲ್ಲಿ ಹಾಕಬೇಕು ಎಂದು ಸಲಹೆ ಮಾಡುತ್ತಾರೋ ಅದೇ ಲೋಹವನ್ನು ಬಳಸಿ. ಉದಾಹರಣೆಗೆ, ಚಿನ್ನ, ಬೆಳ್ಳಿ, ತಾಮ್ರ, ಪ್ಲಾಟಿನಂ ಹೀಗೆ.
- ಇನ್ನು ಅದೃಷ್ಟ ರತ್ನವನ್ನು ಅದರ ಗುಣಮಟ್ಟದ ಆಧಾರದಲ್ಲಿ ಮಾರಲಾಗುತ್ತದೆ. ಒಂದು ಕಡೆ ಹೋಗಿದ್ದಿವಿ, ಅಲ್ಲಿ ಆ ಲಕ್ಕಿ ಸ್ಟೋನ್ ಗೆ ಬೇರೆ ಬೆಲೆ ಹೇಳಿದರು, ಇನ್ನೊಂದು ಕಡೆ ಬೇರೆ ಹೇಳಿದರು ಎಂಬ ಮಾತು ಗುಣಮಟ್ಟದ ರತ್ನವೇ ಎಂಬುದರಲ್ಲಿ ಆಧಾರವಾಗಿರುತ್ತದೆ.
- ಅದೃಷ್ಟ ರತ್ನಗಳ ತೂಕವನ್ನು ಕ್ಯಾರೆಟ್ ಗಳಲ್ಲಿ ಅಳೆಯಲಾಗುತ್ತದೆ. ಪ್ರಚಲಿತದಲ್ಲಿ ‘ರತಿ’ಗಳಲ್ಲಿ ಕೂಡ ಅಳತೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಒಬ್ಬ ವ್ಯಕ್ತಿಯ ದೇಹದ ತೂಕಕ್ಕೆ ತಕ್ಕಂತೆ, ಪ್ರತಿ ಹತ್ತು ಕೇಜಿಗೆ ಒಂದು ಕ್ಯಾರೆಟ್ ನಂತೆ ಬಳಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಎಪ್ಪತ್ತು ಕೇಜಿ ತೂಕ ಇದ್ದರೆ ಏಳು ಕ್ಯಾರೆಟ್, ಐವತ್ತು ಕೇಜಿ ಇದ್ದರೆ ಐದು ಕ್ಯಾರೆಟ್… ಹೀಗೆ. ಆದರೆ ದಕ್ಷಿಣ ಭಾರತದಲ್ಲಿ ಕನಿಷ್ಠ ಮೂರು ಕ್ಯಾರೆಟ್ ಧಾರಣೆ ಮಾಡಲು ಹೇಳಲಾಗುತ್ತದೆ. ಅದಕ್ಕಿಂತ ಕಡಿಮೆ ತೂಕದ್ದು ಅದೃಷ್ಟ ರತ್ನ ಧರಿಸಿದರೂ ಅದು ಅಲಂಕಾರಕ್ಕೆ ಹಾಕಿಕೊಂಡಂತೆ ಆಗುತ್ತದೆ.
- ಐಜಿಐ, ಜಿಐಎ, ಜಿಆರ್ಎಸ್ ಹೀಗೆ ಒಂದು ರತ್ನದ ಗುಣಮಟ್ಟವನ್ನು ಖಾತ್ರಿ ಪಡಿಸುವುದಕ್ಕೆ ಸರ್ಟಿಫಿಕೇಟ್ ಒದಗಿಸಲಾಗುತ್ತದೆ. ಈ ರೀತಿ ಸರ್ಟಿಫೈಡ್ ರತ್ನದ ಧಾರಣೆಯನ್ನು ಮಾಡಿ. ಸರ್ಟಿಫಿಕೇಟ್ ಅನ್ನು ನೀವು ಖರೀದಿಸಿದ ಸ್ಥಳದಲ್ಲಿ ಕೇಳಿ, ಪಡೆಯಿರಿ. ಇನ್ನೊಂದು ಅಂಶ ನೆನಪಿರಲಿ, ಯಾವುದೇ ಅದೃಷ್ಟ ರತ್ನಕ್ಕೆ ರೀಸೇಲ್ ಮೌಲ್ಯ ಇರುವುದಿಲ್ಲ. ಕೆಲವು ಅಪರೂಪದ ಹಾಗೂ ಆ್ಯಂಟಿಕ್ ಮೌಲ್ಯ ಇರುವಂಥ ರತ್ನಗಳನ್ನು ಹೊರತುಪಡಿಸಿ, ಉಳಿದವಕ್ಕೆ ಮರುಖರೀದಿಯ ಮೌಲ್ಯ ಇರುವುದಿಲ್ಲ.
- ರತ್ನ ಧಾರಣೆ ಕ್ರಮ, ಅಂದರೆ ಒಂದು ಅದೃಷ್ಟ ರತ್ನ ಧರಿಸುವುದಕ್ಕೆ ಕ್ರಮ- ಪದ್ಧತಿ ಇದೆ. ಅದರಂತೆಯೇ ಕ್ರಮ ಅನುಸರಿಸಬೇಕು. ಅಂಗಡಿಯಿಂದ ತಂದು ಧರಿಸುವ ಬಟ್ಟೆಯೋ ವಾಚ್ ರೀತಿಯಲ್ಲಿಯೋ ಈ ಜೆಮ್ ಸ್ಟೋನ್ ಧಾರಣೆ ಮಾಡಿದಲ್ಲಿ ಫಲ ದೊರೆಯುವುದಿಲ್ಲ. ಅದೃಷ್ಟ ರತ್ನಕ್ಕೆ ಎನರ್ಜಿ ತುಂಬುವ ಪ್ರಕ್ರಿಯೆ, ಜಪ ಮಾಡುವುದು ಇತ್ಯಾದಿ ಮಾಡಿಕೊಂಡ ನಂತರವಷ್ಟೇ ಅದು ಪೂರ್ಣ ಪ್ರಮಾಣದಲ್ಲಿ ಶಕ್ತಿಯುತವಾಗುತ್ತದೆ. ಈ ಸಂದರ್ಭಕ್ಕೆ ಇನ್ನೊಂದು ಉದಾಹರಣೆಯನ್ನು ನೀಡಬೇಕು. ಕರುಂಗಾಲಿ ಮಾಲೆಯನ್ನು ಅಂಗಡಿಯಲ್ಲಿ ಕೊಂಡುತಂದು ಧರಿಸುತ್ತಾರೆ. ಹಾಗೆ ನೋಡಿದರೆ ತಮಿಳುನಾಡಿನಲ್ಲಿ ಇರುವ ಪಾತಾಳ ಮುರುಗನ್ ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಇಟ್ಟು, ಅದನ್ನು ಎನರ್ಜೈಸ್ ಮಾಡಿ, ಧರಿಸುವುದು ಅದರ ಸಂಪೂರ್ಣ ಫಲವನ್ನು ಪಡೆಯುವ ಕ್ರಮ- ವಿಧಾನ.
- ಅದೃಷ್ಟ ರತ್ನದ ಗುಣಮಟ್ಟ, ಆ ರತ್ನದ ತೂಕ, ಆ ರತ್ನದ ಧಾರಣೆ ಕ್ರಮ ಈ ಎಲ್ಲವೂ ಪರಿಹಾರ- ಪರಿಣಾಮ- ಫಲಿತಾಂಶದ ಮೇಲೆ ಸಂಪೂರ್ಣ ಪ್ರಭಾವವನ್ನು ಬೀರುತ್ತವೆ.
- ಮತ್ತೆ ಕೆಲವರು ವಾಟ್ಸಾಪ್, ಟೀವಿ, ಯೂಟ್ಯೂಬ್, ಇನ್ ಸ್ಟಾಗ್ರಾಮ್ ಇಂಥ ಕಡೆಗಳಲ್ಲಿ ನೋಡಿ, ಕೇಳಿಸಿಕೊಂಡು, ಓದಿಕೊಂಡು ತಮಗೆ ತಾವೇ ಇಂಥ ರತ್ನದಿಂದ ಅನುಕೂಲ ಎಂದು ಧಾರಣೆ ಮಾಡುತ್ತಾರೆ. ಇಂಥ ಧೋರಣೆ ಬಹಳ ಅಪಾಯಕಾರಿ. ಇನ್ನು ತಮ್ಮ ಸ್ನೇಹಿತರು- ಸಂಬಂಧಿಗಳಿಗೂ ಈ ರೀತಿಯ ‘ಜ್ಞಾನ’ದ ಆಧಾರದಲ್ಲಿ ಸಲಹೆ- ಮಾರ್ಗದರ್ಶನವನ್ನೂ ಶುರು ಮಾಡಿಬಿಡುತ್ತಾರೆ. ಇಂಥದ್ದು ಮತ್ತೂ ಅಪಾಯಕಾರಿ.
- ಅದೃಷ್ಟ ರತ್ನ ಧಾರಣೆ ಮಾಡುವ ಮುನ್ನ ಪರಿಣತ ಜ್ಯೋತಿಷಿ- ಅದೃಷ್ಟ ರತ್ನಗಳ ತಿಳಿವಳಿಕೆ, ಜ್ಞಾನ, ಅನುಭವ ಇರುವಂಥವರಿಂದಲೇ ಸಲಹೆ- ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಮತ್ತೆ ಕೆಲವರು ಇದನ್ನು ಜ್ಯೋತಿಷಿಗಳಲ್ಲಿ ಕೇಳಿದರೆ ಅವರಿಗೆ ಸಹ ದಕ್ಷಿಣೆ ಕೊಡಬೇಕು, ಅದೊಂದು ಖರ್ಚು ಎಂದು ಆಲೋಚನೆ ಮಾಡುತ್ತಾರೆ. ತಪ್ಪಾದ ಅಥವಾ ಅನಾಹುತ ತರುವಂಥ ಅದೃಷ್ಟದ ಕಲ್ಲು ಹಾಕಿಕೊಂಡು, ಆ ನಂತರ ಅದರಿಂದ ಅನುಭವಿಸಿ, ಕಟ್ಟುವ ಬೆಲೆಗಿಂತ ಹೀಗೆ ಜ್ಯೋತಿಷಿಯೊಬ್ಬರ ಕನ್ಸಲ್ಟೇಷನ್ ಪಡೆದು, ಮುಂದುವರಿಯುವುದು ದುಬಾರಿ ಆಗುವುದಿಲ್ಲ ನೆನಪಿನಲ್ಲಿ ಇರಲಿ.
- ಕೊನೆಯದಾಗಿ, ಸಂಪೂರ್ಣ ನಂಬಿಕೆ ಇದ್ದಲ್ಲಿ ಹಾಗೂ ವಿಶ್ವಾಸ ಮೂಡಿದಲ್ಲಿ ಮಾತ್ರ ರತ್ನ ಧಾರಣೆಯನ್ನು ಮಾಡಿ. ಗೊಂದಲ, ಅನುಮಾನ ಹಾಗೂ ಈ ವಿಚಾರದಲ್ಲಿ ಸಂಪೂರ್ಣ ನಂಬಿಕೆ ಇಲ್ಲದಿದ್ದರೆ ಅದೃಷ್ಟ ರತ್ನ ಧಾರಣೆಯನ್ನು ಮಾಡುವುದಕ್ಕೆ ಹೋಗಬೇಡಿ. ಕೆಲವರು ಇತರರ ಒತ್ತಡಕ್ಕೆ ಮಣಿದು, ಪ್ರಭಾವಿತರಾಗಿ ಲಕ್ಕಿ ಸ್ಟೋನ್ ಧರಿಸಿ, ಆ ನಂತರ ನೆಗೆಟಿವ್ ಪ್ರಚಾರದ ‘ರಾಯಭಾರಿ’ಗಳಾಗಿ ಆಗಿಬಿಡುತ್ತಾರೆ.
ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು
ಚಿನ್ನವನ್ನು ಅದೃಷ್ಟದ ಸ್ಟೋನ್ ಜೊತೆಗೆ ಹೋಲಿಸುವುದು, ವಜ್ರವನ್ನು ಅಥವಾ ಆ್ಯಂಟಿಕ್ ಸ್ಟೋನ್ ಗಳನ್ನು ಕನಕ ಪುಷ್ಯರಾಗ, ನೀಲ ಮಣಿ, ಪಚ್ಚೆ ಇಂಥದ್ದರ ಜೊತೆಗೆ ಹೋಲಿಸುವುದು ಖಂಡಿತಾ ವಿವೇಕ ಅಲ್ಲ. ಹೇಗೆ ಅರೆಬರೆ ಜ್ಞಾನವು ಅಪಾಯಕಾರಿಯೋ ಅದೇ ರೀತಿ ಅಪನಂಬಿಕೆ- ಅತಿನಂಬಿಕೆ, ಅತಿ ಬುದ್ಧಿವಂತಿಕೆ ಸಹ ಒಳ್ಳೆಯದರ ಕಡೆಗೆ ಕರೆದೊಯ್ಯುವುದಿಲ್ಲ. ಅದೃಷ್ಟ ರತ್ನವನ್ನು ಧಾರಣೆ ಮಾಡದಿದ್ದರೂ ಪರವಾಗಿಲ್ಲ, ಅದರ ಬಗ್ಗೆ ಪ್ರಾಥಮಿಕ ಮಾಹಿತಿಯೇ ಇಲ್ಲದೆ ಧರಿಸುವುದಕ್ಕೆ ಮುಂದಾಗಬೇಡಿ.
ನಿಮಗೆ ಸರ್ಟಿಫೈಡ್ ಅದೃಷ್ಟ ರತ್ನ (Lucky Gem Stones) ಬೇಕಿದ್ದಲ್ಲಿ ಬೆಂಗಳೂರಿನ ಪದ್ಮನಾಭನಗರದಲ್ಲಿ ಇರುವ ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿಯಲ್ಲಿ ಖರೀದಿ ಮಾಡಬಹುದು. ಇವರ ಬಳಿ ಪ್ರಮಾಣಪತ್ರದ ಸಹಿತವಾಗಿ ದೊರೆಯುತ್ತದೆ. ಮೊಬೈಲ್ ಫೋನ್ ಸಂಖ್ಯೆ- 72047 36365.
ಲೇಖನ- ಶ್ರೀನಿವಾಸ ಮಠ









