Sri Gurubhyo Logo

2023 Yearly Horoscope: ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ 2023ರ ದ್ವಾದಶ ರಾಶಿಗಳ ವರ್ಷ ಭವಿಷ್ಯ

Prakash Ammannaya
ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

ವರ್ಷ ಭವಿಷ್ಯ ಎಂಬುದು ಯುಗಾದಿಯಿಂದ ಯುಗಾದಿಯ ತನಕ ನೋಡುವಂಥದ್ದು. ಇನ್ನು ಈ ಯುಗಾದಿ ಆಚರಣೆಯಲ್ಲಿ ಸೌರಮಾನ ಹಾಗೂ ಚಾಂದ್ರಮಾನ ಎಂಬ ಎರಡು ರೀತಿಯ ಆಚರಣೆ ಇದೆ. ಆದರೆ ಈ ಲೇಖನದಲ್ಲಿ ನೀಡುತ್ತಿರುವುದು ಜನವರಿ 1, 2023ರಿಂದ ಡಿಸೆಂಬರ್ 31, 2023ರ ತನಕದ ಹನ್ನೆರಡು ತಿಂಗಳು ಅನ್ವಯ ಆಗುವಂಥ ಒಂದು ವರ್ಷದ ಅವಧಿಯ ಶುಭಾಶುಭ ಫಲ ಇದು. ಶುಭಕೃತ್ ಹಾಗೂ ಶೋಭಕೃತ್ ಸಂವತ್ಸರದ ಫಲಗಳು ಕ್ರಮವಾಗಿ ಮೂರು ತಿಂಗಳು ಹಾಗೂ ಒಂಬತ್ತು ತಿಂಗಳು ಅನ್ವಯ ಆಗುವಂಥ ಗೋಚಾರ ಫಲ ಇದು. ನೆನಪಿಡಿ, ಇದು ಇಂಗ್ಲಿಷ್ ವರ್ಷ, ನಮಗೆ ಯುಗಾದಿಯೇ ಲೆಕ್ಕ ಎಂದು ಆಕ್ಷೇಪ ವ್ಯಕ್ತಪಡಿಸುವವರಿಗೆ ನಮ್ಮ ಕಡೆಯಿಂದ ಯಾವುದೇ ಸಮರ್ಥನೆ ನೀಡುವುದಿಲ್ಲ. ಏಕೆಂದರೆ, ಲೋಕಾರೂಢಿ ಹೇಗಾಗಿದೆ ಅಂದರೆ, ಹೀಗೆ ಆಕ್ಷೇಪ ವ್ಯಕ್ತ ಪಡಿಸುವವರು ಸಹ ದೈನಂದಿನ ವ್ಯವಹಾರದಲ್ಲಿ ಅದೇ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ದಿನಾಂಕಗಳನ್ನು ಬರೆಯಲೇಬೇಕಾದ ಹಾಗೂ ತಮ್ಮ ಸಂವಹನದಲ್ಲಿ ಇದು ಅನಿವಾರ್ಯ ಎಂಬಂತಾಗಿದೆ.

ಮೊದಲೇ ಹೇಳಿದಂತೆ ಸೌರಮಾನ ಮತ್ತು ಚಾಂದ್ರಮಾನ ಎರಡೂ ಕ್ರಮದಲ್ಲೂ  ಮುಂದಿನ ಸಂವತ್ಸರವು ಶೋಭಕೃತ್. ಬ್ರಹ್ಮನ ನೂರು ವರ್ಷ ಆಯು ಪ್ರಮಾಣದಲ್ಲಿ ದ್ವಿತೀಯ ಶ್ವೇತುವರಾಹ ಕಲ್ಪದಲ್ಲಿ ವೈವಸ್ವತ ಮನ್ವಂತರದ ಕಲಿಯುಗದ 5125ನೇ ವರ್ಷದಲ್ಲಿ ನಾವಿದ್ದೀವಿ. ಈ ಸಂವತ್ಸರದಲ್ಲಿ ಬುಧ- ಶುಕ್ರರಿಗೆ ಕ್ರಮವಾಗಿ ರಾಜ, ಮಂತ್ರಿಯ ಪದವಿ..ಇದು ಚಾಂದ್ರಮಾನ ಪದ್ದತಿಯಲ್ಲಿ ಬುಧನು ರಾಜನೂ, ಶುಕ್ರನು ಮಂತ್ರಿಯೂ ಆಗಿದ್ದಾರೆ. ಸೌರಮಾನದಲ್ಲಿ ಶುಕ್ರ ರಾಜ, ಬುಧ ಮಂತ್ರಿ ಆಗುತ್ತಾನೆ.

ಬುಧ ಹಾಗೂ ಶುಕ್ರರು ಮಿತ್ರರು. ಈ ಎರಡು ಗ್ರಹಗಳ ಯುತಿ, ಅಂದರೆ ಒಟ್ಟಿಗೆ ಇರುವುದನ್ನು ಯಾವಾಗಲೂ ಮಳೆಯನ್ನು ಸೂಚಿಸುತ್ತದೆ. ಅಂದರೆ ಮಳೆಗಾಲ ಮುಗಿಲಿಕ್ಕಿಲ್ಲ ಎಂದರ್ಥ. ತಿಂಗಳು ತಿಂಗಳು ಮಳೆ ಆಗಬಹುದು. ಸಸ್ಯಕ್ಕೆ ರವಿ ಅಧಿಪತಿಯಾದರೆ, ಧಾನ್ಯಕ್ಕೆ ಅಧಿಪತಿ ಶನಿ. ಇವರಿಬ್ಬರು ಅಪ್ಪ- ಮಕ್ಕಳೇ ಆಗಿದ್ದರೂ ಶತ್ರುಗಳು. ಹಾಗಾಗಿ ಮಳೆಯು ಧಾನ್ಯ, ಸಸ್ಯಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಷ್ಟವನ್ನೇ ತರಬಹುದು. 

ಹಾಸ್ಯ ಕಲಾವಿದರಿಗೆ ಹಾಸ್ಯ(ತಮಾಷೆಯ) ನಾಟಕ, ಸಿನಿಮಾ, ಕಥೆಗಳಿಗೆ ಪ್ರಜೆಗಳಿಂದ ಪುರಸ್ಕಾರ ಪ್ರಶಂಸೆ ದೊರೆಯಲಿದೆ. ಇನ್ನು ದ್ರವ್ಯ, ಕೋಶ, ಶಸ್ತ್ರಾಸ್ತ್ರಗಳಿಗೆ ಗುರುವು ಅಧಿಪತಿ ಆಗಿದ್ದಾನೆ. ಆ ಕಾರಣಕ್ಕೆ ಇವುಗಳ ಸದುಪಯೋಗ ಜಾಸ್ತಿ ಆಗುತ್ತದೆ. ಇನ್ನೊಂದು ಕಡೆಯಿಂದ ಭಯೋತ್ಪಾದಕರ ಆತಂಕ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತಹ ಪ್ರಹಾರಗಳೂ ಗುರುವಿನ ಆಧಿಪತ್ಯದಿಂದ ಸದುಪಯೋಗ ಆಗಲಿದೆ. 

ಇನ್ನು ಕುಜನಿಂದ ಸಾಂಕ್ರಾಮಿಕ ರೋಗಗಳೂ ಅದಕ್ಕೆ ಪರಿಹಾರಾರ್ಥವಾಗಿ ಶುಕ್ರನಿಂದ ದೇವತಾ ಕಾರ್ಯಗಳೂ ನಡೆಯಲಿದೆ. ಒಟ್ಟಿನಲ್ಲಿ ಸಿಹಿಯೂ ಇದೆ, ಕಹಿಯೂ ಇದೆ. ಅದಕ್ಕಾಗಿ ಬೇವು ಬೆಲ್ಲ ಹಂಚಿ ಸಮಾಜದ ಆರೋಗ್ಯ ಕಾಪಾಡೋಣ. ಅಂದ ಹಾಗೆ ಈ ವರ್ಷದಲ್ಲಿ, ಅಂದರೆ 2023ರಲ್ಲಿ ಪ್ರಮುಖ ಗ್ರಹಗಳ ಸಂಚಾರದ ದಿನಾಂಕಗಳನ್ನು ನೋಡಿಬಿಡೋಣ. ಅಂದರೆ ಶನಿ, ಗುರು, ರಾಹು- ಕೇತು ಈ ಗ್ರಹಗಳ ಸಂಚಾರ ಈ ವರ್ಷದಲ್ಲಿ ಎಲ್ಲಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಶನಿ:  ಜನವರಿ 1, 2023ರಿಂದ ಜನವರಿ 17, 2023ರ ತನಕ ಮಕರ, ಜನವರಿ 17, 2023ರಿಂದ ಡಿಸೆಂಬರ್ 31, 2023ರ ತನಕ ಕುಂಭ ರಾಶಿಯಲ್ಲಿ ಸಂಚಾರ

ಗುರು: ಜನವರಿ 1, 2023ರಿಂದ ಏಪ್ರಿಲ್ 22, 2023ರ ತನಕ ಮೀನ, ಏಪ್ರಿಲ್ 22, 2023ರಿಂದ ಡಿಸೆಂಬರ್ 31, 2023ರ ತನಕ ಮೇಷ ರಾಶಿಯಲ್ಲಿ ಸಂಚಾರ

ರಾಹು- ಕೇತು: ಜನವರಿ 1, 2023ರಿಂದ ಅಕ್ಟೋಬರ್ 30, 2023ರ ತನಕ ಮೇಷ,  ಅಕ್ಟೋಬರ್ 30, 2023ರಿಂದ ಡಿಸೆಂಬರ್ 31, 2023ರ ತನಕ ಮೀನ ರಾಶಿಯಲ್ಲಿ ಸಂಚಾರ

ಇನ್ನು ಚಂದ್ರ ನಿಮ್ಮ ರಾಶಿಯಿಂದ ಎಷ್ಟನೇ ಮನೆಯಲ್ಲಿ ಸಂಚರಿಸುವಾಗ ಶುಭ ಫಲ, ಅಥವಾ ಅಶುಭ ಫಲ ಎಂಬುದನ್ನು ಸಹ ಇದೇ ಲೇಖನದಲ್ಲಿ ನೀಡಲಾಗಿದೆ.

ಮೇಷ ರಾಶಿ-  ಅಶ್ವಿನಿ ನಕ್ಷತ್ರ ನಾಲ್ಕೂ ಪಾದಗಳು, ಭರಣಿ ನಕ್ಷತ್ರ ನಾಲ್ಕೂ ಪಾದಗಳು ಹಾಗೂ ಕೃತ್ತಿಕಾ ನಕ್ಷತ್ರ ಒಂದನೇ ಪಾದ

ಈ ವರ್ಷ ಜನವರಿಯಿಂದ ವರ್ಷದ ಮೊದಲ ಹದಿನೇಳು ದಿನದ ನಂತರದಲ್ಲಿ ಡಿಸೆಂಬರ್ ಅಂತ್ಯದ ತನಕ ಶನೈಶ್ಚರ ಕುಂಭ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಆ ಸ್ಥಾನವು ನಿಮ್ಮ ರಾಶಿಗೆ ಲಾಭ ಸ್ಥಾನ ಆಗುತ್ತದೆ. ಇಲ್ಲಿಯ ತನಕ ಹತ್ತನೇ ಮನೆಯಲ್ಲಿ ಕರ್ಮ ಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾಗ ಸಾಧನೆ ಮಾಡಿದ್ದರ ಫಲವಾಗಿ ಈಗ ಬಹಳ ಲಾಭ ತರುತ್ತಾನೆ. ಆದರೆ ಏಪ್ರಿಲ್ ಇಪ್ಪತ್ತೆರಡರ ನಂತರದಲ್ಲಿ ಗುರು ಗ್ರಹವು ನಿಮ್ಮ ಜನ್ಮ ರಾಶಿಗೆ ಬರುವುದರಿಂದ ಆರೋಗ್ಯದ ಕಡೆಗೆ ಬಹಳ ಜಾಗ್ರತೆಯನ್ನು ವಹಿಸಬೇಕು. ಒಂದು ವೇಳೆ ನಿಮ್ಮ ಜನನ ಕಾಲದಲ್ಲಿ ಕರ್ಕಾಟಕ ರಾಶಿಯಲ್ಲಿ ಏನಾದರೂ ಶನಿ ಇದ್ದಲ್ಲಿ ಇದೀಗ ಗೋಚಾರದಲ್ಲಿ ಲಾಭ ಸ್ಥಾನದಲ್ಲಿ ಸಂಚರಿಸುವ ಶನಿ ನೀಡುವ ಲಾಭಕ್ಕೆ ತಡೆಯಾಗಿ ಪರಿಣಮಿಸಬಹುದು. ಅನಾರೋಗ್ಯ ಸಮಸ್ಯೆಗಳು ಉಲ್ಬಣ ಆಗಬಹುದು ಹಾಗೂ ಅಪವಾದಗಳನ್ನು ಹೊತ್ತುಕೊಳ್ಳಬೇಕಾಗುತ್ತದೆ. ರಾಹು ಹನ್ನೆರಡನೇ ಮನೆಗೆ ಅಕ್ಟೋಬರ್ ಮೂವತ್ತನೇ ತಾರೀಕು ಪ್ರವೇಶಿಸುತ್ತದೆ. ಅಲ್ಲಿಂದ ಆಚೆಗೆ ಖರ್ಚುಗಳ ಪ್ರಮಾಣ ಜಾಸ್ತಿ ಆಗುತ್ತದೆ. ಇನ್ನು ಶುಭ ವಿಚಾರ ಅಂತ ನೋಡುವುದಾದರೆ, ನಿಮಗೆ ಕೇತುವು ಇಷ್ಟಸ್ಥಿತಿಗೆ ಬರುವುದರಿಂದ, ಆರನೇ ಮನೆಯ ಕೇತು ಸಂಚಾರದಿಂದ ದುಃಖ ನಾಶವೂ ಮುಂದಿನ ದಿನಗಳ ಬಗ್ಗೆ ಧೈರ್ಯವೂ ಬರಲಿದೆ. ಸಂತಾನ ಅಪೇಕ್ಷಿತರಿಗೆ ಬಹು ಕಾಲದ ನಿರೀಕ್ಷೆ ಈಡೇರಲಿದೆ. ವಿವಾಹ ವಯಸ್ಕರಿಗೆ ಕಂಕಣ ಬಲ ಕೂಡಿ ಬರಲಿದೆ. ಹಿರಿಯರ ಸೇವೆ ಮಾಡುವಂಥ ಅವಕಾಶ ನಿಮ್ಮದಾಗಲಿದೆ.

ಪರಿಹಾರ: ಗಣಪತಿ ಸೇವೆಯಿಂದ ಬಲ ವೃದ್ದಿ, ಗುರು ಸೇವೆ, ಶಿವನ ಅಂಶ ಇರುವ ದೇವರ ಸ್ಮರಣೆ ಮಾಡಿ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ವೃಷಭ- ಕೃತ್ತಿಕಾ ನಕ್ಷತ್ರ ಎರಡು, ಮೂರು, ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ನಾಲ್ಕೂ ಪಾದ, ಮೃಗಶಿರಾ ನಕ್ಷತ್ರದ ಒಂದು, ಎರಡನೇ ಪಾದ

ಏಪ್ರಿಲ್ ಇಪ್ಪತ್ತೆರಡನೇ ತಾರೀಕಿನ ತನಕ ಗುರು ಗ್ರಹವು ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ, ಮೀನ ರಾಶಿಯಲ್ಲಿ ಸಂಚರಿಸುವಾಗ ವಾಹನ, ಗೃಹಲಾಭ ಕೊಡುತ್ತಾನೆ. ಬಾವಿ,ಸರೋವರ ನಿರ್ಮಾಣ, ನಗರದಲ್ಲಿ ಇರುವವರಿಗೆ ನೀರಿನ ವ್ಯವಸ್ಥೆ ಸುಗಮಗೊಳಿಸುತ್ತಾನೆ. ಆ ನಂತರದಲ್ಲಿ ಹನ್ನೆರಡನೇ ಮನೆಯಾದ ಮೇಷ ರಾಶಿಯಲ್ಲಿ, ವ್ಯಯಸ್ಥಾನದಲ್ಲಿ ಸಂಚರಿಸುತ್ತಾನೆ. ಅಂದರೆ ಖರ್ಚಾಗುತ್ತದೆ ಎಂದರ್ಥ. ಅಕ್ಟೋಬರ್ ನಂತರ ನಾಗದೇವರ ಅನುಗ್ರಹ ಲಭಿಸಲಿದೆ. ಅರ್ಥಾತ್ ಲಾಭ ಸ್ಥಾನಕ್ಕೆ ರಾಹು ಪ್ರವೇಶಿಸುತ್ತಾನೆ. ಇದರ ಜತೆಗೆ ವರ್ಷವಿಡೀ ಶನೈಶ್ಚರ  ಕರ್ಮಸ್ಥಾನದಲ್ಲಿ ಇದ್ದು, ಅಧಿಕ ಶ್ರಮವನ್ನು ಉಂಟು ಮಾಡುತ್ತದೆ. ಕೋರ್ಟು- ಕಚೇರಿ ವ್ಯವಹಾರದಲ್ಲಿ ಅಲೆದಾಟ ಆಗಬಹುದು ಅಥವಾ ಹೊಸದಾಗಿ ಕೋರ್ಟಿನಲ್ಲಿ ವ್ಯಾಜ್ಯಗಳು ದಾಖಲಾಗಬಹುದು. ಇದು ಏಪ್ರಿಲ್ ನಂತರದಲ್ಲಿ ನಡೆಯುವಂಥ ವಿದ್ಯಮಾನಗಳು. ಆರೋಗ್ಯ ಸಮಸ್ಯೆ ಕಾಡಬಹುದು. ಒಂದು ವೇಳೆ ನೀವು ಐವತ್ತು ವಯಸ್ಸು ದಾಟಿದವರಾಗಿದ್ದರೆ ಮಾಸ್ಟರ್ ಚೆಕಪ್ ಮಾಡಿಸಿಕೊಂಡರೆ ಉತ್ತಮ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಮಿಥುನ- ಮೃಗಶಿರಾ ಮೂರು, ನಾಲ್ಕನೇ ಪಾದ, ಆರಿದ್ರಾ ನಕ್ಷತ್ರದ ನಾಲ್ಕೂ ಪಾದ, ಪುನರ್ವಸು ನಕ್ಷತ್ರದ ಒಂದು, ಎರಡು, ಮೂರನೇ ಪಾದ

ಈ ವರ್ಷ ನೀವು ಎಲ್ಲ ಕಷ್ಟಗಳಿಂದ ಹೊರಬರಲಿದ್ದೀರಿ. ಹನ್ನೊಂದನೇ ಮನೆಯಲ್ಲಿ, ಅಂದರೆ ನಿಮ್ಮ ಲಾಭ ಸ್ಥಾನದಲ್ಲಿ ಗುರು ಸಂಚಾರ ಆಗುವ ವೇಳೆ ನಿಮ್ಮನ್ನು ಉನ್ನತ ಮಟ್ಟಕ್ಕೆ ಏರಿಸಬಹುದು. ಚುನಾವಣೆ ಸ್ಪರ್ಧೆಗೆ ಇಳಿಯುವ ಮಿಥುನ ರಾಶಿ ಜಾತಕರಿಗೆ ಗೆಲುವು ಬಹುತೇಕ ನಿಶ್ಚಿತ. ಅವಿವಾಹಿತರು, ಪ್ರಾಪ್ತ ವಯಸ್ಕರಿಗೆ ಕಂಕಣ ಬಲ ಕೂಡಿ ಬರಲಿದೆ. ಕೋರ್ಟ್ ವ್ಯಾಜ್ಯಗಳು ನಡೆಯುತ್ತಿದ್ದು, ತೀರ್ಪು ಏನಾಗಬಹುದೋ ಎಂಬ ಆತಂಕದಲ್ಲಿ ಇರುವವರಿಗೆ ಶುಭ ಸುದ್ಧಿ ಬರುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಆದರೆ ಒಂಬತ್ತನೇ ಮನೆಯಲ್ಲಿ ಶನಿ ಸಂಚಾರ ಇರುವುದರಿಂದ  ನಿಮ್ಮ ಅಭಿವೃದ್ಧಿಗೆ ನೀವೇ ಆತಂಕ ತರುವಂತೆ ಮಾಡಿಕೊಳ್ಳುತ್ತೀರಿ. ಆದ್ದರಿಂದ ಯಾವುದೇ ಕೆಲಸವನ್ನಾದರೂ ಯೋಚಿಸಿ ಕೆಲಸ ಮಾಡಬೇಕು.ಸಹೋದರ- ಸಹೋದರಿಯರ ಹೆಚ್ಚಿನ ಜವಾಬ್ದಾರಿ ಹೊರಬೇಕಾಗಬಹುದು. ಮಕ್ಕಳ ಆರೋಗ್ಯದ ಬಗ್ಗೆ ಆತಂಕ ಉಂಟಾದೀತು.ಅಕ್ಟೋಬರ್ ನಂತರ ರಾಹು ಹತ್ತನೇ ಸ್ಥಾನಕ್ಕೆ ಪ್ರವೇಶಿಸುವುದರಿಂದ ಸಿನಿಮಾ ನಟರಿಗೆ ಹೆಚ್ಚಿನ ಯಶಸ್ಸು ದೊರೆಯಬಹುದು. ಸ್ಪರ್ಧಾ ಪರೀಕ್ಷೆ, ಸಾಧಕರಿಗೆ ಸನ್ಮಾನಗಳು ಆಗಲಿವೆ. ಅಂದ ಹಾಗೆ ಮಿಥುನ ರಾಶಿ ಅಂದರೆ ಅದು ದ್ವಿಸ್ವಭಾವ ರಾಶಿ. ಆ ಕಾರಣಕ್ಕೆ ಚಂಚಲತೆ ಉಪದ್ರವ ಕೂಡ ಆದೀತು. ತಜ್ಞರ ಸಲಹೆ ಪಡೆದು, ಸ್ಪಷ್ಟ ನಿರ್ಧಾರಗಳನ್ನು ಮಾಡಿ, ಮುಂದಡಿ ಇಡಬೇಕು.

ಪರಿಹಾರ: ಸುಬ್ರಹ್ಮಣ್ಯ,ಗಣಪತಿ,ಈಶ್ವರ ಆರಾಧನೆ ಮಾಡಿ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಕರ್ಕಾಟಕ- ಪುನರ್ವಸು ನಾಲ್ಕನೇ ಪಾದ, ಪುಷ್ಯ ನಕ್ಷತ್ರದ ನಾಲ್ಕೂ ಪಾದ, ಆಶ್ಲೇಷಾ ನಕ್ಷತ್ರದ ನಾಲ್ಕೂ ಪದ

ನಿಮಗೆ ಅಷ್ಟಮ ಶನಿ ಪ್ರಾರಂಭ ಆಗಲಿದೆ. ಅಪವಾದ, ಮಾನಸಿಕ ಹಿಂಸೆ, ಅನಾರೋಗ್ಯ, ಹಣಕಾಸಿನ ನಷ್ಟ, ಯತ್ನ ಕಾರ್ಯಗಳಲ್ಲಿ ಭಂಗ ಇತ್ಯಾಧಿ ಅಶುಭ ಫಲಗಳನ್ನು ಪಡೆಯಲಿದ್ದೀರಿ. ಆದರೆ ಗುರು ಹತ್ತನೇ ಮನೆಯಲ್ಲಿ ಇದ್ದು, ಒಂದೆಡೆ ಗೃಹ- ವಾಹನ ಪ್ರಾಪ್ತಿ,ಕರ್ಮ ಪರಿವರ್ತನೆಗಳನ್ನು ನೀಡುತ್ತಾನೆ. ಮತ್ತೊಂದೆಡೆ,  ಉದ್ಯೋಗಿಗಳಿಗೆ ವರ್ಗಾವಣೆ, ಋಣ ಬಾಧೆ, ಕೋರ್ಟು- ಕಚೇರಿ ಅಲೆದಾಟ, ಹೊಸ ಉದ್ಯಮಕ್ಕೆ ಸಾಲ ಇತ್ಯಾದಿ ಫಲಗಳಿವೆ. ನಿಮ್ಮ ಹತ್ತಿರದ ಬಂಧುಗಳಿಂದ ಕೆಟ್ಟ ಸುದ್ದಿಯನ್ನು ಕೇಳುವಂಥ ಸಾಧ್ಯತೆ ಇದೆ. ಅಕ್ಟೋಬರ್ ನಂತರ ಕೇತುವು ನಿಮ್ಮ ದುಃಖ ನಿವಾರಣೆಗೆ ನಿಲ್ಲುತ್ತಾನೆ. ಮೂರನೇ ಮನೆಯಲ್ಲಿ- ಕನ್ಯಾ ರಾಶಿಯಲ್ಲಿ ಕೇತು ಸಂಚರಿಸುವಾಗ  ಶುಭ ಫಲಗಳನ್ನು ನೀಡುತ್ತದೆ. ಗಣಪತಿಯ ದರ್ಶನ, ಸೇವೆ ಇತ್ಯಾದಿ ಮಾಡಿಕೊಂಡು ಸತ್ಪಲ ವೃದ್ಧಿಸಿಕೊಳ್ಳಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿರುವುದು  ಅಗತ್ಯ. ಕಣ್ಣು ನೋವು ಇತ್ಯಾದಿ ಸಂಭವ ಇದೆ. 

ಪರಿಹಾರ: ದೂರ್ವಾಯುಷ್ಯ ಹೋಮವೋ ಅಥವಾ ಅದಕ್ಕಿಂತ ಹೆಚ್ಚಿನದ್ದಾದ ಮೃತ್ಯುಂಜಯ ಹೋಮ ಮಾಡಿಸಿ. ಅಥವಾ ಮೃತ್ಯುಂಜಯ ಜಪವನ್ನು ನೀವೇ ಮಾಡಿ.  

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಸಿಂಹ- ಮಖಾ ನಕ್ಷತ್ರದ ನಾಲ್ಕೂ ಪಾದ, ಪುಬ್ಬಾ ನಕ್ಷತ್ರದ ನಾಲ್ಕೂ ಪಾದ, ಉತ್ತರಾ ಫಲ್ಗುಣಿ ನಕ್ಷತ್ರ ಒಂದನೇ ಪಾದ  

ಜನವರಿ ತಿಂಗಳಿನಿಂದ ಏಪ್ರಿಲ್ ತನಕ ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಇಂಥ ಗೋಚಾರ ಸ್ಥಿತಿಯನ್ನು ನೋಡಿ ಹೇಳುವುದಾದರೆ, ಅಷ್ಟಮ ಗುರುವಿನಿಂದಾಗಿ ವ್ಯವಹಾರಗಳು ಸಲೀಸಾಗಿ ನಡೆಯುವುದಿಲ್ಲ. ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನನಗೆ ಏನೋ ಆಗಿದೆ ಎಂದು ನೀವು ಅಂದುಕೊಂಡಲ್ಲಿ ಇದು ಭ್ರಮೆಯಷ್ಟೆ. ಏಪ್ರಿಲ್ ತಿಂಗಳ ನಂತರ ಭಾಗ್ಯ ಪ್ರಾಪ್ತಿ ಇದೆ. ಉಪನಯನ ಸಂಸ್ಕಾರ ಮಾಡಬೇಕು ಎಂದಿದ್ದಲ್ಲಿ ಸಿಂಹ ರಾಶಿಯಲ್ಲಿ ಹುಟ್ಟಿರುವ ಮಕ್ಕಳಿಗೆ ಏಪ್ರಿಲ್ ನಂತರ ಉಪನಯನ ಮಾಡಬಹುದು. ಏಪ್ರಿಲ್ ತನಕ ಕುಟುಂಬದ ದೈವ – ದೇವರ ವಿಚಾರ ಚಿಂತನೆ, ಶುದ್ಧೀಕರಣ ಇತ್ಯಾದಿ ನಡೆಯುತ್ತದೆ. ಜನವರಿ ಹದಿನೇಳರ ನಂತರ ಶನಿ ಗ್ರಹದ ಸಂಚಾರ ಏಳನೇ ಮನೆಯಲ್ಲಿ ಇರುತ್ತದೆ. ಇದರಿಂದ ತೀರಾ ಬಾಧೆಗಳೇನೂ ಇಲ್ಲ. ಅಕ್ಟೋಬರ್ ತಿಂಗಳ ನಂತರದಲ್ಲಿ ಅನಾರೋಗ್ಯ ಸಮಸ್ಯೆ ಆಗಬಹುದು. ನಾಗನ ಸೇವೆ ಮೂಲಕ ವೈದ್ಯರ ಸಲಹೆ ಪಡೆದರೆ ಕ್ಷೇಮ.  ಅಕ್ಟೋಬರ್ ನಂತರ ಮಾತಿನಲ್ಲಿ ಹಿಡಿತ ಇರಲಿ. ಯಾಕೆಂದರೆ ಸಿಟ್ಟಿನ ಭರದಲ್ಲಿ ಆಡಬಾರದ್ದನ್ನು ಮಾತನಾಡಿದರೆ ಅನಾಹುತ ಆದೀತು. ಮಾತಿನಲ್ಲಿ ಎಚ್ಚರ ಇರಲಿ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ವಿಶೇಷ ಆಸಕ್ತಿ ಉಂಟಾಗುತ್ತದೆ. ಏಪ್ರಿಲ್ ತಿಂಗಳಿಗೆ ಮೊದಲು ಗೃಹ- ವಾಹನ ಲಾಭ ಇದೆ. ಆ ನಂತರದ ದಿನಗಳಲ್ಲಿ ಸಂತಾನ ಅಪೇಕ್ಷಿಗಳಿಗೆ ಸಂತಾನ ಫಲ ನೀಡುತ್ತದೆ.

ಪರಿಹಾರ: ಸಿಂಹ ರಾಶಿಯ ಅಧಿಪತಿ ರವಿಯ ಪ್ರೀತ್ಯರ್ಥವಾಗಿ ತ್ರಿಮೂರ್ತಿ ಆರಾಧನೆ ಮಾಡಿ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಕನ್ಯಾ- ಉತ್ತರಾ ಫಲ್ಗುಣಿ ನಕ್ಷತ್ರ ಎರಡು, ಮೂರು, ನಾಲ್ಕನೇ ಪಾದ, ಹಸ್ತಾ ನಕ್ಷತ್ರದ ನಾಲ್ಕೂ ಪಾದ, ಚಿತ್ತಾ ನಕ್ಷತ್ರದ ಒಂದು, ಎರಡನೇ ಪಾದ

ಜನವರಿ ಹದಿನೇಳರ ನಂತರ ನಿಮಗೆ ಶನಿಯು ಆರನೇ ಮನೆಗೆ ಪ್ರವೇಶಿಸುತ್ತಿದ್ದಾನೆ. ಈ ಸ್ಥಾನವು ಶನಿಗೆ ಶತ್ರುನಾಶ ಸ್ಥಾನ. ಶತ್ರು ಅಂದರೆ ತೊಂದರೆಗಳು, ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು. ಇವೆಲ್ಲ ಶತ್ರುಗಳಾಗಿ ಕಾಣುತ್ತವೆ. ಮುಂದೆ ಈ ಸಮಸ್ಯೆ ಇರುವುದಿಲ್ಲ. ಇದರ ಪೂರ್ಣ ಅನುಭವ ಏಪ್ರಿಲ್  ತನಕ ಬರುತ್ತದೆ. ಆ ನಂತರ ಗುರುವು ಮೇಷ ರಾಶಿಗೆ, ಎಂಟನೇ ಸ್ಥಾನಕ್ಕೆ  ಬಂದಾಗ ತೊಂದರೆಗಳ ಭ್ರಮೆ ಉಂಟಾಗುತ್ತದೆ. ಆದರೆ ವಾಸ್ತವದಲ್ಲಿ ಅದು ತೊಂದರೆಗಳಾಗಿ ಇರುವುದಿಲ್ಲ. ಒಂದು ವೇಳೆ ಸಿಂಹ ರಾಶಿಯವರಾಗಿದ್ದು, ಜನನ ಕಾಲದಲ್ಲಿ ಶನಿಯು ಕರ್ಕಾಟಕದಲ್ಲಿದ್ದು, ಜನ್ಮ ಲಗ್ನವೂ ಕರ್ಕಾಟಕವೇ ಆಗಿದ್ದರೆ ತೊಂದರೆ ನಿವಾರಣೆ ಆಗುವುದೇ ತೊಂದರೆಗೆ ಕಾರಣ ಎನ್ನಬಹುದು. ಜ್ಯೋತಿಷ್ಯ ತಜ್ಞರನ್ನು ಭೇಟಿ ಮಾಡಿ, ಸಂಶಯ ನಿವಾರಿಸಿಕೊಳ್ಳಿ. 

ಪರಿಹಾರ: ಶನಿಯ ಪ್ರೀತ್ಯರ್ಥ ಈಶ್ವರನ ಸೇವೆ, ಹನುಮನ ಸೇವೆ ಮಾಡಿ. ಗುರು ಪ್ರೀತ್ಯರ್ಥ ನೃಸಿಂಹ ದೇವರ ದರ್ಶನ ಮಾಡಿ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ತುಲಾ- ಚಿತ್ತಾ ನಕ್ಷತ್ರ ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕೂ ಪಾದ, ವಿಶಾಖ ನಕ್ಷತ್ರ ಒಂದು, ಎರಡು, ಮೂರನೇ ಪಾದ 

ನಿಮಗೆ ಈಗ ಪಂಚಮ ಶನಿ ಒಂದೆಡೆಯಾದರೆ, ಜನ್ಮ ರಾಶಿಯಲ್ಲಿನ ಕೇತುವಿನ ಪ್ರಭಾವ ಮತ್ತೊಂದೆಡೆ. ಶನಿ ಗ್ರಹದ ಪ್ರಭಾವದಿಂದ ಅನಾರೋಗ್ಯ ಅನುಭವಿಸಬೇಕಾದೀತು. ವಾಸಿ ಆಗದ ಹುಣ್ಣು, ಗಾಯಗಳಿದ್ದರೆ ಸ್ವಲ್ಪ ತೊಂದರೆ ಆದೀತು. ಆರಂಭದ ನಾಲ್ಕು ತಿಂಗಳು, ಅಂದರೆ ಜನವರಿಯಿಂದ ಏಪ್ರಿಲ್ ತನಕ ಗುರು ಗ್ರಹವೂ ಪ್ರತಿಕೂಲ ಸ್ಥಿತಿಯಲ್ಲಿದೆ. ಇದರ ಜತೆಗೆ ರಾಹು ಸ್ಥಿತಿಯೂ ಅನುಕೂಲವಾಗಿಲ್ಲ. ಬೇರೆ ಗ್ರಹಗಳು ವೇಗವಾದ ಪರಿಭ್ರಮಣೆಯಲ್ಲಿ ಇರುವುದರಿಂದ ಆಗಾಗ ಸ್ವಲ್ಪ ಕ್ಷೇಮ ಇರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸಂಕಷ್ಟ ಬರಬಹುದು. ಅದೇ ರೀತಿ ಉದ್ಯೋಗ ಹುಡುಕುವವರಿಗೆ ಕೆಲಸ ಲಭಿಸಿದರೂ ಏಪ್ರಿಲ್ ತನಕ ಕಷ್ಟವೇ. ಸಾಲದ ಬಾಧೆ ಕಾಡಬಹುದು.ಕೋರ್ಟು- ಕಚೇರಿಯ ಅಲೆದಾಟಗಳು ವರ್ಷದ ಮೊದಲ ನಾಲ್ಕು ತಿಂಗಳು, ಏಪ್ರಿಲ್ ತನಕ ಇರುತ್ತದೆ. ಆ ನಂತರ ಗುರುವಿನ ಇಷ್ಟ ಸ್ಥಿತಿಯಿಂದ ವರ್ಷಾಂತ್ಯದ ತನಕ, ಅಂದರೆ ಡಿಸೆಂಬರ್ ಕೊನೆವರೆಗೆ ಕ್ಷೇಮವೂ ಇದೆ. ಅವಿವಾಹಿತರು- ಪ್ರಾಪ್ತವಯಸ್ಕರಿಗೆ ವಿವಾಹ ಯೋಗವೂ ಇದೆ. ಅಕ್ಟೋಬರ್ ನಂತರ ರಾಹುವು ಮೀನರಾಶಿಗೆ ಬರುವುದರಿಂದ ಶನಿಯ ಪ್ರಭಾವದ ಕಷ್ಟಗಳು ನಿಮಗೆ ಅನುಭವಕ್ಕೆ ಬರಲಾರದು. ರಾಶ್ಯಾಧಿಪತಿಯಾದ ಶುಕ್ರನಿಗೆ ರಾಜ- ಮಂತ್ರಿ ಪಟ್ಟವು ಈ ವರ್ಷದ ಹೊಸ ಸಂತ್ಸರದಲ್ಲಿ ಇರುವುದರಿಂದ ಕಷ್ಟಗಳಿದ್ದರೂ ಅದಕ್ಕೆ ತಕ್ಕ ಪರಿಹಾರ ಮಾರ್ಗವು ಕಾಲ ಕಾಲಕ್ಕೆ ಲಭಿಸಲಿದೆ. ಸಹೋದರ ವರ್ಗದಲ್ಲಿ ಕಲಹವೋ ಅಥವಾ ಕಲಹ ಇದ್ದರೆ ಅದು ಸುಖಾಂತ್ಯವೂ ಆಗಲಿದೆ. ದೇವತಾ ಕಾರ್ಯಗಳು, ಶುಭ ಕಾರ್ಯಗಳು ನೆರವೇರಲಿದೆ. 

ಪರಿಹಾರ: ನವಗ್ರಹ ಪ್ರೀತ್ಯರ್ಥ ನವಗ್ರಹ ಧಾನ್ಯವನ್ನು ದಾನ ಕೊಡುವುದು, ಸಾಧ್ಯ ಇದ್ದವರು ನವಗ್ರಹ ಹೋಮ ಮಾಡಿಸುವುದರಿಂದ ಅನಿಷ್ಟಗಳು ನಿವಾರಣೆ ಆಗುತ್ತದೆ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ವೃಶ್ಚಿಕ – ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನೂರಾಧ ನಕ್ಷತ್ರದ ನಾಲ್ಕೂ ಪಾದ, ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದ

ಈ ವರ್ಷದ ಆರಂಭ ಜನವರಿಯಿಂದ ಏಪ್ರಿಲ್ ತನಕ ಐದನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ವೃಶ್ಚಿಕ ರಾಶಿಯವರಿಗೆ ಶುಭ ಕಾಲ ಇದು. ವಿದ್ಯಾರಂಭಕ್ಕೆ, ಉಪನಯನಕ್ಕೆ ಯೋಗ್ಯ ಸಮಯ. ಏಕೆಂದರೆ ಗುರುಬಲ ಇದೆ. ಮೊದಲ ನಾಲ್ಕು ತಿಂಗಳು ಭಾಗ್ಯ ಪ್ರಾಪ್ತಿ, ಸ್ಥಾನ- ಮಾನ, ಗೌರವಾದರಗಳು, ಧನ ಪ್ರಾಪ್ತಿಯ ಕಾಲವಾಗಿ ಇರುತ್ತದೆ. ಅದಾದ ನಂತರದಲ್ಲಿ ಡಿಸೆಂಬರ್ ಕೊನೆ ತನಕ.ಗುರು ಗ್ರಹ ಆರನೇ ಮನೆಯಲ್ಲಿ ಸಂಚರಿಸುವುದರಿಂದ ಋಣ ಬಾಧೆ, ಕೋರ್ಟು- ಕಚೇರಿ ಅಲೆದಾಟ ಇರುತ್ತವೆ. ಉದ್ಯೋಗದಲ್ಲಿ ವರ್ಗಾವಣೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಧನಾಗಮ ಇತ್ಯಾದಿ ಫಲಗಳಿವೆ. ಕುಟುಂಬ ಕಲಹಗಳು ತಲೆ ಎತ್ತಬಹುದು.  ಅಕ್ಟೋಬರ್ ನಂತರ ದುಃಖ ದೂರವಾಗುತ್ತದೆ. ಗಣಪತಿ ಸೇವೆಯಿಂದ ಲಾಭಗಳಿವೆ. ದುರ್ಗಾ ಸೇವೆ, ದುರ್ಗಾ ಪೂಜೆಗಳಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಏಪ್ರಿಲ್ ತಿಂಗಳಿಂದ ಡಿಸೆಂಬರ್ ಕೊನೆ ತನಕ ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿ. 

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಧನು ರಾಶಿ: ಮೂಲಾ ನಕ್ಷತ್ರದ ನಾಲ್ಕೂ ಪಾದ, ಪೂರ್ವಾಷಾಢ ನಕ್ಷತ್ರದ ನಾಲ್ಕೂ ಪಾದ, ಉತ್ತರಾಷಾಢ ನಕ್ಷತ್ರ ಒಂದನೇ ಪಾದ

ಜನವರಿಯಿಂದ ಏಪ್ರಿಲ್ ತನಕ, ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ವಾಹನ ಖರೀದಿ, ಭೂಮಿ ಖರೀದಿ, ಹೊಸ ಮನೆ ಕಟ್ಟಿದವರಿಗೆ ಗೃಹ ಪ್ರವೇಶ ಮಾಡುವಂಥ ಶುಭ ಫಲಗಳಿವೆ. ಅದೇ ರೀತಿ ಆರೋಗ್ಯದ ಕಡೆಗೂ ಗಮನ ಇರಲಿ. ವಾತಾವರಣದಲ್ಲಿನ ಬದಲಾವಣೆಯಿಂದ ಅನಾರೋಗ್ಯ ಸಮಸ್ಯೆ ಬರಬಹುದು. ಕರ್ಮ ಪರಿವರ್ತನೆ,ಉದ್ಯೋಗಿಗಳಿಗೆ ಸ್ಥಾನ ಪಲ್ಲಟ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಇದೇ ವೇಳೆ ಅಧಿಕ ಧನ ವ್ಯಯವೂ ಇದೆ. ದೂರದ ಕುಟುಂಬದ ಸೂತಕಾದಿ ಸುದ್ದಿ ಬರಬಹುದು. ಜನವರಿ ಹದಿನೇಳರ ನಂತರ ಶನಿಯು ನಿಮಗೆ ಸೌಭಾಗ್ಯದಾಯಕನೂ ಆಗಿರುತ್ತಾನೆ. ರಾಜಕಾರಣಿಗಳಿಗೆ ಯಶಸ್ಸಿನ ಕಾಲ ಇದು. ಅಕ್ಟೋಬರ್ ನಂತರ ರಾಹು- ಕೇತುಗಳು ಅನನುಕೂಲವೆ. ಯಶಸ್ಸುಗಳ ಮೇಲಿಂದ ಮೇಲೆ ದೊರೆಯುತ್ತದೆ. ಜತೆಗೆ ನಿರುತ್ಸಾಹವೂ ಬರಬಹುದು. ಕೆಲವೊಮ್ಮೆ ಬಂಧು- ಮಿತ್ರರ ಬಗ್ಗೆ ಸಂಶಯವೂ ಬರಬಹುದು. 

ಪರಿಹಾರ: ನಾಗಾರಾಧನೆ, ಸುಬ್ರಹ್ಮಣ್ಯ ಸೇವೆಗಳಿಂದ ಭಾವೋದ್ವೇಗ ನಿಯಂತ್ರಣ ಮಾಡಿಕೊಳ್ಳಿ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಮಕರ- ಉತ್ತರಾಷಾಢ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ನಾಲ್ಕೂ ಪಾದ, ಧನಿಷ್ಠಾ ನಕ್ಷತ್ರದ ಒಂದು, ಎರಡನೇ ಪಾದ

ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಶನಿ ಸಂಚಾರ ಜನವರಿ ಹದಿನೇಳನೇ ತಾರೀಕಿನಿಂದ ಶುರುವಾಗುತ್ತದೆ. ಅಂದ ಹಾಗೆ ಶನಿಯು ನಿಮ್ಮ ರಾಶಿಗೆ ಅಧಿಪತಿ. ಕುಟುಂಬ ಕಲಹ, ಬಾಯಿಗೆ ಸಂಬಂಧಿಸಿದ ತೊಂದರೆಗಳು ಬರಬಹುದು. ಏಪ್ರಿಲ್ ತನಕ ಗುರು ಗ್ರಹ ಅನುಕೂಲ ಸ್ಥಿತಿಯಲ್ಲಿ ಇರುವುದಿಲ್ಲ. ಆದರೂ ಅವಿವಾಹಿತರಿಗೆ ಕಂಕಣ ಬಲ ಬರಲಿದೆ. ಏಪ್ರಿಲ್ ಒಳಗೆ ಯೋಗ ಪ್ರಾಪ್ತಿಯ ಕಾಲವಾಗಿರುತ್ತದೆ. ಆ ನಂತರ ಗೃಹ, ವಾಹನ ಲಾಭ ಇದೆ. ಉದ್ಯೋಗ ಪರಿವರ್ತನೆ,ವರ್ಗಾವಣೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಏಪ್ರಿಲ್ ತನಕ ಆತಂಕಗಳಿದ್ದರೂ ಭಾಗ್ಯ ಪ್ರಾಪ್ತಿ, ಹಿರಿಯರ ದರ್ಶನಗಳಿವೆ.ಅಕ್ಟೋಬರ್ ನಂತರ ರಾಹುವು ನಿಮಗೆ ತೃತೀಯದಲ್ಲಿ ಬರುವುದರಿಂದ ಭಾಗ್ಯ ವೃದ್ಧಿ ಆಗುತ್ತದೆ. ದುರ್ಗಾ ಸೇವೆ, ನಾಗ ಸೇವೆ ಮಾಡುವುದರಿಂದ ಶುಭ ಫಲಗಳ ವೃದ್ಧಿಯೂ ಅಶುಭ ಫಲಗಳ ಕ್ಷೀಣತೆಯೂ ಆಗಲಿದೆ. ರಾಜಕಾರಣಿಗಳಿಗೆ ಏಪ್ರಿಲ್ ನಂತರದಲ್ಲಿ ವಿಶೇಷ ಜವಾಬ್ದಾರಿ ಲಭಿಸಲಿದೆ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಕುಂಭ- ಧನಿಷ್ಠಾ ಮೂರು, ನಾಲ್ಕನೇ ಪಾದ, ಶತಭಿಷಾ ನಕ್ಷತ್ರದ ನಾಲ್ಕೂ ಪಾದ, ಪೂರ್ವಾಭಾದ್ರ ನಕ್ಷತ್ರ ಒಂದು, ಎರಡು, ಮೂರನೇ ಪಾದ 

ನಿಮ್ಮ ರಾಶಿಗೆ ಜನವರಿ ಹದಿನೇಳನೇ ತಾರೀಕಿನಿಂದಲೇ ಜನ್ಮ ರಾಶಿಗೆ ಶನಿ ಸಂಚಾರ ಆರಂಭವಾಗಲಿದೆ. ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಸೂಕ್ತ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಏಪ್ರಿಲ್ ತನಕ ನಾಯಕತ್ವ ಸ್ಥಾನಕ್ಕೆ ಧಕ್ಕೆ ಇಲ್ಲ. ಇದರ ಪರಿಣಾಮವಾಗಿ ಅಂದರೆ, ರಾಜಕಾರಣಿಗಳು ಸರಿಯಾಗಿ ನಾಯಕತ್ವ ನಿಭಾಯಿಸಿದ್ದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ ಯಶಸ್ಸೂ ಸಿಗಲಿದೆ. ಏಪ್ರಿಲ್ ನಂತರದಲ್ಲಿ ಸಹೋದರ ವರ್ಗದಲ್ಲಿ ಭಿನ್ನಮತ ಅಥವಾ ಆಸ್ತಿ ವಿಚಾರದಲ್ಲಿ ವಿವಾದ ಇದ್ದಲ್ಲಿ ಅದರ ಪರಿಹಾರವೂ ಆಗಲಿದೆ. ಸಹೋದರರಿಗೆ ಅನಾರೋಗ್ಯ ಉಂಟಾದೀತು. ಕೋರ್ಟು- ಕಚೇರಿ ಅಲೆದಾಟಗಳಿದ್ದಲ್ಲಿ ಏಪ್ರಿಲ್ ಒಳಗೆ ಒಂದು ತೀರ್ಮಾನಕ್ಕೆ ಬರಬಹುದು. ಅವಿವಾಹಿತರಿಗೆ ಏಪ್ರಿಲ್ ನಂತರದಲ್ಲಿ ವಿವಾಹ ಯೋಗ ಇದೆ. ರಾಜ ಕಾರಣಿಗಳಿಗೆ ಉನ್ನತ ಸ್ಥಾನ, ಚುನಾವಣೆಯಲ್ಲಿ ಗೆಲುವು ಸಿಗಲಿದೆ. ಅಕ್ಟೋಬರ್ ನಂತರ ರಾಹು ದ್ವಿತೀಯ, ಕೇತು ಅಷ್ಟಮದಲ್ಲಿ ಬರುವುದರಿಂದ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು, ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಡುವ ಸಾಧ್ಯತೆಗಳಿವೆ. 

ಪರಿಹಾರ: ಸುಬ್ರಹ್ಮಣ್ಯ, ಈಶ್ವರ ಸೇವೆಗಳಿಂದ ತೊಂದರೆ ನಿವಾರಿಸಿಕೊಳ್ಳಬಹುದು. 

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಮೀನ- ಪೂರ್ವಾಭಾದ್ರ ನಕ್ಷತ್ರ ನಾಲ್ಕನೇ ಪಾದ, ಉತ್ತರಾಭಾದ್ರ ನಕ್ಷತ್ರ ನಾಲ್ಕೂ ಪಾದ, ರೇವತಿ ನಕ್ಷತ್ರದ ನಾಲ್ಕೂ ಪಾದ

ನಿಮ್ಮ ರಾಶಿಗೆ ಜನವರಿ ಹದಿನೇಳರಿಂದ ವ್ಯ ಸ್ಥಾನದಲ್ಲಿ ಶನಿ ಸಂಚಾರ ಆರಂಭವಾಗುತ್ತದೆ. ಇದರಿಂದ ನಿಮಗೆ ಅಧಿಕ ವ್ಯಯ,ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಜನ್ಮ ಸ್ಥಾನದಲ್ಲಿನ ಗುರುವಿನ ಪ್ರಭಾವವೂ ಜತೆಯಾಗಿ, ಏಪ್ರಿಲ್ ತನಕ ಅಲ್ಲೇ ಇರುವುದರಿಂದ ಈ ಎಲ್ಲ ಫಲಕ್ಕೆ  ಇನ್ನಷ್ಟು ಪುಷ್ಟಿ ಕೊಡುತ್ತದೆ. ಅಕ್ಟೋಬರ್ ನಲ್ಲಿ ರಾಹುವು ಜನ್ಮ ರಾಶಿಗೇ ಬರುವುದರಿಂದ ಇದು ಕೂಡ ಅನಾರೋಗ್ಯ ಸೂಚಕವೇ. ಆದರೆ ಆ ಹೊತ್ತಿಗೆ ದ್ವಿತೀಯ ಗುರುವು ಇದಕ್ಕೆಲ್ಲ ಉತ್ತಮ ಸುಧಾರಣೆ ತರಲಿದೆ. ಏಪ್ರಿಲ್ ನಂತರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯೋಗಿಗಳಿಗೆ ಬಡ್ತಿ, ವರ್ಗಾವಣೆ ದೊರಕಲಿದೆ. ಅವಿವಾಹಿತರಿಗೆ- ಪ್ರಾಪ್ತ ವಯಸ್ಕರಿಗೆ- ವೈವಾಹಿಕ ದೋಷ ಇದ್ದವರಿಗೆ ಪರಿಹಾರ ಮಾಡಿಕೊಂಡಿದ್ದಲ್ಲಿ ವಿವಾಹ ಯೋಗ ಫಲಗಳಿವೆ. ದೋಷ ಇಲ್ಲದಿದ್ದವರಿಗೆ ವಿವಾಹ ಯೋಗವು ಪ್ರಾಪ್ತಿಯಾಗಿ ನಿರಾತಂಕದಿಂದ ನಡೆಯಲಿದೆ. ಅಂದ ಹಾಗೆ ಮೀನ ರಾಶಿಯವರು ಸ್ವಭಾವತಃ ತುಂಬಾ ಮೃದು ಸ್ವಭಾವದವರು ಆಗಿರುತ್ತಾರೆ. ಚಂಚಲತೆಯೂ ಇರುವುದರಿಂದ ಗ್ರಹರ ಅನನುಕೂಲ ಸ್ಥಿತಿಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುತ್ತದೆ. ವಿಷ್ಣು ಸಹಸ್ರನಾಮ ನಿತ್ಯವೂ ಪಾರಾಯಣ ಮಾಡಿದಲ್ಲಿ ಎಲ್ಲವೂ ಅನುಕೂಲಕರವಾಗಿ ಫಲ ನೀಡಲಿದೆ. ಸಂತಾನ ನಿರೀಕ್ಷೆಯಲ್ಲಿ ಈಗಾಲೇ ಗರ್ಭಧಾರಣೆ ಆಗಿದ್ದಲ್ಲಿ ಉತ್ತಮ ಸಂತಾನವೂ ಆಗಲಿದೆ. ಅಕ್ಟೋಬರ್ ನಂತರ ಸಪ್ತಮಕ್ಕೆ ಕೇತು ಬರುವುದರಿಂದ ಹಣದ ವ್ಯವಹಾರ, ಬಡ್ಡಿ ಲೇವಾದೇವಿ ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಒಳ್ಳೆಯದು. ಗಣಪತಿ ಸೇವೆಯಿಂದ ಕ್ಷೇಮ ಆಗಲಿದೆ.

ನಿಮ್ಮ ಜನ್ಮ ರಾಶಿಯಲ್ಲಿ, ತೃತೀಯದಲ್ಲಿ, ಆರು, ಏಳು, ಹತ್ತು, ಹನ್ನೊಂದನೇ ಮನೆಗಳನ್ನು ಗೋಚಾರದಲ್ಲಿ ಚಂದ್ರ ಸಂಚರಿಸುವಾಗ ಶುಭ ಫಲಗಳು ಕಂಡುಬರುವವು. ಉಳಿದಂತೆ ಎರಡು, ನಾಲ್ಕು, ಐದು, ಎಂಟು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿ ಸಂಚರಿಸುವಾಗ ಅಶುಭ ಫಲಗಳು.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿಗಳು. ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಕರಾರುವಾಕ್ ಭವಿಷ್ಯ ನುಡಿದು, ಇಡೀ ರಾಜ್ಯದ ಗಮನ ಸೆಳೆದವರು. ವಿವಿಧ ಜ್ಯೋತಿಷ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ. 

Latest News

Related Posts