ಈ ವರ್ಷ ಫೆಬ್ರವರಿ 24ರಂದು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಸ್ತೋತ್ರವನ್ನು ಇಲ್ಲಿ ನೀಡಲಾಗಿದೆ. ಯಾರಿಗೆ ಇದನ್ನು ಹೇಳಿಕೊಳ್ಳಲು ಸಾಧ್ಯವೋ ಅವರು ಹೇಳಿಕೊಳ್ಳಬಹುದು. ಅಥವಾ ಈ ಲೇಖನದಲ್ಲಿಯೇ ನೀಡಿರುವಂಥ ಯೂಟ್ಯೂಬ್ ಲಿಂಕ್ ಬಳಸಿಕೊಂಡು, ಸ್ತೋತ್ರವನ್ನು ಶ್ರವಣ ಮಾಡಬಹುದು. ಸ್ತೋತ್ರವನ್ನು ಕೇಳಿಸಿಕೊಳ್ಳುತ್ತಾ ಜೊತೆಜೊತೆಗೆ ಹೇಳಿಕೊಳ್ಳಲು ಅನುಕೂಲವಾಗುತ್ತದೆ. ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾತ್ರವೇ ಬಲ ಹಾಗೂ ಬೆಂಬಲ. ಎಲ್ಲ ಮನುಷ್ಯ ಪ್ರಯತ್ನಗಳ ಜೊತೆಗೆ ದೈವಬಲವೂ ಜೊತೆಯಾದರೆ, ಗುರುಗಳ ಅನುಗ್ರಹವೂ ಸಿಕ್ಕರೆ ಅದರ ಫಲಿತಾಂಶ ಘನವಾಗಿ ಇರುತ್ತದೆ. ಎಲ್ಲರಿಗೂ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಆಗಲಿ ಎಂದು ಪ್ರಾರ್ಥಿಸುತ್ತಾ ಸ್ತೋತ್ರವನ್ನು ಇಲ್ಲಿ ನೀಡಲಾಗಿದೆ.
ಶ್ರೀ ರಾಘವೇಂದ್ರ ಸ್ತೋತ್ರಮ್
ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾ
ಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |
ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ || 1 ||
ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-
ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ |
ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-
ವಾಗ್-ದೇವತಾ-ಸರಿದಮುಂ ವಿಮಲೀಕರೋತು || 2 ||
ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ || 3 ||
ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ-
ನಿಷೇವಣಾಲ್ಲಬ್ಧ-ಸಮಸ್ತ-ಸಂಪತ್ |
ದೇವ-ಸ್ವಭಾವೋ ದಿವಿಜ-ದ್ರುಮೋಽಯ-
ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ || 4 ||
ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ || 5 ||
ನಿರಸ್ತ-ದೋಷೋ ನಿರವದ್ಯ-ವೇಷಃ
ಪ್ರತ್ಯರ್ಥಿ-ಮೂಕತ್ವ-ನಿದಾನ-ಭಾಷಃ |
ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ
ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ || 6 ||
ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-
ವಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |
ದತ್ವಾ ಶರೀರೋತ್ಥ-ಸಮಸ್ತ-ದೋಷಾನ್
ಹತ್ವಾ ಸ ನೋಽವ್ಯಾದ್ ಗುರು-ರಾಘವೇಂದ್ರಃ || 7 ||
ಯತ್-ಪಾದೋದಕ-ಸಂಚಯಃ ಸುರ-ನದಿ-ಮುಖ್ಯಾಪಗಾಽಽಸಾದಿತಾ-
ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |
ದುಸ್ತಾಪತ್ರಯ-ನಾಶನೋ ಭುವಿ ಮಹಾ-ವಂಧ್ಯಾ-ಸು-ಪುತ್ರ-ಪ್ರದೋ
ವ್ಯ್ಂಗ-ಸ್ವಂಗ-ಸಮೃದ್ಧಿ-ದೋ ಗ್ರಹ-ಮಹಾಪಾಪಾಪಹಸ್ತಂ ಶ್ರಯೇ || 8 ||
ಯತ-ಪಾದ-ಕಂಜ-ರಜಸಾ ಪರಿಭೂಷಿತಾಂಗಾ
ಯತ್-ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |
ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃ
ತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || 9 ||
ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ |
ವಿಜಯೀಂದ್ರ-ಕರಾಬ್ಜೋತ್ಥ-ಸುಧೀಂದ್ರ-ವರ-ಪುತ್ರಕಃ || 10 ||
ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ |
ಜ್ಞಾನ-ಭಕ್ತಿ-ಸು-ಪುತ್ರಾಯುರ್ಯಶಃ-ಶ್ರೀ-ಪುಣ್ಯ-ವರ್ಧನಃ || 11 ||
ಪ್ರತಿ-ವಾದಿ-ಜಯ-ಸ್ವಾಂತ-ಭೇದ-ಚಿಹ್ನಾದರೋ ಗುರುಃ |
ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || 12 ||
ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |
ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ || 13 ||
ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ |
ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || 14 ||
ಅಜ್ಞಾನ-ವಿಸ್ಮೃತಿ-ಭ್ರಾಂತಿ-ಸಂಶಯಾಪಸ್ಮೃತಿ-ಕ್ಷಯಾಃ |
ತಂದ್ರಾ-ಕಂಪ-ವಚಃ-ಕೌಂಠ್ಯ-ಮುಖಾ ಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ || 15 ||
“(ಓಂ) ಶ್ರೀ ರಾಘವೇಂದ್ರಾಯ ನಮಃ” ಇತ್ಯಷ್ಟಾಕ್ಷರ-ಮಂತ್ರತಃ |
ಜಪಿತಾದ್ ಭಾವಿತಾನ್ನಿತ್ಯಮಿಷ್ಟಾರ್ಥಾಃ ಸ್ಯುರ್ನ ಸಂಶಯಃ || 16 ||
ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ-ಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮ-ವಿತ್ || 17 ||
ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || 18 ||
ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ |
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ || 19 ||
ಸರ್ವ-ಯಾತ್ರ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || 20 ||
ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || 21 ||
ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || 22 ||
ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || 23 ||
ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || 24 ||
ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || 25 ||
ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || 26 ||
ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || 27 ||
ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || 28 ||
ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || 29 ||
ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || 30 ||
ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || 31 ||
ಇತಿ ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |
ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ || 32 ||
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || 33 ||
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ || 34 ||
|| ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಸ್ತೋತ್ರಮ್ ಸಂಪೂರ್ಣಮ್ ||
ಸ್ತೋತ್ರಪಠ್ಯವನ್ನು https://stotra.wordpress.com/2010/12/02/sri-raghavendra-stotra-kan-2/ ಈ ಲಿಂಕ್ ನಿಂದ ತೆಗೆದುಕೊಳ್ಳಲಾಗಿದೆ.
ರಾಘವೇಂದ್ರ ಸ್ವಾಮಿ ಸ್ತೋತ್ರ ಯೂಟ್ಯೂಬ್ ಲಿಂಕ್:
https://www.youtube.com/watch?v=6nVJsuFPlCc&list=RD6nVJsuFPlCc&start_radio=1
ಶ್ರೀ ರಾಘವೇಂದ್ರ ಸ್ತೋತ್ರದ (ಶ್ರೀ ಅಪ್ಪಣಾಚಾರ್ಯ ವಿರಚಿತ) ಒಂದೊಂದು ಶ್ಲೋಕವೂ ಅತ್ಯಂತ ಶಕ್ತಿಯುತವಾಗಿದ್ದು, ವಿಭಿನ್ನ ಫಲಗಳನ್ನು ನೀಡುತ್ತವೆ. ಮುಖ್ಯವಾಗಿ ಈ ಸ್ತೋತ್ರದ ಕೊನೆಯ ಭಾಗದಲ್ಲಿ (ಫಲಶ್ರುತಿ) ಯಾವ ಪಠಣಕ್ಕೆ ಯಾವ ಫಲ ಸಿಗುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.
ಅದರ ಸಂಕ್ಷಿಪ್ತ ವಿವರಣೆ ಇಲ್ಲಿದೆ:
ದೈಹಿಕ ಮತ್ತು ಮಾನಸಿಕ ಆರೋಗ್ಯ (Health & Peace)
- ರೋಗ ನಿವಾರಣೆ: ಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಕುಷ್ಠರೋಗದಂತಹ ಕಠಿಣ ಕಾಯಿಲೆಗಳು ಮತ್ತು ಇತರ ದೈಹಿಕ ಬಾಧೆಗಳು ತಕ್ಷಣವೇ ನಿವಾರಣೆಯಾಗುತ್ತವೆ (ಶ್ಲೋಕ 23).
- ದೃಷ್ಟಿ ಮತ್ತು ವಾಕ್ ಶಕ್ತಿ: ಅಂಧರಿಗೆ ದಿವ್ಯ ದೃಷ್ಟಿ ಮತ್ತು ಮೂಕರಿಗೆ ವಾಕ್ ಶಕ್ತಿ ಲಭಿಸುತ್ತದೆ (ಶ್ಲೋಕ 24).
- ಉದರ ಸಂಬಂಧಿ ದೋಷ: ಈ ಸ್ತೋತ್ರದಿಂದ ಅಭಿಮಂತ್ರಿಸಿದ (ಜಪಿಸಿದ) ನೀರನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ವಾಸಿಯಾಗುತ್ತವೆ (ಶ್ಲೋಕ 25).
- ಮಾನಸಿಕ ದೋಷ: ಅಜ್ಞಾನ, ಮರೆವು, ಭ್ರಾಂತಿ, ಸಂಶಯ ಮತ್ತು ಅತಿಯಾದ ನಿದ್ದೆಯಂತಹ ಮಾನಸಿಕ ದೋಷಗಳು ರಾಯರ ಅನುಗ್ರಹದಿಂದ ದೂರವಾಗುತ್ತವೆ (ಶ್ಲೋಕ 15).
ಸಂಪತ್ತು ಮತ್ತು ಸಂತಾನ ಭಾಗ್ಯ (Wealth & Success)
- ಸಕಲ ಇಷ್ಟಾರ್ಥ ಸಿದ್ಧಿ: ದಿನದ ಮೂರು ಕಾಲದಲ್ಲಿ (ಕಾಲತ್ರಯ) ಪ್ರಾರ್ಥನೆ ಮಾಡುವವರಿಗೆ ಇಹಲೋಕ ಮತ್ತು ಪರಲೋಕದ ಎಲ್ಲಾ ಸುಖಗಳು ಸಿಗುತ್ತವೆ (ಶ್ಲೋಕ 18).
- ಸಂತಾನ ಭಾಗ್ಯ: ವೃಂದಾವನದ ಮುಂದೆ ದೀಪ ಹಚ್ಚಿ ಈ ಸ್ತೋತ್ರ ಪಠಿಸುವುದರಿಂದ ಸತ್ಪುತ್ರ ಯೋಗ ಲಭಿಸುತ್ತದೆ (ಶ್ಲೋಕ 28).
- ಐಶ್ವರ್ಯ: ಪೂರ್ಣ ಆಯಸ್ಸು ಮತ್ತು ಪೂರ್ಣ ಸಂಪತ್ತು ಈ ಸ್ತೋತ್ರದ ಜಪದಿಂದ ಸಿದ್ಧಿಸುತ್ತದೆ (ಶ್ಲೋಕ 24).
ಗ್ರಹ ದೋಷ ಮತ್ತು ಭಯ ನಿವಾರಣೆ (Protection)
- ದುಷ್ಟ ಗ್ರಹಗಳ ಬಾಧೆ: ಸಮಸ್ತ ದುಷ್ಟ ಗ್ರಹಗಳ ಪೀಡೆಯನ್ನು ನಿಗ್ರಹಿಸುವ ಶಕ್ತಿ ಈ ಸ್ತೋತ್ರಕ್ಕಿದೆ (ಶ್ಲೋಕ 5).
- ದುಷ್ಟ ಶಕ್ತಿಗಳ ಭಯ: ಭೂತ, ಪ್ರೇತ, ಪಿಶಾಚಿಗಳ ಬಾಧೆ ಇರುವವರು ಗ್ರಹಣ ಕಾಲದಲ್ಲಿ ಅಥವಾ ಪುಷ್ಯಾರ್ಕ ಯೋಗದಲ್ಲಿ 108 ಬಾರಿ ಜಪಿಸಿದರೆ ಆ ಬಾಧೆಗಳಿಂದ ಮುಕ್ತರಾಗುತ್ತಾರೆ (ಶ್ಲೋಕ 27).
- ಆಕಸ್ಮಿಕ ಭಯ: ರಾಜ (ಸರ್ಕಾರ), ಕಳ್ಳರು, ಹುಲಿ, ಹಾವು ಮತ್ತು ಮೊಸಳೆಗಳಂತಹ ಪ್ರಾಣಿಗಳಿಂದ ಉಂಟಾಗುವ ಭಯ ಈ ಸ್ತೋತ್ರದ ಪ್ರಭಾವದಿಂದ ದೂರವಾಗುತ್ತದೆ (ಶ್ಲೋಕ 30).
ಆಧ್ಯಾತ್ಮಿಕ ಮತ್ತು ವಿದ್ಯಾ ಪ್ರಗತಿ (Knowledge)
- ಜ್ಞಾನ ಮತ್ತು ಭಕ್ತಿ: ಶಾಸ್ತ್ರಾರ್ಥ ಜ್ಞಾನ, ದಿವ್ಯ ಜ್ಞಾನ ಮತ್ತು ಹರಿ-ಗುರುಗಳಲ್ಲಿ ಅಚಲವಾದ ಭಕ್ತಿ ಮೂಡುತ್ತದೆ (ಶ್ಲೋಕ 21, 29).
- ವಾಗ್ವೈಖರಿ: ಸಭೆಗಳಲ್ಲಿ ಅಥವಾ ವಾದಗಳಲ್ಲಿ ಜಯ ಗಳಿಸಲು ಮತ್ತು ವಾಕ್ಚಾತುರ್ಯ ಸಿದ್ಧಿಸಲು ಇದು ಸಹಕಾರಿ (ಶ್ಲೋಕ 6, 29).
ಕೊನೆಮಾತು
ಶ್ಲೋಕ 16 ರ ಪ್ರಕಾರ, “ಓಂ ಶ್ರೀ ರಾಘವೇಂದ್ರಾಯ ನಮಃ” ಎಂದು ಜಪಿಸುತ್ತಾ ಈ ಸ್ತೋತ್ರವನ್ನು ಪಠಿಸಿದರೆ ನೀವು ಅಂದುಕೊಂಡ ಕಾರ್ಯಗಳು ಯಾವುದೇ ಸಂಶಯವಿಲ್ಲದೆ ನೆರವೇರುತ್ತವೆ.
ಲೇಖನ- ಶ್ರೀನಿವಾಸ ಮಠ





