ಇದೇ ಮಾರ್ಚ್ 19, 2026ರಂದು ಚಾಂದ್ರಮಾನ ಯುಗಾದಿಯೊಂದಿಗೆ ಹೊಸ ಸಂವತ್ಸರವಾದ ‘ಪರಾಭವ’ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಜ್ಯೋತಿಷ್ಯ ರೀತಿಯಾಗಿ ಆಡಳಿತ ನಡೆಸುವವರು ಯಾರು, ಅದರಿಂದ ಆಗುವ ಫಲಿತಾಂಶ ಏನು ಎಂಬುದರ ವಿವರ ಇಲ್ಲಿದೆ. ಗ್ರಹಗಳಿಗೆ ಪ್ರಭಾವ ಬೀರುವ ಶಕ್ತಿ ಇದೆ ಎಂಬುದನ್ನು ಆಧಾರವಾಗಿಟ್ಟುಕೊಂಡು, ಫಲಾಫಲಗಳನ್ನು ತಿಳಿಸಲಾಗುತ್ತಾ ಇದೆ. ಅಂದಹಾಗೆ ಈ ಸಂವತ್ಸರದಲ್ಲಿ ಗುರು ಮತ್ತು ಚಂದ್ರನ ಪ್ರಭಾವ ಹೆಚ್ಚಾಗಿರುವುದು ಕಂಡುಬರುತ್ತದೆ. ರಾಜನಾಗಿ ಗುರುವು ಅಧಿಕಾರ ವಹಿಸಿಕೊಂಡಿರುವುದರಿಂದ ಸಾತ್ವಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಸಿಗಲಿದೆ.
ವರ್ಷದ ಪ್ರಮುಖ ಮುಖ್ಯಾಂಶಗಳು:
- ಗುರು ರಾಜನಾಗಿರುವುದರಿಂದ: ಶಿಕ್ಷಣ, ಸಂಪ್ರದಾಯ ಮತ್ತು ಧರ್ಮದ ಕ್ಷೇತ್ರದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಜನರ ಮನಸ್ಥಿತಿ ಶಾಂತಿಯುತವಾಗಿರುವ ಸಾಧ್ಯತೆಯಿದೆ.
- ಕುಜ ಮಂತ್ರಿಯಾಗಿರುವುದರಿಂದ: ದೇಶದ ರಕ್ಷಣಾ ಇಲಾಖೆ ಮತ್ತು ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಠಿಣ ಕ್ರಮಗಳನ್ನು ನಿರೀಕ್ಷಿಸಬಹುದು.
- ಚಂದ್ರನ ಆಧಿಪತ್ಯ: ಸೇನಾಧಿಪತಿ, ಮೇಘಾಧಿಪತಿ ಮತ್ತು ಅರ್ಘಾಧಿಪತಿಯಾಗಿ ಚಂದ್ರನಿರುವುದರಿಂದ ಮಳೆ-ಬೆಳೆ ಉತ್ತಮವಾಗಿದ್ದರೂ ಬೆಲೆ ಏರಿಳಿತಗಳಲ್ಲಿ ಅನಿಶ್ಚಿತತೆ ಕಂಡುಬರಬಹುದು.
- ಸಸ್ಯಾಧಿಪತಿ ಗುರು: ಕೃಷಿ ಕ್ಷೇತ್ರದಲ್ಲಿ ಜ್ಞಾನಾಧಾರಿತ ಬೆಳವಣಿಗೆ ಮತ್ತು ಸಾತ್ವಿಕ ಆಹಾರ ಪದಾರ್ಥಗಳ ಇಳುವರಿ ಉತ್ತಮವಾಗಿರುತ್ತದೆ.
ನವನಾಯಕರು ಮತ್ತು ಅವರ ಫಲಿತಾಂಶಗಳ ಕೋಷ್ಟಕ
| ಕ್ರ.ಸಂ | ಅಧಿಕಾರ (ನಾಯಕರು) | ಗ್ರಹ / ದೇವತೆ | ನಿರೀಕ್ಷಿತ ಫಲ |
| 1 | ರಾಜ | ಗುರು | ಧರ್ಮೋನ್ನತಿ, ನ್ಯಾಯದ ಜಯ, ಸುಖ-ಶಾಂತಿ. |
| 2 | ಮಂತ್ರಿ | ಕುಜ | ಧೈರ್ಯದ ನಿರ್ಧಾರಗಳು, ತಾಂತ್ರಿಕ ಪ್ರಗತಿ. |
| 3 | ಸೇನಾಧಿಪತಿ | ಚಂದ್ರ | ಶಾಂತಿಯುತ ರಕ್ಷಣಾ ವ್ಯವಸ್ಥೆ, ಜನಪ್ರಿಯ ಯೋಜನೆಗಳು. |
| 4 | ಮೇಘಾಧಿಪತಿ | ಚಂದ್ರ | ಸಕಾಲಿಕ ಮಳೆ, ಜಲಸಂಪನ್ಮೂಲ ವೃದ್ಧಿ. |
| 5 | ಸಸ್ಯಾಧಿಪತಿ | ಗುರು | ಪೌಷ್ಟಿಕ ಆಹಾರೋತ್ಪನ್ನಗಳ ಹೇರಳ ಉತ್ಪಾದನೆ. |
| 6 | ಧಾನ್ಯಾಧಿಪತಿ | ಗುರು | ಧಾನ್ಯಗಳ ಸಂಗ್ರಹ ಮತ್ತು ಮಾರುಕಟ್ಟೆ ಸ್ಥಿರತೆ. |
| 7 | ಅರ್ಘಾಧಿಪತಿ | ಚಂದ್ರ | ಬೆಲೆಗಳಲ್ಲಿ ಮೃದು ಧೋರಣೆ, ಸುಲಭ ಲಭ್ಯತೆ. |
| 8 | ರಸಾಧಿಪತಿ | ಶನಿ | ತೈಲ ಮತ್ತು ರಸ ಪದಾರ್ಥಗಳ ಬೆಲೆಯಲ್ಲಿ ಏರಿಕೆ. |
| 9 | ನೀರಸಾಧಿಪತಿ | ಗುರು | ಲೋಹಗಳು ಮತ್ತು ಅಮೂಲ್ಯ ವಸ್ತುಗಳ ಬೆಲೆ ಸ್ಥಿರತೆ. |
| 10 | ಪಶುಪಾಲಕ | ಶ್ರೀಕೃಷ್ಣ | ಜಾನುವಾರುಗಳ ಆರೋಗ್ಯ ಮತ್ತು ಕ್ಷೀರೋತ್ಪನ್ನ ವೃದ್ಧಿ. |
ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿಶಾಲಿ ಕ್ಷೇತ್ರ: ತಿರುಪತ್ತುರ್ ಬ್ರಹ್ಮಪುರೀಶ್ವರರ್ ದೇವಾಲಯ!
ಉಪನಾಯಕರ ವಿವರವಾದ ಪಟ್ಟಿ (30 ವಿಭಾಗಗಳು)
ಪರಾಭವ ಸಂವತ್ಸರದಲ್ಲಿ ವ್ಯವಹಾರದ ಪ್ರತಿಯೊಂದು ವಿಭಾಗವನ್ನೂ ಈ ಕೆಳಗಿನ ಉಪನಾಯಕರು ನಿರ್ವಹಿಸಲಿದ್ದಾರೆ:
| ವಿಭಾಗ | ಅಧಿಪತಿ | ವಿಭಾಗ | ಅಧಿಪತಿ |
| ಧನಾಧಿಪತಿ | ಶನಿ | ಫಲಪುಷ್ಪಾಧಿಪತಿ | ಚಂದ್ರ |
| ಪೂರ್ವಸಸ್ಯಾಧಿಪತಿ | ಗುರು | ಅಪರಸಸ್ಯಾಧಿಪತಿ | ಚಂದ್ರ |
| ಕೋಶಾಧಿಪತಿ | ಶುಕ್ರ | ಛತ್ರಾಧಿಪತಿ | ಗುರು |
| ಆಜ್ಞಾಧಿಪತಿ | ಕುಜ | ಯುದ್ಧಾಧಿಪತಿ | ಚಂದ್ರ |
| ವ್ಯವಹಾರಾಧಿಪತಿ | ಶನಿ | ವ್ಯಾಪಾರಾಧಿಪತಿ | ಚಂದ್ರ |
| ಪ್ರತಾಪಾಧಿಪತಿ | ಚಂದ್ರ | ಅಶ್ವಾಧಿಪತಿ | ಗುರು |
| ಗಜಾಧಿಪತಿ | ಕುಜ | ಪಶ್ಯಾಧಿಪತಿ | ಚಂದ್ರ |
| ವೃಷಭಾಧಿಪತಿ | ಬುಧ | ಖರಾಧಿಪತಿ | ಗುರು |
| ಮೂಷಕಾಧಿಪತಿ | ಚಂದ್ರ | ದೇವಾಧಿಪತಿ | ಗುರು |
| ನರಾಧಿಪತಿ | ಗುರು | ದ್ರವ್ಯಾಧಿಪತಿ | ಚಂದ್ರ |
| ಗಿಡಬಳ್ಳಿ ಅಧಿಪತಿ | ಚಂದ್ರ | ವಸ್ತ್ರಾಧಿಪತಿ | ಶನಿ |
| ತೃಣಾಧಿಪತಿ | ಚಂದ್ರ | ಕಾಷ್ಠಾಧಿಪತಿ | ಗುರು |
| ಸರ್ಪಾಧಿಪತಿ | ಚಂದ್ರ | ಮೃಗಾಧಿಪತಿ | ಬುಧ |
| ಸ್ತ್ರೀಣಾಮಾಧಿಪತಿ | ಚಂದ್ರ | ನವರತ್ನಾಧಿಪತಿ | ಚಂದ್ರ |
| ಮಾಂಗಲ್ಯಾಧಿಪತಿ | ಶನಿ | ಸರ್ವೇಷಾಂ ಅಧಿಪತಿ | ಗುರು |
ಕೊನೆ ಮಾತು:
ಈ ಸಂವತ್ಸರದಲ್ಲಿ ಗುರು ಮತ್ತು ಚಂದ್ರ ಗ್ರಹಗಳ ಪ್ರಭಾವ ಹೆಚ್ಚಿರುವುದರಿಂದ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಲಿದೆ. ಶುಕ್ರನು ಕೋಶಾಧಿಪತಿಯಾಗಿರುವುದರಿಂದ ಆರ್ಥಿಕವಾಗಿ ಕೆಲವು ಕ್ಷೇತ್ರಗಳಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ಒಟ್ಟಾರೆಯಾಗಿ ಇದು ಸಾತ್ವಿಕ ಮತ್ತು ಆಡಳಿತಾತ್ಮಕವಾಗಿ ಸಮತೋಲನದ ವರ್ಷವಾಗಿರಲಿದೆ.
ಲೇಖನ- ಶ್ರೀನಿವಾಸ ಮಠ





