Sri Gurubhyo Logo

ನಿಮ್ಮ ಮಗುವಿಗೆ ಹೆಸರಿಡುವ ಮುನ್ನ ಈ ಲೇಖನ ಓದಿ: 27 ನಕ್ಷತ್ರಗಳ ಅಕ್ಷರ, ಮಾಸ ನಾಮಗಳ ಪಟ್ಟಿ

ನಾಮಕರಣ ಸಂಸ್ಕಾರದ ಚಿತ್ರ - ಮಗುವಿಗೆ ಹೆಸರಿಡುವ ಸಂಪ್ರದಾಯ
ಸನಾತನ ಸಂಪ್ರದಾಯದಂತೆ ಮಗುವಿನ ಜನ್ಮ ನಕ್ಷತ್ರ ಮತ್ತು ರಾಶಿಗನುಗುಣವಾಗಿ ನಡೆಯುವ ನಾಮಕರಣ ಸಂಸ್ಕಾರ

ಸನಾತನ ಸಂಪ್ರದಾಯದಲ್ಲಿ ಮಗುವಿಗೆ ಹೆಸರನ್ನು ಇಡುವುದಕ್ಕೆ ‘ನಾಮಕರಣ’ ಸಂಸ್ಕಾರವು ಅತ್ಯಂತ ಮಹತ್ವದ್ದು. ಷೋಡಶ ಸಂಸ್ಕಾರಗಳು ಎಂದು ಕರೆಯುವುದರಲ್ಲಿ ನಾಮಕರಣ ಸಹ ಒಂದು. ಶಾಸ್ತ್ರಗಳ ಪ್ರಕಾರ ನಾಮಕರಣದ ಸಂದರ್ಭದಲ್ಲಿ ಕೇವಲ ಒಂದು ಹೆಸರನ್ನು ಮಾತ್ರವಲ್ಲದೆ, ಬೇರೆ ಬೇರೆ ಉದ್ದೇಶಗಳಿಗಾಗಿ ಒಟ್ಟು ನಾಲ್ಕು ಅಥವಾ ಐದು ಹೆಸರುಗಳನ್ನು ಇಡಲಾಗುತ್ತದೆ. ನಾಮಕರಣದ ಸಂದರ್ಭದಲ್ಲಿ ಮುಖ್ಯವಾಗಿ ಪರಿಗಣಿಸುವ ಹೆಸರುಗಳ ವಿವರ ಇಲ್ಲಿದೆ:

ನಕ್ಷತ್ರ ನಾಮ 

ಮಗು ಜನಿಸಿದ ನಕ್ಷತ್ರ ಮತ್ತು ಪಾದದ ಆಧಾರದ ಮೇಲೆ ಒಂದು ಹೆಸರನ್ನು ಇಡಲಾಗುತ್ತದೆ. ಇದನ್ನು ‘ಜನ್ಮ ನಾಮ’ ಎಂದು ಕರೆಯುತ್ತಾರೆ.

  • ಪ್ರಾಮುಖ್ಯ: ಜಾತಕ ಬರೆಯುವಾಗ, ಮದುವೆಯ ಸಂದರ್ಭದಲ್ಲಿ ಗುಣಮಿಲನ ಮಾಡುವಾಗ ಮತ್ತು ಧಾರ್ಮಿಕ ಸಂಕಲ್ಪಗಳನ್ನು ಮಾಡುವಾಗ ಯಾವ ಅಕ್ಷರದಲ್ಲಿ ಜನ್ಮ ನಾಮ ಬಂದಿದೆ ಎಂದು ತಿಳಿದಲ್ಲಿ ನಕ್ಷತ್ರ ಮತ್ತು ಪಾದ ತಿಳಿಯಲು ಸಲೀಸಾಗುತ್ತದೆ.
  • ವಿಧಾನ: ಆಯಾ ನಕ್ಷತ್ರದ ಪಾದಕ್ಕೆ ನಿಗದಿಪಡಿಸಿದ ಅಕ್ಷರದಿಂದ ಈ ಹೆಸರು ಆರಂಭವಾಗುತ್ತದೆ.

27 ನಕ್ಷತ್ರಗಳು – ಪಾದಗಳು ಮತ್ತು ನಾಮಕರಣ ಅಕ್ಷರಗಳು 

ನಕ್ಷತ್ರ ಪಾದ 1 ಪಾದ 2 ಪಾದ 3 ಪಾದ 4
ಅಶ್ವಿನಿ ಚೂ ಚೇ ಚೋ ಲಾ
ಭರಣಿ ಲೀ ಲೂ ಲೇ ಲೋ
ಕೃತಿಕಾ
ರೋಹಿಣಿ ವಾ ವೀ ವೂ
ಮೃಗಶಿರಾ ವೇ ವೋ ಕಾ ಕೀ
ಆರಿದ್ರಾ ಕೂ
ಪುನರ್ವಸು ಕೇ ಕೋ ಹಾ ಹೀ
ಪುಷ್ಯ ಹೂ ಹೇ ಹೋ ಡಾ
ಆಶ್ಲೇಷ ಡಿ ಡೂ ಡೇ ಡೋ
ಮಘಾ ಮಾ ಮೀ ಮೂ ಮೇ
ಪೂರ್ವಾ ಫಲ್ಗುಣಿ ಮೋ ಟಾ ಟೀ ಟೂ
ಉತ್ತರಾ ಫಲ್ಗುಣಿ ಟೇ ಟೋ ಪಾ ಪೀ
ಹಸ್ತ ಪೂ
ಚಿತ್ತಾ ಪೇ ಪೋ ರಾ ರೀ
ಸ್ವಾತಿ ರೂ ರೇ ರೋ ತಾ
ವಿಶಾಖಾ ತೀ ತೂ ತೇ ತೋ
ಅನುರಾಧ ನಾ ನೀ ನೂ ನೇ
ಜ್ಯೇಷ್ಠಾ ನೋ ಯಾ ಯೀ ಯೂ
ಮೂಲಾ ಯೇ ಯೋ ಬಾ ಬೀ
ಪೂರ್ವಾಷಾಢ ಬೂ ಧಾ
ಉತ್ತರಾಷಾಢ ಬೇ ಬೋ ಜಾ ಜೀ
ಶ್ರವಣ ಜೂ ಜೇ ಜೋ ಖಾ
ಧನಿಷ್ಠ ಗಾ ಗೀ ಗೂ ಗೇ
ಶತಭಿಷ ಗೋ ಸಾ ಸೀ ಸೂ
ಪೂರ್ವಾಭಾದ್ರ ಸೇ ಸೋ ದಾ ದೀ
ಉತ್ತರಾಭಾದ್ರ ದೂ
ರೇವತಿ ದೇ ದೋ ಚಾ ಚೀ

ಗಮನಿಸಬೇಕಾದ ಅಂಶಗಳು:

  • ಒಂದು ನಕ್ಷತ್ರಕ್ಕೆ ಒಟ್ಟು 4 ಪಾದಗಳಿರುತ್ತವೆ.
  • ಮಗು ಜನಿಸಿದ ಸಮಯದ ಆಧಾರದ ಮೇಲೆ ಚಂದ್ರನು ಯಾವ ನಕ್ಷತ್ರದ ಯಾವ ಪಾದದಲ್ಲಿರುತ್ತಾನೋ, ಆ ಪಾದಕ್ಕೆ ಸೂಚಿಸಲಾದ ಅಕ್ಷರದಿಂದ ಹೆಸರನ್ನು ಇಡುವುದು ವಾಡಿಕೆ.
  • ಕೆಲವು ಅಕ್ಷರಗಳು (ಉದಾಹರಣೆಗೆ: ಞ, ಙ, ಣ) ಹೆಸರಿಡಲು ಕಷ್ಟವಾದಾಗ, ಅವುಗಳಿಗೆ ಪರ್ಯಾಯವಾಗಿ ಆ ನಕ್ಷತ್ರಕ್ಕೆ ಹೊಂದಿಕೆಯಾಗುವ ಅಕ್ಷರಗಳನ್ನು ಜ್ಯೋತಿಷಿಗಳು ಸೂಚಿಸುತ್ತಾರೆ.

ಮಗು ಜನಿಸಿದ ತಕ್ಷಣ ಜಾತಕ ನೋಡಬಾರದೇ? ಜನನ ಕಾಲದ ದೋಷಗಳು, ಶಾಂತಿಗಳ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಮಾಸ ನಾಮ

ಮಗು ಜನಿಸಿದ ಹಿಂದೂ ಮಾಸಕ್ಕೆ (ತಿಂಗಳಿಗೆ) ಅನುಗುಣವಾಗಿ ಒಂದು ಹೆಸರನ್ನು ಇಡಲಾಗುತ್ತದೆ. ಒಟ್ಟು 12 ಮಾಸಗಳಿಗೆ 12 ಹೆಸರುಗಳಿವೆ.

  • ಉದಾಹರಣೆ: ಮಗು ಮಾರ್ಗಶಿರ ಮಾಸದಲ್ಲಿ ಜನಿಸಿದರೆ ‘ಕೇಶವ’, ಪುಷ್ಯ ಮಾಸದಲ್ಲಿ ಜನಿಸಿದರೆ ‘ನಾರಾಯಣ’ ಹೀಗೆ ವಿಷ್ಣುವಿನ 12 ನಾಮಗಳಲ್ಲಿ ಒಂದನ್ನು ಮಾಸ ನಾಮವಾಗಿ ಇಡಲಾಗುತ್ತದೆ.
ಕ್ರ.ಸಂ ಹಿಂದೂ ಮಾಸ (ತಿಂಗಳು) ಮಾಸ ನಾಮ (ದೇವತೆ)
1 ಚೈತ್ರ ಶ್ರೀ ವಿಷ್ಣು
2 ವೈಶಾಖ ಶ್ರೀ ಮಧುಸೂದನ
3 ಜ್ಯೇಷ್ಠ ಶ್ರೀ ತ್ರಿವಿಕ್ರಮ
4 ಆಷಾಢ ಶ್ರೀ ವಾಮನ
5 ಶ್ರಾವಣ ಶ್ರೀ ಶ್ರೀಧರ
6 ಭಾದ್ರಪದ ಶ್ರೀ ಹೃಷಿಕೇಶ
7 ಆಶ್ವಯುಜ ಶ್ರೀ ಪದ್ಮನಾಭ
8 ಕಾರ್ತಿಕ ಶ್ರೀ ದಾಮೋದರ
9 ಮಾರ್ಗಶಿರ ಶ್ರೀ ಕೇಶವ
10 ಪುಷ್ಯ ಶ್ರೀ ನಾರಾಯಣ
11 ಮಾಘ ಶ್ರೀ ಮಾಧವ
12 ಫಾಲ್ಗುಣ ಶ್ರೀ ಗೋವಿಂದ

ಕುಲದೇವತಾ ಅಥವಾ ಆರಾಧ್ಯ ದೈವದ ಹೆಸರು

ಕುಟುಂಬದ ಪರಂಪರೆಯನ್ನು ಮುಂದುವರಿಸಲು ಮತ್ತು ದೇವರ ಅನುಗ್ರಹ ಮಗುವಿನ ಮೇಲಿರಲಿ ಎಂಬ ಉದ್ದೇಶದಿಂದ ಈ ಹೆಸರನ್ನು ಇಡಲಾಗುತ್ತದೆ.

  • ವಿಧಾನ: ಮನೆಯ ಹಿರಿಯರು ಅಥವಾ ತಂದೆ-ತಾಯಿ ತಮ್ಮ ಕುಲದೇವತೆಯ ಹೆಸರನ್ನು (ಉದಾಹರಣೆಗೆ: ವೆಂಕಟೇಶ, ಮಂಜುನಾಥ, ಚೌಡೇಶ್ವರಿ) ಮಗುವಿಗೆ ಇಡುತ್ತಾರೆ.

ವ್ಯಾವಹಾರಿಕ ನಾಮ (ಕರೆಯುವ ಹೆಸರು)

ಇದು ಮಗುವನ್ನು ಸಮಾಜದಲ್ಲಿ ಗುರುತಿಸಲು ಬಳಸುವ ಹೆಸರು. ಶಾಲೆ, ಕಾಲೇಜು ಮತ್ತು ಕಚೇರಿಗಳಲ್ಲಿ ಇದನ್ನೇ ಬಳಸಲಾಗುತ್ತದೆ.

  • ವಿಧಾನ: ಆಧುನಿಕ ಕಾಲದಲ್ಲಿ ಪೋಷಕರು ಅರ್ಥಪೂರ್ಣವಾದ ಮತ್ತು ಕರೆಯಲು ಸುಲಭವಾದ ಹೆಸರನ್ನು ಆಯ್ಕೆ ಮಾಡುತ್ತಾರೆ. ಇದು ನಕ್ಷತ್ರದ ಅಕ್ಷರಕ್ಕೆ ಹೊಂದಿಕೆ ಆಗಬಹುದು ಅಥವಾ ಇಲ್ಲದಿರಬಹುದು.

ಹಿರಿಯರ ಹೆಸರು (ಸ್ಮರಣಾರ್ಥ ನಾಮ)

ಮನೆಯಲ್ಲಿ ತೀರಿಹೋದ ಮುತ್ತಜ್ಜ ಅಥವಾ ಮುತ್ತಜ್ಜಿಯ ಹೆಸರನ್ನು ಮಗುವಿಗೆ ಇಡುವ ಸಂಪ್ರದಾಯ ಹಲವು ಕುಟುಂಬಗಳಲ್ಲಿವೆ. ಆ ಮೂಲಕ ಪೂರ್ವಜರು ಮಗುವಿನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾರೆ ಎಂಬ ಭಾವನೆ ಇರುತ್ತದೆ.

ನಿಮ್ಮ ನಕ್ಷತ್ರ ಯಾವುದು? ಅಶ್ವಿನಿಯಿಂದ ರೇವತಿ ಪರ್ಯಂತ 27 ನಕ್ಷತ್ರಗಳ ವ್ಯಕ್ತಿತ್ವದ ರಹಸ್ಯ ಇಲ್ಲಿದೆ!

ನಾಮಕರಣದ ನಿಯಮಗಳು

ಶಾಸ್ತ್ರದ ಪ್ರಕಾರ ಹೆಸರನ್ನು ಆಯ್ಕೆ ಮಾಡುವಾಗ ಕೆಲವು ಅಂಶಗಳನ್ನು ಗಮನಿಸಲಾಗುತ್ತದೆ:

  • ಅಕ್ಷರಗಳ ಸಂಖ್ಯೆ: ಗಂಡು ಮಗುವಿಗೆ ಸಮ ಸಂಖ್ಯೆಯ ಅಕ್ಷರಗಳಿರುವ ಹೆಸರು (2 ಅಥವಾ 4 ಅಕ್ಷರ – ಉದಾ: ರಾಮ, ಭರತೇಶ) ಮತ್ತು ಹೆಣ್ಣು ಮಗುವಿಗೆ ಬೆಸ ಸಂಖ್ಯೆಯ ಅಕ್ಷರಗಳಿರುವ ಹೆಸರು (3 ಅಥವಾ 5 ಅಕ್ಷರ – ಉದಾ: ಶಾರದಾ, ಲಲಿತಾಂಬಿಕೆ) ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.
  • ಅರ್ಥ: ಹೆಸರು ಮಂಗಳಕರವಾಗಿರಬೇಕು ಮತ್ತು ಸಕಾರಾತ್ಮಕ ಅರ್ಥವನ್ನು ಹೊಂದಿರಬೇಕು.

ಗಮನಿಸಿ: ಇಂದಿನ ದಿನಗಳಲ್ಲಿ ಜಾತಕದ ಹೆಸರು (ನಕ್ಷತ್ರ ನಾಮ) ಮತ್ತು ವ್ಯಾವಹಾರಿಕ ಹೆಸರು ಪ್ರತ್ಯೇಕವಾಗಿ ಇರುತ್ತದೆ. ನ್ಯೂಮರಾಲಜಿ ಅನುಸರಿಸಿ ವ್ಯಾವಹಾರಿಕ ನಾಮವನ್ನು ಇಟ್ಟುಕೊಳ್ಳುತ್ತಾರೆ. ಅದಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ ಅರ್ಥ ಕೆಡದಂತೆ, ನ್ಯೂಮರಾಲಜಿಗೋಸ್ಕರವೇ ಮನಸೋ ಇಚ್ಛೆ ಅಕ್ಷರಗಳನ್ನು ಸೇರಿಸದಂತೆ ನೋಡಿಕೊಳ್ಳಿ. ಮಗುವಿನ ಒಳಿತು ಎಲ್ಲ ಶಾಸ್ತ್ರಗಳಲ್ಲಿಯೂ ಮುಖ್ಯವೇ. ಆದರೆ ಆಯ್ಕೆ ಮುಕ್ತವಾಗಿದೆ. ಕಳಕಳಿ ಏನೆಂದರೆ, ಮಂಗಳಕರವಾದ ಹೆಸರನ್ನು ಇರಿಸಿ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts