Sri Gurubhyo Logo

ಯಾವ ಸಮಸ್ಯೆಗೆ ಯಾವ ಹೋಮ? ಇಲ್ಲಿದೆ ಸಂಪೂರ್ಣ ಮಾಹಿತಿ

A Hindu priest performing a sacred Homa ritual with holy fire in a traditional temple setting.
ದೋಷ ನಿವಾರಣೆಗಾಗಿ ಹೋಮ ಮಾಡುತ್ತಿರುವ ಅರ್ಚಕರು.

ಸನಾತನ ಧರ್ಮದಲ್ಲಿ ಹೋಮ-ಹವನಗಳು ಕೇವಲ ಧಾರ್ಮಿಕ ವಿಧಿಗಳಲ್ಲ, ಅವು ವಿವಿಧ ದೋಷಗಳಿಗೆ ಪರಿಣಾಮಕಾರಿ ಆಧ್ಯಾತ್ಮಿಕ ಪರಿಹಾರಗಳಾಗಿವೆ. ಜಾತಕದಲ್ಲಿನ ಗ್ರಹ ದೋಷ, ಪಿತೃ ಶಾಪ, ಆರ್ಥಿಕ ಸಂಕಷ್ಟ ಅಥವಾ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರವಾಗಿ ಶಾಸ್ತ್ರಗಳಲ್ಲಿ ವಿವಿಧ ಶಾಂತಿ- ಹೋಮಗಳನ್ನು ಸೂಚಿಸಲಾಗಿದೆ. ಮಹಾ ಮೃತ್ಯುಂಜಯ ಹೋಮ ಆಯುಷ್ಯ ವೃದ್ಧಿಗೆ ಸಹಕಾರಿಯಾದರೆ, ಮನೋ ವಾಂಚಿತ ಗಣಹೋಮ ಇಷ್ಟಾರ್ಥಗಳ ಸಿದ್ಧಿಗೆ ನಾಂದಿ ಹಾಡುತ್ತದೆ. ಹಾಗೆಯೇ, ಜೀವನದ ಪ್ರಮುಖ ಘಟ್ಟಗಳಾದ ಷಷ್ಠಿಪೂರ್ತಿ ಮತ್ತು ಭೀಮರಥ ಶಾಂತಿಹೋಮಗಳು ವ್ಯಕ್ತಿಯ ಅರಿಷ್ಟ ನಿವಾರಿಸಿ ಸುಖ-ಶಾಂತಿ ನೀಡುತ್ತವೆ. ಪ್ರೇತಬಾಧೆ, ಶತ್ರು ಭಯ ಅಥವಾ ವಾಹನ ಅಪಘಾತಗಳಂತಹ ಅನಿರೀಕ್ಷಿತ ಸಂಕಷ್ಟಗಳಿಂದ ಪಾರಾಗಲು ಈ ಪವಿತ್ರ ಯಜ್ಞಗಳ ಮಹತ್ವ ಮತ್ತು ಫಲಶ್ರುತಿಯನ್ನು ತಿಳಿಯುವುದು ಅತ್ಯಗತ್ಯ. ಯಾವುದೇ ಪೂಜೆ-ಪುರಸ್ಸರಾದಿಗಳನ್ನು ‘ಕಾಮ್ಯಾರ್ಥ’ಗಳೊಂದಿಗೆ ಮಾಡುವುದು ಬೇರೆ, ಯಾವುದೇ ‘ಕಾಮ್ಯಾರ್ಥ’ ಬಯಸದೆ ಮಾಡುವುದು ಬೇರೆ. ಇಲ್ಲಿ ಉಲ್ಲೇಖ ಮಾಡಿರುವ ಹೋಮಗಳು ಆಯಾ ಕಾಮ್ಯಾರ್ಥ ನೆರವೇರಿಸುತ್ತವೆ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖ ಆಗಿದೆ.

1. ಇಷ್ಟಾರ್ಥ ಸಿದ್ಧಿ ಮತ್ತು ಕೌಟುಂಬಿಕ ಅಭಿವೃದ್ಧಿಗಾಗಿ

  • ಮನೋ ವಾಂಚಿತ ಗಣಹೋಮ: ಇಚ್ಛಾಪೂರ್ಣತೆ ಹಾಗೂ ಮನೋಕಾಮನೆಗಳ ಸಿದ್ಧಿಗಾಗಿ.
  • ಗಣಪತಿ ಹೋಮ: ಸಕಲ ಕಾರ್ಯಗಳ ಸಾಧನೆ, ವೃತ್ತಿಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆಯಲು.
  • ಶ್ರೀ ವಿಷ್ಣು ಸಹಸ್ರನಾಮ ಹೋಮ: ಕುಟುಂಬದ ಅಭಿವೃದ್ಧಿ, ಸಂತೋಷ ಮತ್ತು ಸಮೃದ್ಧಿಗಾಗಿ.
  • ಶ್ರೀ ಲಲಿತಾ ಹೋಮ: ಮನೆಯ ನೆಮ್ಮದಿ ಮತ್ತು ಶಾಂತಿಗಾಗಿ.
  • ಶ್ರೀ ಗಾಯತ್ರಿ ಹೋಮ: ಸಕಲ ಪಾಪಗಳ ನಿವೃತ್ತಿ ಮತ್ತು ದುಷ್ಟರ ನಾಶಕ್ಕಾಗಿ.

ಮನೆಯಲ್ಲಿ ಸುಖ-ಶಾಂತಿ ನೆಲೆಸಲು ‘ವಾಸ್ತು ಬಲಿಹರಣ’ ಯಾವ ಸಂದರ್ಭಗಳಲ್ಲಿ ಅನಿವಾರ್ಯ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ

2. ಆರೋಗ್ಯ ಮತ್ತು ಆಯುಷ್ಯ ರಕ್ಷಣೆಗಾಗಿ

  • ಮಹಾ ಮೃತ್ಯುಂಜಯ ಹೋಮ: ಮರಣಾವಸ್ಥೆಯಲ್ಲಿರುವವರಿಗೆ ಮತ್ತು ತೀವ್ರತರದ ವ್ಯಾಧಿಗಳ ನಿವಾರಣೆಗೆ.
  • ಅಭಯಂಕರ ಹೋಮ: ದೀರ್ಘವ್ಯಾಧಿ, ಕುಷ್ಟ ಮತ್ತು ಚರ್ಮವ್ಯಾಧಿಗಳ ನಿವಾರಣೆಗೆ.
  • ಶ್ರೀ ರುದ್ರ ಹೋಮ: ಕಠಿಣ ಜ್ವರದ ಬಾಧೆ ನೀಗಿ ಶರೀರ ಸೌಖ್ಯ ಪಡೆಯಲು.
  • ಧನ್ವಂತ್ರಿ ಹೋಮ: ಸಂಪೂರ್ಣ ಆರೋಗ್ಯ ವೃದ್ಧಿಗಾಗಿ.
  • ಸೂರ್ಯ ನಾರಾಯಣ ಹೋಮ: ಆರೋಗ್ಯ ವೃದ್ಧಿ, ದೇಹ ಬಲ ಮತ್ತು ದೃಷ್ಟಿ ದೋಷ ನಿವಾರಣೆಗಾಗಿ.
  • ವಾಯು ಹೋಮ: ವಾಯು ಸಂಬಂಧ ವ್ಯಾಧಿಗಳ ನಿವಾರಣೆಗಾಗಿ.
  • ಗುಹ್ಯ ಕಾಳಿ ಹೋಮ: ಸ್ತ್ರೀ-ಪುರುಷರ ಗುಪ್ತಾಂಗ ರೋಗಗಳ ನಿವಾರಣೆಗೆ.

3. ರಕ್ಷಣೆ ಮತ್ತು ದುಷ್ಟಶಕ್ತಿ ನಿಗ್ರಹಕ್ಕಾಗಿ

  • ಮಹಾ ಸುದರ್ಶನ ಹೋಮ: ಅಬಿಚಾರ ದೋಷ, ಪ್ರೇತಬಾಧೆ ಮತ್ತು ಸಮ್ಮೋಹನ ಕ್ರಿಯೆಗಳ ನಿವಾರಣೆಗೆ.
  • ದುರ್ಗಾ ಹೋಮ: ಕೃತ್ರಿಮ (ಮಾಟ) ಮತ್ತು ಮಹಾ ಅನಿಷ್ಟಗಳ ಪರಿಹಾರಕ್ಕೆ.
  • ನಿರುತಿ ಹೋಮ: ಗೃಹದಲ್ಲಿರುವ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ.
  • ತ್ವರಿತ ಹೋಮ: ಕೆಟ್ಟ ಕನಸು, ಪ್ರೇತಬಾಧೆ ಮತ್ತು ಗಾಳಿ ಸೋಕುಗಳ ನಿವಾರಣೆಗೆ.
  • ರಕ್ಷೋಜ್ಞ ಹೋಮ: ಮನೆ ನಿರ್ಮಾಣ ಕಾಲದಲ್ಲಿ ಬಲಿಯಾದ ಜೀವ ಜಂತುಗಳ ಆತ್ಮಶಾಂತಿಗಾಗಿ.
  • ಅಘೋರ ಹೋಮ: ಪ್ರಾಣಿ-ಪಕ್ಷಿಗಳು ಅನಿರೀಕ್ಷಿತವಾಗಿ ಮನೆ ಪ್ರವೇಶಿಸುವುದರಿಂದ ಉಂಟಾಗುವ ದೋಷಗಳ ನಿವಾರಣೆಗೆ.

ಅಶ್ವಾರೂಢ ಸ್ವಯಂವರ ಪಾರ್ವತಿ ಹೋಮ: ಶೀಘ್ರ ವಿವಾಹ ಮತ್ತು ದಾಂಪತ್ಯ ಸುಖಕ್ಕಾಗಿ ದಿವ್ಯ ಮಾರ್ಗ

4. ಅಪಘಾತ ಮತ್ತು ದೋಷಗಳ ಪರಿಹಾರಕ್ಕಾಗಿ

  • ತ್ರಯಂಭಕ ಹೋಮ: ಆಕಸ್ಮಿಕ ಮರಣಗಳ ಭಯ ನಿವಾರಣೆಗೆ.
  • ಸುಬ್ರಹ್ಮಣ್ಯ ಹಾಗೂ ವಹ್ನಿ ಹೋಮ: ಶಸ್ತ್ರ ಚಿಕಿತ್ಸೆ (Operation) ಮತ್ತು ವಾಹನ ಅಪಘಾತಗಳಿಂದ ರಕ್ಷಣೆ ಪಡೆಯಲು.
  • ಶ್ರೀ ದುರ್ಗಾ ಹೋಮ: ಅಪಘಾತ, ರಾಹು ಗ್ರಹ ಪೀಡೆ ಪರಿಹಾರ ಮತ್ತು ಗರ್ಭ ದೋಷಗಳಿಗೆ.
  • ತ್ರಿಪುರದಲ ಹೋಮ: ಶಸ್ತ್ರಚಿಕಿತ್ಸೆಗಳ (Operation) ಯಶಸ್ಸಿನ ಸಿದ್ಧಿಗಾಗಿ.

5. ಗ್ರಹ ದೋಷ ಮತ್ತು ಪಿತೃ ಕಾರ್ಯಗಳು

  • ನವಗ್ರಹ ಹೋಮ: ಸಕಲ ಆರೋಗ್ಯ, ಸಂಕಷ್ಟ ನಿವಾರಣೆ ಮತ್ತು ನವಗ್ರಹ ದೋಷಗಳಿಗೆ.
  • ಅಶ್ಲೇಷಬಲಿ ಹಾಗೂ ಗರುಡ ಹೋಮ: ಸರ್ಪದೋಷ ನಿವಾರಣೆ, ಶೀಘ್ರ ವಿವಾಹ ಮತ್ತು ಸರ್ಪಪೀಡೆ ತಡೆಯಲು.
  • ನಾರಾಯಣ ಬಲಿ: ಪ್ರೇತಬಾಧೆ, ಪ್ರಕೃತಿ ವಿರೋಧ ಮರಣಗಳಿಗೆ ಶಾಂತಿ ನೀಡಲು.
  • ವೈವಸ್ವತ ಹೋಮ: ಪಿತೃಶಾಪ ಮತ್ತು ಮಾತೃಶಾಪಗಳ ನಿವಾರಣೆಗಾಗಿ.
  • ಚಂಡಿಕೇಶ್ವರ ಹೋಮ: ಬಾಲಗ್ರಹ ದೋಷಗಳ ನಿವಾರಣೆಗಾಗಿ.
  • ಗೋಮುಖ ಪ್ರಸವ ಶಾಂತಿ: ದುಷ್ಟ ನಕ್ಷತ್ರದಲ್ಲಿ ಜನಿಸಿದ ಮಕ್ಕಳ ಶಾಂತಿಗಾಗಿ.
  • ಕೂಷ್ಮಾಂಡ ಹೋಮ: ಮಹಾ ಪ್ರಾಯಶ್ಚಿತ್ತ ಕರ್ಮಕ್ಕಾಗಿ.
  • ವರುಣ ಹೋಮ: ಸಾಲದ ಬಾಧೆ ನಿವಾರಣೆಗಾಗಿ.

ಮನೆ ಕಟ್ಟುವಾಗ ನಾಗರ ಹಾದಿ ಮುಚ್ಚಿದರೆ ಅಪಾಯ ತಪ್ಪಿದ್ದಲ್ಲ! ಏನಿದು ಸರ್ಪ ವೀಥಿ ನಿರೋಧನ ದೋಷ?

6. ವಯೋಮಾನಕ್ಕೆ ಅನುಗುಣವಾದ ಶಾಂತಿ ಹೋಮಗಳು

  • ಷಷ್ಠಿಪೂರ್ತಿ / ಉಗ್ರರಥ ಶಾಂತಿ: 60ನೇ ವರ್ಷದಲ್ಲಿ ಆಯುಷ್ಯ ವೃದ್ಧಿಗಾಗಿ.
  • ಭೀಮರಥ ಶಾಂತಿ: 70ನೇ ವರ್ಷ ಪೂರೈಸಿದ ಸಂದರ್ಭದಲ್ಲಿ.
  • ಸಹಸ್ರ ಚಂದ್ರ ದರ್ಶನ ಶಾಂತಿ: 80ನೇ ವಯಸ್ಸಿನಲ್ಲಿ (1000 ಪೂರ್ಣಚಂದ್ರರನ್ನು ನೋಡಿದ ಸೌಭಾಗ್ಯಕ್ಕಾಗಿ).

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts