ಜ್ಯೋತಿಷ್ಯ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ ಪ್ರಖ್ಯಾತ ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಅವರು 2026ರ ವರ್ಷದ ರಾಶಿಫಲಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಶ್ರೀಗುರುಭ್ಯೋ.ಕಾಮ್ ಜತೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಶ್ನೋತ್ತರ ರೂಪದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡೂ ರಾಶಿಯವರ ವರ್ಷ ಭವಿಷ್ಯ ತಿಳಿಸಿದ್ದಾರೆ.
ಪ್ರಶ್ನೋತ್ತರಗಳು (Q&A)
1. ಗ್ರಹ ಗೋಚಾರದ ಆಧಾರದಲ್ಲಿ ಈ ವರ್ಷ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರಬಹುದಾದ ರಾಶಿಗಳು ಯಾವುವು?
-
ಜನವರಿಯಿಂದ ಮೇ ತನಕ: ವೃಷಭ, ಸಿಂಹ, ತುಲಾ, ಧನುಸ್ಸು ಹಾಗೂ ಕುಂಭ.
-
ಜೂನ್‌ನಿಂದ ಅಕ್ಟೋಬರ್ ತನಕ: ಮಿಥುನ, ಕನ್ಯಾ, ವೃಶ್ಚಿಕ, ಮಕರ ಹಾಗೂ ಮೀನ.
-
ನವೆಂಬರ್-ಡಿಸೆಂಬರ್: ಮೇಷ ಹಾಗೂ ಕರ್ಕಾಟಕ.
2. ಮದುವೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ವರ್ಷ ಯಾವ ರಾಶಿಯವರಿಗೆ ಯಶಸ್ಸು ಸಿಗುತ್ತದೆ?
-
ವೃಷಭ, ಧನುಸ್ಸು, ಕುಂಭ, ಮಕರ, ವೃಶ್ಚಿಕ, ಕನ್ಯಾ ಹಾಗೂ ಮಿಥುನ ರಾಶಿಯವರಿಗೆ ವಿವಾಹ ಯೋಗವಿದೆ.
3. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಅಥವಾ ಈಗ ಪ್ರಯತ್ನಿಸಿದರೆ ಯಾವ ರಾಶಿಗಳಿಗೆ ಉತ್ತಮ ಗ್ರಹಸ್ಥಿತಿ ಇದೆ?
-
ಕನ್ಯಾ, ತುಲಾ, ಧನುಸ್ಸು, ಸಿಂಹ, ವೃಶ್ಚಿಕ, ವೃಷಭ ಹಾಗೂ ಮಿಥುನ ರಾಶಿಗಳು.
4. ಉದ್ಯೋಗ ಬದಲಾವಣೆ ಮತ್ತು ಉದ್ಯೋಗದಲ್ಲಿ ಯಶಸ್ಸನ್ನು ಯಾವ ರಾಶಿಯವರು ನಿರೀಕ್ಷಿಸಬಹುದು?
-
ಮಿಥುನ, ಮೀನ, ಧನುಸ್ಸು, ಕನ್ಯಾ, ವೃಷಭ ಹಾಗೂ ಮಕರ ರಾಶಿಯವರು.
5. ವ್ಯಾಪಾರ-ವ್ಯವಹಾರದಲ್ಲಿ ಯಾವ ರಾಶಿಯವರು ಅಭಿವೃದ್ಧಿ ಕಾಣಬಹುದು?
-
ಕನ್ಯಾ, ವೃಷಭ, ತುಲಾ, ಕುಂಭ, ಮಿಥುನ ಹಾಗೂ ಧನುಸ್ಸು.
ಶ್ರೀ ಬಗಳಾಮುಖಿ ದೇವಿಯ ಆರಾಧನೆ, ಹೋಮ ವಿಧಾನ ಮತ್ತು ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳು
6. ಆರೋಗ್ಯದ ವಿಚಾರದಲ್ಲಿ ಯಾವ್ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು?
-
ಸಿಂಹ, ಧನುಸ್ಸು, ಮೇಷ, ಮೀನ, ವೃಶ್ಚಿಕ ಹಾಗೂ ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
7. ಸೈಟು ಖರೀದಿ, ಜಮೀನು ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಯಾವ ರಾಶಿಯವರಿಗೆ ಅನುಕೂಲವಿದೆ?
-
ವೃಷಭ, ಕನ್ಯಾ ಹಾಗೂ ಮಕರ ರಾಶಿಯವರಿಗೆ ಭೂಮಿ/ಮನೆ ಯೋಗವಿದೆ.
8. ಕೋರ್ಟ್ ವ್ಯಾಜ್ಯಗಳ ಬಗ್ಗೆ ಯಾವ ರಾಶಿಯವರು ಜಾಗರೂಕರಾಗಿರಬೇಕು ಮತ್ತು ಯಾರಿಗೆ ಪರಿಹಾರ ಸಿಗಲಿದೆ?
-
ಜಾಗರೂಕರಾಗಿರಬೇಕಾದವರು: ಮೀನ, ಮೇಷ ಹಾಗೂ ಕುಂಭ.
-
ಸಮಸ್ಯೆ ಬಗೆಹರಿಯುವವರು: ಸಿಂಹ, ವೃಶ್ಚಿಕ ಹಾಗೂ ಧನುಸ್ಸು.
ತಿರುನೆಲ್ಲಾರ್ ದರ್ಬಾರಣ್ಯೇಶ್ವರ ದೇಗುಲ: ಶನಿ ದೋಷ ಮುಕ್ತಿಗೆ ದಕ್ಷಿಣ ಭಾರತದ ಮಹಾ ಕ್ಷೇತ್ರ
9. ವಿದೇಶ ಪ್ರಯಾಣ ಯಾರಿಗೆ ಅನುಕೂಲ? ಯಾರು ಈ ವರ್ಷ ಪ್ರಯಾಣಿಸಬಾರದು?
-
ಅನುಕೂಲವಿರುವವರು: ಕನ್ಯಾ, ಮಿಥುನ, ಕರ್ಕಾಟಕ ಹಾಗೂ ಮಕರ.
-
ತಪ್ಪಿಸುವುದು ಕ್ಷೇಮ: ಸಿಂಹ, ವೃಶ್ಚಿಕ, ಮೀನ, ಮೇಷ ಹಾಗೂ ಧನುಸ್ಸು.
ಧಾರ್ಮಿಕ ಪರಿಹಾರಗಳು ಮತ್ತು ದರ್ಶಿಸಬೇಕಾದ ದೇವಸ್ಥಾನಗಳು
| ರಾಶಿ | ದೇವಸ್ಥಾನ ಮತ್ತು ಸೇವೆ |
| ಮೇಷ & ಮೀನ | ತಿರುನೆಲ್ಲಾರ್ (ತಮಿಳುನಾಡು) – ಶನಿವಾರ ಎಣ್ಣೆ ಸ್ನಾನ ಮಾಡಿ ಶನೈಶ್ಚರ ದರ್ಶನ ಪಡೆಯಿರಿ. |
| ವೃಷಭ | ಕರಿಕಾನ ದುರ್ಗಾ ಪರಮೇಶ್ವರಿ – ತ್ರಿಶತಿ ಕುಂಕುಮಾರ್ಚನೆ, ಚಂಡಿಕಾ ಪಾರಾಯಣ. |
| ಮಿಥುನ | ಧರ್ಮಸ್ಥಳ – ನೇತ್ರಾವತಿ ಸ್ನಾನ, ಅಕ್ಕಿ ತುಲಾಭಾರ ಮತ್ತು ರುದ್ರಾಭಿಷೇಕ. |
| ಕರ್ಕಾಟಕ | ಸೌತಡ್ಕ ಗಣಪತಿ – ದೇವರಿಗೆ ವಿಶೇಷ ಸೇವೆ. |
| ಸಿಂಹ & ವೃಶ್ಚಿಕ | ತಿರುಪತಿ – ಶನಿವಾರದಂದು ನಡೆದುಕೊಂಡು ಬೆಟ್ಟ ಹತ್ತಿ ಶ್ರೀನಿವಾಸನ ದರ್ಶನ. |
| ಕನ್ಯಾ | ತಿರುವಣ್ಣಾಮಲೈ – ಅರುಣಾಚಲೇಶ್ವರ ದರ್ಶನ ಮತ್ತು ಗಿರಿಪ್ರದಕ್ಷಿಣೆ. |
| ತುಲಾ | ಗಾಣಗಾಪುರ – ದತ್ತಾತ್ರೇಯ ದರ್ಶನ ಮತ್ತು ಮಧುಕರ ಸೇವೆ. |
| ಧನುಸ್ಸು | ತಿರುನೆಲ್ಲಾರ್ – ಶನಿವಾರ ನಳ ತೀರ್ಥ ಸ್ನಾನ ಮತ್ತು ದರ್ಬಾರಣ್ಯೇಶ್ವರ ದರ್ಶನ. |
| ಮಕರ | ಕೊಲ್ಲೂರು ಮೂಕಾಂಬಿಕಾ – ಆರು ತುಪ್ಪದ ದೀಪ ಮತ್ತು ತ್ರಿ ಮಧು ಸೇವೆ. |
| ಕುಂಭ | ಇಡುಗುಂಜಿ ಮಹಾಗಣಪತಿ – ಪಂಚಕಜ್ಜಾಯ ಸೇವೆ. |
ಗ್ರಹ ಶಾಂತಿ, ರತ್ನ ಧಾರಣೆ ಮತ್ತು ಸ್ತೋತ್ರ ಪಠಣ
-
ಗ್ರಹ ಶಾಂತಿ:
-
ಶನಿ ಶಾಂತಿ: ಮೇಷ, ಮೀನ, ಧನುಸ್ಸು, ವೃಶ್ಚಿಕ, ಸಿಂಹ, ಕುಂಭ (ಜಪ, ತರ್ಪಣ, ದಾನ ಕಡ್ಡಾಯ).
-
ಗುರು ಶಾಂತಿ: ಕರ್ಕಾಟಕ, ಮಿಥುನ, ಮಕರ.
-
ಶುಕ್ರ ಶಾಂತಿ: ವೃಷಭ, ಕನ್ಯಾ, ತುಲಾ (ದುರ್ಗಾ ಆರಾಧನೆಯೊಂದಿಗೆ).
-
-
ರತ್ನ ಧಾರಣೆ (ಅಭಿಮಂತ್ರಿತವಾಗಿರಬೇಕು):
-
ಮೇಷ ಮತ್ತು ವೃಶ್ಚಿಕ: ಅಂಗಾರ ಮಣಿ.
-
ವೃಷಭ ಮತ್ತು ತುಲಾ: ಜಲರತ್ನ.
-
ಮಿಥುನ ಮತ್ತು ಕನ್ಯಾ: ಹರಿತಾಶ್ವ ರತ್ನ.
-
ಧನುಸ್ಸು ಮತ್ತು ಮೀನ: ಕನಕವರ್ಣಿಕಾ ರತ್ನ.
-
ಮಕರ ಮತ್ತು ಕುಂಭ: ಜ್ವಾಲಾಮುಖಿ ರತ್ನ.
-
-
ದೈನಂದಿನ ಸ್ತೋತ್ರ ಪಠಣ:
-
ಕುಂಭ, ಮೀನ, ಮೇಷ, ಸಿಂಹ, ವೃಶ್ಚಿಕ: ಶನಿ ಅಷ್ಟೋತ್ತರ, ದಶರಥ ಕೃತ ಶನಿಸ್ತೋತ್ರ, ದತ್ತಾತ್ರೇಯ ವಜ್ರ ಕವಚ.
-
ವೃಷಭ, ಕನ್ಯಾ, ತುಲಾ, ಮಿಥುನ: ವಿಷ್ಣು ಸಹಸ್ರನಾಮ.
-
ಮಕರ, ಕರ್ಕಾಟಕ: ದುರ್ಗಾ ಅಷ್ಟೋತ್ತರ ಹಾಗೂ ಗಣಪತಿ ಸ್ತೋತ್ರ.
-
ಸಂಪರ್ಕ ಮಾಹಿತಿ: > ವೈಯಕ್ತಿಕ ಜಾತಕ ವಿಮರ್ಶೆ, ವೇದೋಕ್ತ ಗ್ರಹಶಾಂತಿ ಮತ್ತು ಅಭಿಮಂತ್ರಿತ ರತ್ನಗಳಿಗಾಗಿ ಪಂಡಿತ್ ವಿಠ್ಠಲ್ ಭಟ್ ಅವರನ್ನು 63602 11237 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.





