ಏಳು ವಿಭಿನ್ನ ರತ್ನಗಳ ಸಂಗಮವಾದ ‘ಸೆವೆನ್ ಚಕ್ರ’ (Seven Chakra) ಬ್ರೇಸ್-ಲೆಟ್ ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಲೇಖನ ಇಲ್ಲಿದೆ. ನಮ್ಮ ದೇಹದಲ್ಲಿ ಏಳು ಮುಖ್ಯ ಶಕ್ತಿ ಕೇಂದ್ರಗಳಿವೆ, ಇವುಗಳನ್ನು ‘ಚಕ್ರಗಳು’ ಎಂದು ಕರೆಯಲಾಗುತ್ತದೆ. ಈ ಚಕ್ರಗಳ ಸಮತೋಲನ ತಪ್ಪಿದಾಗ ದೈಹಿಕ ಮತ್ತು ಮಾನಸಿಕ ಒತ್ತಡ ಉಂಟಾಗುತ್ತದೆ. ಈ ಏಳು ರತ್ನಗಳು ನಿಮ್ಮ ದೇಹದ ಶಕ್ತಿಯನ್ನು ಸಮತೋಲನದಲ್ಲಿಡಲು ಸಹಕರಿಸುತ್ತವೆ.
ಪ್ರತಿಯೊಂದು ರತ್ನದ ವಿಶೇಷತೆ ಮತ್ತು ಪ್ರಯೋಜನಗಳು:
1. ರೆಡ್ ಜಾಸ್ಪರ್ (Red Jasper):
ಇದು ಮೂಲಾಧಾರ ಚಕ್ರಕ್ಕೆ ಸಂಬಂಧಿಸಿದ್ದು. ಒಬ್ಬ ವ್ಯಕ್ತಿಗೆ ಹೆಚ್ಚಿನ ಧೈರ್ಯ, ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ದೈಹಿಕ ಆಲಸ್ಯವನ್ನು ದೂರ ಮಾಡಿ ಚಟುವಟಿಕೆಯಿಂದ ಇರಲು ಇದು ಸಹಕಾರಿ.
2. ಕಾರ್ನೆಲಿಯನ್ (Carnelian):
ಇದು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಮತ್ತು ಜೀವನದಲ್ಲಿ ಹೊಸ ಉತ್ಸಾಹವನ್ನು ಕಂಡುಕೊಳ್ಳಲು ಈ ರತ್ನ ಸಹಾಯ ಮಾಡುತ್ತದೆ. ಇದು ಭಾವನಾತ್ಮಕ ಸಮತೋಲನವನ್ನು ಕಾಪಾಡುತ್ತದೆ.
3. ಟೈಗರ್ ಐ (Tiger Eye):
ಇದು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಭಯ ಮತ್ತು ಆತಂಕವನ್ನು ಹೋಗಲಾಡಿಸಿ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಇದನ್ನು ರಕ್ಷಣಾತ್ಮಕ ರತ್ನ ಎಂದೂ ಕರೆಯಲಾಗುತ್ತದೆ.
4. ಗ್ರೀನ್ ಅವೆಂಚುರಿನ್ (Green Aventurine):
ಇದು ಹೃದಯದ ಚಕ್ರಕ್ಕೆ ಸಂಬಂಧಿಸಿದ್ದು. ಇದು ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ. ಮಾನಸಿಕ ಶಾಂತಿ ಹಾಗೂ ಸಂಬಂಧಗಳಲ್ಲಿ ಪ್ರೀತಿಯನ್ನು ವೃದ್ಧಿಸಲು ಇದು ರಾಮಬಾಣ.
5. ಲ್ಯಾಪಿಸ್ ಲಾಜುಲಿ (Lapis Lazuli):
ಇದು ಸಂವಹನ ಕಲೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಇದು ಪ್ರೇರಣೆ ನೀಡುತ್ತದೆ.
6. ಅಮೆಥಿಸ್ಟ್ (Amethyst):
ಇದು ಆಧ್ಯಾತ್ಮಿಕ ಜಾಗೃತಿಯನ್ನು ನೀಡುವ ರತ್ನ. ಅತಿಯಾದ ಕೋಪ, ಒತ್ತಡ ಮತ್ತು ನಿದ್ರೆಯ ಸಮಸ್ಯೆಗಳಿದ್ದರೆ ಅಮೆಥಿಸ್ಟ್ ಅದನ್ನು ಶಮನಗೊಳಿಸುತ್ತದೆ. ಮನಸ್ಸಿಗೆ ಶಾಂತಿ ನೀಡುವ ಗುಣ ಇದಕ್ಕಿದೆ.
7. ಕ್ರಿಸ್ಟಲ್ / ಕ್ವಾರ್ಟ್ಜ್ (Crystal/Clear Quartz):
ಇದು ಎಲ್ಲಾ ರತ್ನಗಳ ಶಕ್ತಿಯನ್ನು ವೃದ್ಧಿಸುತ್ತದೆ. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಮೂಲಕ ಸಕಾರಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುತ್ತದೆ. ಇದು ಸ್ಮರಣಶಕ್ತಿಯನ್ನು ಚುರುಕುಗೊಳಿಸುತ್ತದೆ.
ಹೀಗೆ ಏಳು ಚಕ್ರಗಳನ್ನು ಪ್ರತಿನಿಧಿಸುವ ಹಾಗೂ ಸಾಮಾನ್ಯವಾಗಿ ಎಲ್ಲರೂ ಧರಿಸಬಹುದಾದ ಸಪ್ತಚಕ್ರ ಬ್ರೇಸ್ ಲೆಟ್ ಇದು. ಇದರಿಂದ ಆಗುವ ಪ್ರಯೋಜನಗಳನ್ನು ಈ ಮೇಲೆ ತಿಳಿಸಲಾಗಿದೆ. ಅದನ್ನು ಸಾರಾಂಶದ ರೀತಿಯಲ್ಲಿ ಹೇಳಬೇಕು ಅಂತಾದರೆ,
ವಿದೇಶಿ ಉದ್ಯೋಗದ ಕನಸೇ? ನಿಮ್ಮ ಜಾತಕದಲ್ಲಿದೆಯೇ ವಿದೇಶ ಯೋಗ? ಇಲ್ಲಿದೆ ಸಮಗ್ರ ಮಾಹಿತಿ
ಒಟ್ಟಾರೆ ಪ್ರಯೋಜನಗಳು:
- ಸಕಾರಾತ್ಮಕತೆ: ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಪಾಸಿಟಿವ್ ವೈಬ್ಸ್ ನೀಡುತ್ತದೆ.
- ಒತ್ತಡ ಮುಕ್ತಿ: ಕೆಲಸದ ಒತ್ತಡ ಅಥವಾ ಮನೆಯ ಕಿರಿಕಿರಿಗಳಿಂದ ಮನಸ್ಸನ್ನು ಶಾಂತವಾಗಿರಿಸುತ್ತದೆ.
- ಆರೋಗ್ಯ: ದೇಹದ ಶಕ್ತಿ ಕೇಂದ್ರಗಳನ್ನು ಸಕ್ರಿಯಗೊಳಿಸುವ ಮೂಲಕ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ಧರಿಸುವವರ ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು:
ಈ ಬ್ರೇಸ್-ಲೆಟ್ ಧರಿಸುವ ಮುನ್ನ ಅನೇಕರಲ್ಲಿ ಕೆಲವು ಗೊಂದಲಗಳಿರುತ್ತವೆ. ಅವುಗಳಿಗೆ ಇಲ್ಲಿ ಸ್ಪಷ್ಟನೆಯಿದೆ:
- ಯಾರು ಧರಿಸಬಹುದು?
- ಇದನ್ನು ಲಿಂಗಭೇದವಿಲ್ಲದೆ ಎಲ್ಲರೂ ಧರಿಸಬಹುದು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೂಡ ಇದರ ಲಾಭ ಪಡೆಯಬಹುದು. ವಿಶೇಷವಾಗಿ ಹೆಣ್ಣುಮಕ್ಕಳು ಇದನ್ನು ಧರಿಸುವುದರಿಂದ ಅವರಲ್ಲಿನ ಸೃಜನಶೀಲತೆ ಮತ್ತು ಮಾನಸಿಕ ನೆಮ್ಮದಿ ಹೆಚ್ಚುತ್ತದೆ.
- ಮಾಂಸಾಹಾರ ಸೇವನೆ ಮಾಡಬಹುದೇ?
- ಖಂಡಿತವಾಗಿಯೂ. ಈ ಬ್ರೇಸ್-ಲೆಟ್ ಧರಿಸಿದವರು ಮಾಂಸಾಹಾರ ಸೇವನೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಅಥವಾ ಅಡ್ಡಪರಿಣಾಮಗಳಿಲ್ಲ. ಇದು ನಮ್ಮ ಶರೀರದ ಶಕ್ತಿ ಕೇಂದ್ರಗಳ ಮೇಲೆ ಕೆಲಸ ಮಾಡುವುದರಿಂದ ಆಹಾರ ಪದ್ಧತಿಯು ಇದರ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದಿಲ್ಲ.
- ಯಾವಾಗ ಧರಿಸಬೇಕು?:
- ಸ್ನಾನ ಮಾಡಿದ ನಂತರ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳೊಂದಿಗೆ ಇದನ್ನು ಧರಿಸುವುದು ಉತ್ತಮ.
ಗಮನಿಸಬೇಕಾದ ಮುಖ್ಯ ಅಂಶ:
ನಿಮಗೆ ಯಾವ ನಿರ್ದಿಷ್ಟ ರತ್ನವನ್ನು ಧರಿಸಬೇಕು ಎಂಬ ಗೊಂದಲವಿದ್ದರೆ ಅಥವಾ ನಿಮ್ಮ ರಾಶಿ-ನಕ್ಷತ್ರದ ಬಗ್ಗೆ ಮಾಹಿತಿಯಿಲ್ಲದಿದ್ದರೆ, ಈ ಏಳು ರತ್ನಗಳಿರುವ ಬ್ರೇಸ್-ಲೆಟ್ ಅನ್ನು ಯಾವುದೇ ಭಯವಿಲ್ಲದೆ ಧರಿಸಬಹುದು. ಇದು ಎಲ್ಲರಿಗೂ ಶುಭ ಫಲವನ್ನೇ ನೀಡುತ್ತದೆ.
ಆದರೆ, ನಿಮ್ಮ ಜೀವನದ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಬೇಕಿದ್ದಲ್ಲಿ ಅಥವಾ ನಿಮ್ಮ ಜಾತಕಕ್ಕೆ ಅನುಗುಣವಾಗಿ ಯಾವುದಾದರೂ ಒಂದು ವಿಶೇಷ ರತ್ನವನ್ನು ಧರಿಸುವ ಆಲೋಚನೆ ಇದ್ದಲ್ಲಿ, ಒಮ್ಮೆ ಪರಿಣತ ಜ್ಯೋತಿಷಿಗಳ ಬಳಿ ಜಾತಕವನ್ನು ತೋರಿಸಿ, ಸೂಕ್ತವಾದ ರತ್ನವನ್ನು ಸಲಹೆ ಪಡೆದು ಧರಿಸುವುದು ಉತ್ತಮ.
ಸಪ್ತರತ್ನಗಳ ಬ್ರೇಸ್ ಲೆಟ್ ಸೇರಿದಂತೆ ನೀವು ಯಾವುದೇ ಶುದ್ಧ ಮತ್ತು ಪ್ರಮಾಣೀಕೃತ (Certified) ಅದೃಷ್ಟ ರತ್ನಗಳನ್ನು ಖರೀದಿಸಲು ಬಯಸಿದಲ್ಲಿ ಇಲ್ಲಿಗೆ ಭೇಟಿ ನೀಡಬಹುದು:
- ಮಳಿಗೆ: ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (JS Gems & Jewellery)
- ವಿಳಾಸ: ಪದ್ಮನಾಭನಗರ, ಬೆಂಗಳೂರು.
- ಸಂಪರ್ಕ ಸಂಖ್ಯೆ: 72047 36365
- ವೆಬ್‌ಸೈಟ್: jsgems.in
ಲೇಖನ: ಶ್ರೀನಿವಾಸ ಮಠ





