ಜ್ಯೋತಿಷ್ಯ- ವಾಸ್ತು ವಿಚಾರದಲ್ಲಿ ಆಧುನಿಕ ಬದಲಾವಣೆಗಳು ದೊಡ್ಡ ಮಟ್ಟದಲ್ಲಿ ಆಗಿವೆ. ಮುಖ್ಯ ರತ್ನಗಳನ್ನು ಬಳಸುವುದು ಒಂದು ಕಡೆಯಾದರೆ, ವಾಸ್ತುವಿನಲ್ಲಿ ಸೆಮಿ ಪ್ರಿಷಿಯಸ್ ರತ್ನಗಳ ಬಳಕೆ ವ್ಯಾಪಕವಾಗಿ ಆಗುತ್ತಿದೆ. ಅದರಿಂದ ಜನರು ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಈ ದಿನ ಅಂಥದ್ದೇ ಒಂದು ವಾಸ್ತುವಿಗೆ ಸಂಬಂಧಿಸಿದ ವಿಚಾರವೊಂದನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಸೆಮಿ ಪ್ರಿಷಿಯಸ್ ಕಲ್ಲಿನ ಹೆಸರು ಏನೆಂದರೆ, ಪೈರೈಟ್ ಕಲ್ಲು (Pyrite Stone). ಫೋಟೋ ಫ್ರೇಮಿನ ಒಳಗೆ ಇದರ ಪುಡಿಯನ್ನು ಹಾಕಿ, ಅದರ ಮಧ್ಯ ಭಾಗದಲ್ಲಿ ಚಿನ್ನದ ಬಣ್ಣದ (ಚಿನ್ನದ್ದಲ್ಲ) ಏಳು ಕುದುರೆಗಳು (ಈ ಸಂಖ್ಯೆ ಬಹಳ ಮುಖ್ಯ) ಓಡುತ್ತಿರುವ ಚಿತ್ರವನ್ನು ಹಾಕುವುದು ತುಂಬ ಒಳ್ಳೆ ಫಲಿತಾಂಶ ನೀಡುತ್ತದೆ. ಪೈರೈಟ್ ಅನ್ನು ‘ಮೂರ್ಖರ ಚಿನ್ನ’ (Fool’s Gold) ಎಂದು ಕರೆಯಲಾಗಿದ್ದರೂ, ಆಧ್ಯಾತ್ಮಿಕವಾಗಿ ಇದು ನೈಜ ಚಿನ್ನದಷ್ಟೇ ಆಕರ್ಷಕ ಶಕ್ತಿಯನ್ನು ಹೊಂದಿದೆ.
ಪೈರೆಟ್ ಕಲ್ಲನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ‘ಧನಾಕರ್ಷಣೆ’ ಮಾತ್ರವಲ್ಲ, ಯಾರಿಗೆ ಖರ್ಚಿನ ಮೇಲೆ ಹಿಡಿತ ಇರುವುದಿಲ್ಲ. ಎಷ್ಟು ಸಂಪಾದನೆ ಮಾಡಿದರೂ ವಿಪರೀತ ವೆಚ್ಚ ಮಾಡುವ ಅಭ್ಯಾಸದಿಂದ ಎಲ್ಲವೂ ಖರ್ಚಾಗಿ ಹೋಗುತ್ತಿದೆ ಎಂದಿರುವವರಿಗೆ ಆ ಗುಣದಲ್ಲಿಯೇ ಬದಲಾವಣೆ ಆಗುತ್ತದೆ. ಪೈರೈಟ್ ಕಲ್ಲುಗಳಿಂದ ತುಂಬಿದ- ಏಳು ಕುದುರೆಗಳ ಫ್ರೇಮ್ ಬಳಸುವುದರಿಂದ ಆಗುವ ಪ್ರಯೋಜನಗಳು ಏನೇನು ಎಂಬ ಮಾಹಿತಿ ಇಲ್ಲಿದೆ:
ಸಂಪತ್ತು ಮತ್ತು ಸಮೃದ್ಧಿಯ ಆಕರ್ಷಣೆ
ಪೈರೈಟ್ ಕಲ್ಲು ನೈಸರ್ಗಿಕವಾಗಿ ಚಿನ್ನದ ಬಣ್ಣವನ್ನು ಹೊಂದಿರುತ್ತದೆ ಮತ್ತು ಇದು ಹಣವನ್ನು ಆಕರ್ಷಿಸುವ ಗುಣ ಹೊಂದಿದೆ ಎಂದು ನಂಬಲಾಗಿದೆ. ಏಳು ಕುದುರೆಗಳು ಪ್ರಗತಿಯನ್ನು ಸೂಚಿಸಿದರೆ, ಪೈರೈಟ್ ಆರ್ಥಿಕ ಲಾಭವನ್ನು ಸೂಚಿಸುತ್ತದೆ. ಇವೆರಡೂ ಸೇರಿದಾಗ ಮನೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿ, ಐಶ್ವರ್ಯ ವೃದ್ಧಿಯಾಗುತ್ತದೆ.
ವೃತ್ತಿಜೀವನದಲ್ಲಿ ವೇಗದ ಪ್ರಗತಿ
ಏಳು ಕುದುರೆಗಳು ಜಯ ಮತ್ತು ವೇಗಕ್ಕೆ ಹೆಸರಾದವು. ಪೈರೈಟ್ ಕಲ್ಲುಗಳು ಆತ್ಮವಿಶ್ವಾಸ ಮತ್ತು ದೃಢತೆಯನ್ನು ಹೆಚ್ಚಿಸುತ್ತವೆ. ಕೆಲಸದಲ್ಲಿ ಬಡ್ತಿಗಾಗಿ ಕಾಯುತ್ತಿರುವವರು ಅಥವಾ ಉದ್ಯೋಗದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಈ ಫ್ರೇಮ್ ಅನ್ನು ಬಳಸುವುದರಿಂದ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ.
ನಕಾರಾತ್ಮಕ ಶಕ್ತಿಯಿಂದ ರಕ್ಷಣೆ
ಪೈರೈಟ್ ಒಂದು ರಕ್ಷಣಾತ್ಮಕ ಕಲ್ಲು (Protective Stone). ಇದು ಮನೆಯೊಳಗೆ ಬರುವ ನಕಾರಾತ್ಮಕ ಕಂಪನಗಳನ್ನು ತಡೆದು, ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮನೆಯ ಸದಸ್ಯರ ಮೇಲಾಗುವ ‘ದೃಷ್ಟಿ’ ಅಥವಾ ಕೆಟ್ಟ ಕಣ್ಣಿನ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ವ್ಯಾಪಾರದಲ್ಲಿ ಯಶಸ್ಸು
ನೀವು ವ್ಯಾಪಾರಸ್ಥರಾಗಿದ್ದರೆ ಕಚೇರಿ ಅಥವಾ ಅಂಗಡಿಯಲ್ಲಿ ಇದನ್ನು ಇರಿಸುವುದು ತುಂಬಾ ಲಾಭದಾಯಕ. ವ್ಯಾಪಾರದಲ್ಲಿ ಹೊಸ ಹೂಡಿಕೆದಾರರನ್ನು ಮತ್ತು ಗ್ರಾಹಕರನ್ನು ಆಕರ್ಷಿಸಲು ಪೈರೈಟ್ ಸಹಾಯ ಮಾಡುತ್ತದೆ, ಹಾಗೆಯೇ ಏಳು ಕುದುರೆಗಳು ವ್ಯಾಪಾರವು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರಲು ಪ್ರೇರೇಪಿಸುತ್ತವೆ.
ಈ ಪೈರೈಟ್ ಪುಡಿ ತುಂಬಿದ ಫ್ರೇಮ್ ನಲ್ಲಿ ಹಾಕಿರುವ ಚಿನ್ನದ ಬಣ್ಣದ ಏಳು ಕುದುರೆಗಳು ಓಡುತ್ತಿರುವ ಚಿತ್ರವನ್ನು ಈಶಾನ್ಯ ದಿಕ್ಕಿನಲ್ಲಿ ಹಾಕಿದಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ಕಾಣಬಹುದು. ಈಶಾನ್ಯ ದಿಕ್ಕು ಎಂದರೆ ಜಲ ತತ್ವಕ್ಕೆ ಸಂಬಂಧಿಸಿದ್ದು, ಮನೆಯಲ್ಲಿ ಧನಾತ್ಮಕ ಶಕ್ತಿಯ ಪ್ರವೇಶದ ಮುಖ್ಯ ಸ್ಥಳವುದಯ. ಈ ಪವಿತ್ರ ದಿಕ್ಕಿನಲ್ಲಿ ಪೈರೈಟ್ ಕಲ್ಲುಗಳಿಂದ ಕೂಡಿದ ಏಳು ಕುದುರೆಗಳ ಚಿತ್ರವನ್ನು ಇರಿಸುವುದು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ.
ಒತ್ತಡ ನಿವಾರಣೆ ಮತ್ತು ಮನಃಶಾಂತಿಗೆ ಸ್ಫಟಿಕ ಹಾರ: ಪ್ರಯೋಜನಗಳು ಮತ್ತು ಧಾರಣೆ ಮಾಡುವ ವಿಧಿ ವಿಧಾನಗಳು
ಈಶಾನ್ಯ ದಿಕ್ಕಿನಲ್ಲಿ ಇರಿಸುವುದರ ಪ್ರಯೋಜನಗಳು:
ಜ್ಞಾನ ಮತ್ತು ಬುದ್ಧಿವಂತಿಕೆಯ ವೃದ್ಧಿ: ಈಶಾನ್ಯ ದಿಕ್ಕು ಬುದ್ಧಿಶಕ್ತಿ ಮತ್ತು ಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ. ಪೈರೈಟ್ ಕಲ್ಲು ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಅಥವಾ ಸಂಶೋಧನೆಯಲ್ಲಿ ತೊಡಗಿರುವವರು ಈ ದಿಕ್ಕಿನಲ್ಲಿ ಫ್ರೇಮ್ ಇರಿಸುವುದರಿಂದ ಕಲಿಕೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದು.
ಹಣದ ಹರಿವು ಮತ್ತು ಆರ್ಥಿಕ ಸುಭದ್ರತೆ: ಪೈರೈಟ್ ಕಲ್ಲನ್ನು ‘ಸಂಪತ್ತಿನ ಮ್ಯಾಗ್ನೆಟ್’ (ಧನಾಕರ್ಷಕ) ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ಇದನ್ನು ಹಾಕುವುದರಿಂದ ಸ್ಥಗಿತಗೊಂಡಿರುವ ಹಣ ವಾಪಸ್ ಬರಲು ಮತ್ತು ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲು ಸಹಾಯ ಆಗುತ್ತದೆ.
ಮಾನಸಿಕ ಶಾಂತಿ ಮತ್ತು ಸ್ಪಷ್ಟತೆ: ಈಶಾನ್ಯ ದಿಕ್ಕು ಮನಸ್ಸಿನ ಶಾಂತಿಗೆ ಪ್ರಶಸ್ತವಾದುದು. ಓಡುತ್ತಿರುವ ಕುದುರೆಗಳು ಕ್ರಿಯಾಶೀಲತೆಯನ್ನು ಪ್ರತಿನಿಧಿಸಿದರೆ, ಪೈರೈಟ್ ಕಲ್ಲು ಮನಸ್ಸಿನ ಗೊಂದಲಗಳನ್ನು ನಿವಾರಿಸುತ್ತದೆ. ಇದು ಮನೆಯ ಸದಸ್ಯರ ನಡುವೆ ಅನಗತ್ಯ ವಾದಗಳನ್ನು ಕಡಿಮೆ ಮಾಡಿ, ಸಾಮರಸ್ಯವನ್ನು ಮೂಡಿಸುತ್ತದೆ.
ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ: ಶುದ್ಧವಾದ ಗಾಳಿ ಮತ್ತು ಬೆಳಕು ಪ್ರವೇಶಿಸುವ ಈ ದಿಕ್ಕಿನಲ್ಲಿ ಪೈರೈಟ್‌ನಂತಹ ನೈಸರ್ಗಿಕ ಹರಳುಗಳಿದ್ದರೆ ಅವು ಮನೆಯೊಳಗಿನ ‘ಪ್ರಾಣ ಶಕ್ತಿ’ಯನ್ನು ಶುದ್ಧೀಕರಿಸುತ್ತವೆ. ಇದು ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಅಳವಡಿಸುವಾಗ ಗಮನಿಸಬೇಕಾದ ಸೂತ್ರಗಳು:
- ಸ್ವಚ್ಛತೆ ಮುಖ್ಯ: ಈಶಾನ್ಯ ಮೂಲೆಯಲ್ಲಿ ಫ್ರೇಮ್ ಹಾಕುವ ಮೊದಲು ಆ ಜಾಗವು ತುಂಬಾ ಸ್ವಚ್ಛವಾಗಿರಲಿ.
- ಬಣ್ಣದ ಆಯ್ಕೆ: ಕುದುರೆಗಳ ಚಿತ್ರವು ಪೈರೈಟ್‌ನ ಗೋಲ್ಡನ್ ಬಣ್ಣವು ಈ ಹಿನ್ನೆಲೆಯಲ್ಲಿ ಹೆಚ್ಚು ಶಕ್ತಿಯನ್ನು ಹೊರಹೊಮ್ಮಿಸುತ್ತದೆ.
- ಎತ್ತರ: ಫ್ರೇಮ್ ಅನ್ನು ಕಣ್ಣಿನ ಮಟ್ಟಕ್ಕಿಂತ ಸ್ವಲ್ಪ ಎತ್ತರದಲ್ಲಿರಿಸಿ, ಇದರಿಂದ ಅದರ ಶಕ್ತಿಯು ಇಡೀ ಕೋಣೆಗೆ ಹರಡುತ್ತದೆ.
ನಿಮಗೆ ಇಂಥ ಪೈರೈಟ್ ಕಲ್ಲಿನ ಪುಡಿ ತುಂಬಿದ ಫ್ರೇಮ್, ಚಿನ್ನದ ಬಣ್ಣದ ಏಳು ಕುದುರೆಗಳು ಇರುವಂಥದ್ದು ಬೇಕೆಂದಲ್ಲಿ ಬೆಂಗಳೂರಿನ ಪದ್ಮನಾಭನಗರದಲ್ಲಿ ಇರುವ ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿಯಲ್ಲಿ ಖರೀದಿ ಮಾಡಬಹುದು. ಇವರ ಬಳಿ ಪೈರೈಟ್ ಸ್ಟೋನ್ ಸಹ ವಿವಿಧ ಅಳತೆಯಲ್ಲಿ ಖರೀದಿಗೆ ಸಿಗುತ್ತದೆ. ಇವುಗಳ ಗುಣಮಟ್ಟದ ಖಾತ್ರಿಗೆ ಪ್ರಮಾಣಪತ್ರ (ಸರ್ಟಿಫಿಕೇಟ್) ಸಹ ಸಿಗುತ್ತದೆ. ಮೊಬೈಲ್ ಫೋನ್ ಸಂಖ್ಯೆ- 72047 36365.
ಕೊನೆ ಮಾತು:
ಪೈರೈಟ್ ಕಲ್ಲಿನ ಫ್ರೇಮ್ ಕೇವಲ ಅಲಂಕಾರಿಕ ವಸ್ತುವಲ್ಲ, ಇದು ನಿಮ್ಮ ಮನಸ್ಥಿತಿಯನ್ನು ಸಕಾರಾತ್ಮಕವಾಗಿ ಇರಿಸಲು ಮತ್ತು ಜೀವನದಲ್ಲಿ ಶಿಸ್ತು ಹಾಗೂ ವೇಗವನ್ನು ತರಲು ಸಹಕಾರಿ. ಇನ್ನು ಬಾಗಿಲು ಅಥವಾ ಕಿಟಕಿ ಎದುರಿಗೆ ಬರುವಂತೆ ಈ ಫ್ರೇಮ್ ಹಾಕುವುದನ್ನು ತಪ್ಪಿಸುವುದು ಒಳ್ಳೆಯದು.
-ಶ್ರೀನಿವಾಸ ಮಠ





