ಜಾತಕದಲ್ಲಿ ನಾಗದೋಷವಿದೆಯೇ? ಸರ್ಪ ಸಂಸ್ಕಾರ ಮತ್ತು ಆಶ್ಲೇಷಾ ಬಲಿ ನಡುವಿನ ವ್ಯತ್ಯಾಸ ತಿಳಿಯಿರಿ

A realistic image of a young boy in traditional clothing worshipping a stone Naga (serpent deity) idol in a lush sacred grove (Naga Bana) in coastal Karnataka.
ನಾಗಾರಾಧನೆಯ ಸಾಂಕೇತಿಕ ಎಐ ಚಿತ್ರ

ಲೇಖನ- ಪ್ರಕಾಶ್ ಅಮ್ಮಣ್ಣಾಯ

ನಾಗಾರಾಧನೆ ಬಗ್ಗೆ ತಿಳಿಸಿಕೊಡುವಂಥ ಮಾರ್ಗದರ್ಶಿ ಲೇಖನ ಇದು. ನಾಗ ಎಂದರೆ ಕೇವಲ ಹರಿದಾಡುವ ಹಾವಲ್ಲ; ಅದು ಈ ಪ್ರಕೃತಿಯ ಶಕ್ತಿ, ಸೂರ್ಯನ ಕಿರಣಗಳಲ್ಲಿ ಅಡಗಿರುವ ಮೋಹಕ ಚೈತನ್ಯ. ‘ದೇವನೊಬ್ಬ ನಾಮ ಹಲವು’ ಎಂಬಂತೆ, ಆ ಪ್ರದ್ಯುಮ್ನ-ಅನಿರುದ್ಧ-ಸಂಕರ್ಷಣ ರೂಪಿ ಪರಮಾತ್ಮನ ಅಧೀನದಲ್ಲಿರುವ ಸಕಲ ಸರೀಸೃಪಗಳ ಅಭಿಮಾನಿ ದೇವನೇ ನಾಗದೇವ. ನಾಗಾರಾಧನೆಯ ಮೂಲ ಇರುವುದೇ ಜಾಗೃತಿ ಮತ್ತು ಅನುಗ್ರಹದಲ್ಲಿ. ಒಂದು ಸರ್ಕಾರಿ ಇಲಾಖೆಯ ಅಧಿಕಾರಿಗೆ ತೊಂದರೆ ನೀಡಿದರೆ ಇಡೀ ಸರ್ಕಾರವೇ ಹೇಗೆ ಎದ್ದು ನಿಲ್ಲುತ್ತದೆಯೋ ಹಾಗೆಯೇ ಪ್ರಕೃತಿಯ ಈ ಜೀವಿಗಳಿಗೆ ತೊಂದರೆ ನೀಡಿದಾಗ ಅದರ ಅಭಿಮಾನಿ ದೇವತೆಯ ಕ್ರೋಧ ‘ನಾಗದೋಷ’ವಾಗಿ ಪರಿಣಮಿಸುತ್ತದೆ. ನಮ್ಮ ಪೂರ್ವಜರು ನಾಗಬನ, ನಾಗಮಂಡಲ, ಡಕ್ಕೆಬಲಿ ಮತ್ತು ತಂಬಿಲಗಳ ಮೂಲಕ ಈ ಶಕ್ತಿಯನ್ನು ಪೂಜಿಸತೊಡಗಿದ್ದೇ ಮನುಷ್ಯನಲ್ಲಿ ಪ್ರಕೃತಿಯ ಬಗ್ಗೆ ಸ್ವಪ್ರಜ್ಞೆ ಮೂಡಿಸಲು.

ಜಾತಕದಲ್ಲಿ ನಾಗದೋಷದ ಮರ್ಮ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವು ನಾಗನ ಮೋಹಕ ಗುಣದ ಪ್ರತೀಕ. ಆರಿದ್ರಾ, ಸ್ವಾತಿ ಮತ್ತು ಶತಭಿಷ ನಕ್ಷತ್ರಗಳಲ್ಲಿ ರಾಹುವಿನ ಸ್ಥಿತಿಗತಿಗಳು ನಾಗದೋಷದ ಸುಳಿವು ನೀಡುತ್ತವೆ.

  • ಗ್ರಹಗಳ ಮೈತ್ರಿ: ಕುಜ-ರಾಹು, ರವಿ-ರಾಹು, ಶನಿ-ಕೇತು ಅಥವಾ ಶುಕ್ರ-ಕೇತುಗಳ ಯುತಿಗಳು ಜಾತಕದಲ್ಲಿ ಅಶುಭ ಸ್ಥಾನಗಳಲ್ಲಿದ್ದಾಗ ಅದು ಸರ್ಪದೋಷದ ಸೂಚಕ ಎನ್ನಲಾಗುತ್ತದೆ.
  • ವಾಸ್ತವದ ದೋಷ: ಕೇವಲ ಜಾತಕ ನೋಡಿ ದೋಷ ನಿರ್ಣಯಿಸಬಾರದು. ವಾಹನದ ಚಕ್ರಕ್ಕೆ ಹಾವು ಸಿಲುಕುವುದು, ನಾಗವನಕ್ಕೆ ಬೆಂಕಿ ಹಚ್ಚುವುದು ಅಥವಾ ಅರಿವಿಲ್ಲದೆ ಸರ್ಪ ಹತ್ಯೆ ಮಾಡುವುದು ಮಹಾಪಾಪಕ್ಕೆ ದಾರಿ ಮಾಡಿಕೊಡುತ್ತದೆ.

ಸರ್ಪ ಸಂಸ್ಕಾರವೇ ಅಥವಾ ಆಶ್ಲೇಷಾ ಬಲಿಯೇ?

ನಮ್ಮಲ್ಲಿ ಒಂದು ಗೊಂದಲವಿದೆ—ಎಲ್ಲದಕ್ಕೂ ಸರ್ಪ ಸಂಸ್ಕಾರ ಬೇಕೇ? ಖಂಡಿತ ಇಲ್ಲ.

  1. ಸರ್ಪ ಸಂಸ್ಕಾರ: ಸರ್ಪ ಹತ್ಯೆ ನಡೆದಿದೆ ಎಂಬ ಖಚಿತ ಮಾಹಿತಿ ಇದ್ದಾಗ ಅಥವಾ ಪ್ರತ್ಯಕ್ಷವಾಗಿ ಅಂತಹ ದೋಷಕ್ಕೆ ಒಳಗಾದಾಗ ಮಾತ್ರ ಇದು ಅನಿವಾರ್ಯ.
  2. ಆಶ್ಲೇಷಾ ಬಲಿ: ನಾವಿರುವ ಭೂಮಿಯ ಋಣ ತೀರಿಸಲು 12 ವರ್ಷಕ್ಕೊಮ್ಮೆ ಈ ಪೂಜೆ ಮಾಡಿಸುವುದು ಶ್ರೇಯಸ್ಕರ. ಮನೆ ಕಟ್ಟುವಾಗ ಮಾಡುವ ದಾರು ಛೇದನ (ಮರ ಕಡಿಯುವುದು), ಶಿಲಾ ಭೇದನ (ಕಲ್ಲು ಹೊಡೆಯುವುದು) ಅಥವಾ ಹುತ್ತ ಒಡೆಯುವ ಅನಿವಾರ್ಯ ಬಂದಾಗ ನಾಗದೇವರ ಕ್ಷಮೆಯ ರೂಪದಲ್ಲಿ ಆಶ್ಲೇಷಾ ಬಲಿ ನೀಡಬೇಕು.

ನೆನಪಿರಲಿ: ಹಾವಾಡಿಗರು ಹಾವನ್ನು ಹಿಂಸಿಸುವುದನ್ನು ನೋಡಿ ಆನಂದಿಸಿ ಹಣ ನೀಡುವುದು ಕೂಡ ಸರ್ಪ ಹಿಂಸೆಗೆ ನೀಡುವ ಪ್ರಚೋದನೆಯೇ ಸರಿ. ಇಂತಹ ಅರಿವಿಲ್ಲದೆ ಮಾಡಿದ ತಪ್ಪುಗಳಿಗೆ ಆಶ್ಲೇಷಾ ಬಲಿ ಮತ್ತು ನಾಗದೇವರಿಗೆ ಪ್ರಿಯವಾದ ಪವಮಾನ ಸೂಕ್ತಾಭಿಷೇಕವು ಅತ್ಯಂತ ಸೂಕ್ತವಾದ ಪರಿಹಾರ.

ಜಾತಕದಲ್ಲಿ ಅದ್ಭುತ ಯೋಗವಿದ್ದರೂ ಫಲ ಸಿಗುತ್ತಿಲ್ಲವೇ? ಲಕ್ಷ ಜಾತಕ ವಿಶ್ಲೇಷಿಸಿದ ಪ್ರಕಾಶ್ ಅಮ್ಮಣ್ಣಾಯ ಬಿಚ್ಚಿಟ್ಟ ರಹಸ್ಯಗಳಿವು!

ಸಾರಾಂಶ: ಭಯದಿಂದಲ್ಲ, ಭಕ್ತಿಯಿಂದ ನಾಗನನ್ನು ಆರಾಧಿಸಿ. ಪ್ರಕೃತಿಯ ಪ್ರತಿಯೊಂದು ಜೀವಿಯಲ್ಲೂ ಆ ಭಗವಂತನ ರೂಪವನ್ನು ಕಾಣುವುದೇ ನಿಜವಾದ ನಾಗಾರಾಧನೆ.

ನಿರೂಪಣೆ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts