ಸನಾತನ ಧರ್ಮದ ಪ್ರಕಾರ ಮಾಘ ಮಾಸದ ಪೌರ್ಣಮಿಯು ಅತ್ಯಂತ ಪವಿತ್ರ ತಿಥಿಗಳಲ್ಲಿ ಒಂದು. ಇದನ್ನು ‘ಮಾಘಿ ಪೂರ್ಣಿಮಾ’ ಎಂದು ಸಹ ಕರೆಯಲಾಗುತ್ತದೆ. ಸ್ಕಂದ ಪುರಾಣ, ಪದ್ಮ ಪುರಾಣ ಮತ್ತು ವಿಷ್ಣು ಪುರಾಣಗಳಲ್ಲಿ ಮಾಘ ಮಾಸದ ಸ್ನಾನ, ಪೂಜೆ ಮತ್ತು ದಾನಗಳ ಮಹತ್ವವನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಈ ದಿನ ಭಕ್ತಿಯಿಂದ ಮಾಡಿದ ಕರ್ಮಗಳು ಪಾಪಕ್ಷಯ ಹಾಗೂ ಅನಂತ ಪುಣ್ಯಕ್ಕೆ ಕಾರಣವಾಗುತ್ತವೆ ಎಂದು ಶಾಸ್ತ್ರಗಳು ಸಾರುತ್ತವೆ.
ಇದೇ ಫೆಬ್ರವರಿ 1ನೇ ತಾರೀಕಿನಂದು ಮಾಘ ಪೌರ್ಣಮಿ ಇದೆ. ಈ ಹಿನ್ನೆಲೆಯಲ್ಲಿ ಲೇಖನದಲ್ಲಿ ಉಲ್ಲೇಖಿಸುವಂಥ ಮಾಹಿತಿಗಳಿಂದ ನೆರವಾಗುತ್ತದೆ.
ಮಾಘ ಪೌರ್ಣಮಿಯ ಶಾಸ್ತ್ರದ ಮಹತ್ವ
• ಸ್ಕಂದ ಪುರಾಣದಲ್ಲಿ ಮಾಘ ಮಾಸದ ಸ್ನಾನವು ಸಕಲ ಪಾಪಗಳನ್ನು ನಾಶಮಾಡುತ್ತದೆ ಎಂದು ಉಲ್ಲೇಖ
• ಪದ್ಮ ಪುರಾಣದಲ್ಲಿ ವಿಷ್ಣು ಆರಾಧನೆಯಿಂದ ಅನಂತ ಫಲ ದೊರಕುತ್ತದೆ ಎಂಬ ವರ್ಣನೆ
• ಮಾಘ ಮಾಸದ ದಾನವನ್ನು ‘ಅಕ್ಷಯ ಫಲ ಪ್ರದಾಯಕ’ ಎಂದು ಧರ್ಮಗ್ರಂಥಗಳು ಕರೆದಿವೆ
ಮಾಘ ಪೌರ್ಣಮಿ ಪೂಜಾ ವಿಧಾನ
ಮಾಘ ಸ್ನಾನ
• ಸೂರ್ಯೋದಯಕ್ಕೂ ಮುನ್ನ ಪವಿತ್ರ ನದಿಯಲ್ಲಿ ಅಥವಾ ಮನೆಯಲ್ಲೇ ಸ್ನಾನ
• “ಗಂಗೆ ಚ ಯಮುನೇ ಚೈವ…” ಮಂತ್ರ ಪಠಿಸಿ ನದಿಗಳ ಸ್ಮರಣೆ
ಶ್ರೀ ಸತ್ಯನಾರಾಯಣ ವ್ರತ
• ಪೌರ್ಣಮಿಯಂದು ಕಥಾ ಶ್ರವಣ ಅಥವಾ ಪೂಜೆ
• ಧನ, ಗೃಹಶಾಂತಿ ಮತ್ತು ಸುಖಸಮೃದ್ಧಿಗೆ ಕಾರಣ
ವಿಷ್ಣು ಆರಾಧನೆ
• ತುಳಸಿ ದಳಗಳಿಂದ ಪೂಜೆ
• ವಿಷ್ಣು ಸಹಸ್ರನಾಮ ಪಠಣ
• ನೈವೇದ್ಯ ಸಮರ್ಪಣೆ
ಚಂದ್ರ ಪೂಜೆ
• ಸಂಜೆ ಚಂದ್ರೋದಯದ ನಂತರ ಅರ್ಘ್ಯ ಅರ್ಪಣೆ
• ಮಾನಸಿಕ ಶಾಂತಿ ಮತ್ತು ಗ್ರಹದೋಷ ಶಮನ
ದೀಪಾರಾಧನೆ
• ತುಳಸಿ ಕಟ್ಟೆ ಹಾಗೂ ಮನೆಯ ಪ್ರವೇಶದ ಬಳಿ ದೀಪ ಹಚ್ಚುವುದು
• ಲಕ್ಷ್ಮೀ ಕೃಪೆ ಸ್ಥಿರವಾಗುತ್ತದೆ ಎಂದು ಶಾಸ್ತ್ರೋಕ್ತ ನಂಬಿಕೆ
ಮಾಘ ಪೌರ್ಣಮಿಯ ದಿನ ಮಾಡಬೇಕಾದ ಪ್ರಮುಖ ದಾನಗಳು
ಎಳ್ಳು ದಾನ
• ಶನಿ ದೋಷ ನಿವಾರಣೆ
• ಪಿತೃಗಳ ತೃಪ್ತಿಗೆ ಸಹಕಾರಿ
ವಸ್ತ್ರ ದಾನ
• ಬಡವರಿಗೆ ಬಟ್ಟೆ ಅಥವಾ ಹೊದಿಕೆ ನೀಡುವುದು
• ಮಹಾಪುಣ್ಯದಾಯಕ
ಅನ್ನದಾನ
• ಎಲ್ಲಾ ದಾನಗಳಲ್ಲಿ ಶ್ರೇಷ್ಠ
• ಹಸಿದವರಿಗೆ ಅನ್ನ ಅಥವಾ ಸಿಹಿ ಪದಾರ್ಥ ವಿತರಣೆ
ತುಪ್ಪ, ಬೆಲ್ಲ ಮತ್ತು ಧಾನ್ಯ ದಾನ
• ಆರ್ಥಿಕ ಸಮೃದ್ಧಿ ವೃದ್ಧಿಗೆ ಸಹಕಾರಿ
ಬೆಳ್ಳಿ ದಾನ
• ಚಂದ್ರ ಗ್ರಹ ಶಾಂತಿಗಾಗಿ ಶುಭಕರ
ಮಾಘ ಪೌರ್ಣಮಿ ವಿಶೇಷ: ಗಜೇಂದ್ರ ಮೋಕ್ಷದ ಪುಣ್ಯಕಥೆ ಮತ್ತು ವಾದಿರಾಜ ತೀರ್ಥರ ಭಕ್ತಿ ಲಹರಿ
ಶಾಸ್ತ್ರೋಕ್ತ ವಿಶೇಷ ನಿಯಮಗಳು
• ಉಪವಾಸ ಅಥವಾ ಫಲಾಹಾರ ಸೇವನೆ
• ಭಗವನ್ನಾಮ ಸ್ಮರಣೆ
• ಮೌನ ವ್ರತ ಮತ್ತು ಧ್ಯಾನ
ಕೊನೆಮಾತು
ಮಾಘ ಪೌರ್ಣಮಿಯನ್ನು ಶಾಸ್ತ್ರೋಕ್ತ ವಿಧಾನದಲ್ಲಿ ಆಚರಿಸುವುದರಿಂದ ಪಾಪಕ್ಷಯ, ಆರೋಗ್ಯ, ಧನಸಮೃದ್ಧಿ ಮತ್ತು ಆತ್ಮಶಾಂತಿ ಲಭಿಸುತ್ತದೆ ಎಂದು ಪುರಾಣಗಳು ಸ್ಪಷ್ಟಪಡಿಸುತ್ತವೆ. ಭಕ್ತಿಯಿಂದ ಮಾಡಿದ ಪ್ರತಿಯೊಂದು ಪುಣ್ಯಕರ್ಮವೂ ಈ ದಿನ ಅನಂತ ಫಲ ನೀಡುತ್ತದೆ ಎಂಬುದು ಸನಾತನ ಧರ್ಮದ ಶಾಶ್ವತ ಸಂದೇಶವಾಗಿದೆ.
ಲೇಖನ- ಶ್ರೀನಿವಾಸ ಮಠ





