ಲೇಖನ- ಪಂಡಿತ್ ವಿಠ್ಠಲ್ ಭಟ್
ಗಡಿಯಾರದ ಮುಳ್ಳಿನ ಏರಿಳಿತದಂತೆಯೇ ಮನುಷ್ಯರ ಬದುಕು. ಅದನ್ನು ಜ್ಯೋತಿಷ್ಯಕ್ಕೆ ಅನ್ವಯಿಸಿ ಹೇಳುವುದಾದರೆ, ಕೆಲ ವರ್ಷಗಳು ಉತ್ತಮವಾಗಿರುತ್ತವೆ, ಹಣಕಾಸಿನ ಅನುಕೂಲ, ಉದ್ಯೋಗದಲ್ಲಿ ಯಶಸ್ಸು ಹೀಗೇ ಏರಿಕೆಯ ಪರ್ವ. ಇನ್ನು ಕೆಲವು ವರ್ಷ ಸಾಲ, ಅನಾರೋಗ್ಯ, ಪ್ರೇಮ ವೈಫಲ್ಯ, ಅವಮಾನ ಹೀಗೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲವು ಪರಿಹಾರಗಳು ಖಂಡಿತವಾಗಿಯೂ ಪರಿಣಾಮ ಬೀರುತ್ತವೆ. 2026ನೇ ಇಸವಿ ಎಂಬುದು ಮೇಷ ರಾಶಿಯವರಿಗೆ ಪರೀಕ್ಷೆ- ಸವಾಲುಗಳನ್ನು ಒಡ್ಡುವ ವರ್ಷ. ಈ ವರ್ಷದಲ್ಲಿ ಮೇಷ ರಾಶಿಯವರ ಮೇಲೆ ಸಾಡೇ ಸಾತ್ ಶನಿಯ ಪ್ರಭಾವ, ವರ್ಷಾಂತ್ಯದ ತನಕ ಗುರುಬಲದ ಕೊರತೆ, ಜೊತೆಗೆ ರಾಹು–ಕೇತುಗಳ ಸಂಚಾರವು ಅನುಕೂಲಕರವಾಗಿಲ್ಲ— ಈ ಮೂರು ಪ್ರಮುಖ ಗ್ರಹೀಯ ಕಾರಣಗಳಿಂದಾಗಿ ಜೀವನದ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಸ್ಥಿತಿ ನಿರ್ಮಾಣವಾಗಲಿದೆ. ಉದ್ಯೋಗ, ವ್ಯಾಪಾರ, ಹಣಕಾಸು ವ್ಯವಹಾರ, ಆರೋಗ್ಯ ಹಾಗೂ ಮಾನಸಿಕ ಶಾಂತಿಯ ವಿಷಯದಲ್ಲಿ ಆತಂಕದ ಸನ್ನಿವೇಶ ಸೃಷ್ಟಿ ಆಗುತ್ತದೆ.
ಶನಿಯಿಂದ ಕಾರ್ಯಸಿದ್ಧಿ ವಿಳಂಬ:
ಜ್ಯೋತಿಷ್ಯ ಗ್ರಂಥಗಳು ಸ್ಪಷ್ಟವಾಗಿ ಹೇಳುವಂತೆ— “ಶನಿ ರ್ದೀರ್ಘಕಾರ್ಯೇಷು ವಿಘ್ನಕಾರಣಮುಚ್ಯತೇ”. ಅಂದರೆ ಶನಿಯ ಪ್ರಭಾವ ಇರುವಾಗ ಕಾರ್ಯಸಿದ್ಧಿ ವಿಳಂಬವಾಗುತ್ತದೆ, ಶ್ರಮ ಹೆಚ್ಚುತ್ತದೆ, ಫಲ ತಡವಾಗಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಮೇಷ ರಾಶಿಯವರು ಈಗಾಗಲೇ ಅನೇಕ ಪರಿಹಾರ ಮಾರ್ಗಗಳನ್ನು ಯೋಚಿಸಿರಬಹುದು— ಹೋಮ, ಹವನ, ದಾನ, ವ್ರತ, ಪೂಜೆ ಇತ್ಯಾದಿ. ಆದರೆ ಇವುಗಳನ್ನು ನಿಯಮಿತವಾಗಿ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಸರಳ, ದೀರ್ಘಕಾಲಿಕ ಮತ್ತು ಪರಿಣಾಮಕಾರಿ ಪರಿಹಾರ ಏನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಅದಕ್ಕೆ ಉತ್ತರ: ಉಪರತ್ನಗಳ ಧಾರಣೆ.
Sade Sati Shani: ಸಾಡೇಸಾತ್ ಶನಿ ಎಂದರೇನು, ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ 7 ಮುಂಜಾಗ್ರತೆಗಳೇನು?
ವ್ಯಾಘ್ರ ನೇತ್ರ ರತ್ನ ಅಥವಾ ಟೈಗರ್ ಐ:
ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳು ಕೇವಲ ಅಲಂಕಾರವಲ್ಲ. ಅವುಗಳು ಗ್ರಹಶಕ್ತಿಗಳನ್ನು ಸಮತೋಲನಗೊಳಿಸುವ ಸಾಧನಗಳು. ಮುಖ್ಯ ರತ್ನಗಳೊಂದಿಗೆ ಉಪರತ್ನಗಳಿಗೂ ಸಮಾನ ಮಹತ್ವವಿದೆ. ವಿಶೇಷವಾಗಿ ಕಠಿಣ ಗ್ರಹಸಂಚಾರ ಇರುವ ವರ್ಷಗಳಲ್ಲಿ ಉಪರತ್ನಗಳು ಹೆಚ್ಚು ಉಪಯುಕ್ತವಾಗುತ್ತವೆ. 2026ನೇ ಇಸವಿಯಲ್ಲಿ ಮೇಷ ರಾಶಿಯವರಿಗೆ ಅತ್ಯಂತ ಸೂಕ್ತವಾಗಿರುವ ಉಪರತ್ನವೆಂದರೆ ವ್ಯಾಘ್ರ ನೇತ್ರ ರತ್ನ.
ವ್ಯಾಘ್ರ ನೇತ್ರ ರತ್ನ – ಶಕ್ತಿ ಮತ್ತು ರಕ್ಷಣೆಯ ಸಂಕೇತ. ಇದನ್ನು ಇಂಗ್ಲಿಷ್ ನಲ್ಲಿ ಟೈಗರ್ ಐ ಎಂದು ಕರೆಯಲಾಗುತ್ತದೆ. ವ್ಯಾಘ್ರ ನೇತ್ರ ರತ್ನವನ್ನು ಶಕ್ತಿಶಾಲಿ ರಕ್ಷಣಾ ರತ್ನವೆಂದು ಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ. ಈ ರತ್ನ ಧಾರಣೆ ಮಾಡುವುದರಿಂದ ದೃಷ್ಟಿದೋಷ ನಿವಾರಣೆ, ಶತ್ರು ಬಾಧೆ ಕಡಿಮೆ ಆಗುವುದು, ಸಾಡೇಸಾತ್ ಶನಿಯ ಅವಧಿಯಲ್ಲಿ ಮಾನಸಿಕ ಒತ್ತಡ ತಗ್ಗಿಸುವುದು, ಕೋರ್ಟ್–ಕಚೇರಿ ಸಮಸ್ಯೆಗಳಿಂದ ರಕ್ಷಣೆ, ಸಾಲಬಾಧೆ ಮತ್ತು ಆರ್ಥಿಕ ಅಡಚಣೆಗಳಿಂದ ಹೊರಬರಲು ಸಹಕಾರ, ಆತ್ಮವಿಶ್ವಾಸ ಮತ್ತು ನಿರ್ಧಾರಶಕ್ತಿ ವೃದ್ಧಿ ಈ ಎಲ್ಲವೂ ಆಗುತ್ತವೆ.

ರತ್ನಧಾರಣೆಯಿಂದ ಗ್ರಹದೋಷ ನಿವಾರಣೆ:
ಈ ವಿಚಾರಗಳಿಗೆ ಸಂಬಂಧಿಸಿದಂತೆಯೇ 2026ರಲ್ಲಿ ಮೇಷ ರಾಶಿಯವರು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ ವ್ಯಾಘ್ರನೇತ್ರ ರತ್ನದ ಧಾರಣೆಯು ಅತ್ಯಂತ ಉಪಯುಕ್ತ ಪರಿಹಾರವಾಗಿ ಕಾಣಿಸುತ್ತದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ರತ್ನಗಳ ಕುರಿತು ಹೀಗೆ ಹೇಳಲಾಗಿದೆ— “ರತ್ನಧಾರಣಮಾತ್ರೇಣ ಗ್ರಹಪೀಡಾ ವಿನಶ್ಯತಿ”. ಅಂದರೆ ಯೋಗ್ಯವಾಗಿ ಧರಿಸಲಾದ ರತ್ನವು ಗ್ರಹಪೀಡೆಯನ್ನು ಶಮನಗೊಳಿಸುತ್ತದೆ.
ಧಾರಣೆಯ ವಿಧಾನ ಹೀಗೆ:
ವ್ಯಾಘ್ರ ನೇತ್ರ ರತ್ನವನ್ನು ಉಂಗುರಕ್ಕಿಂತಲೂ ಬ್ರೆಸ್ಲೆಟ್ ರೂಪದಲ್ಲಿ ಧರಿಸುವುದು ಹೆಚ್ಚು ಫಲಪ್ರದ. ಈ ಮಾತು ಅನುಭವದಿಂದಲೂ ಸಿದ್ಧವಾಗಿದೆ. ಅದರಲ್ಲೂ ರುದ್ರ ಮಂತ್ರಗಳಿಂದ ಅಭಿಮಂತ್ರಿತ ರತ್ನಗಳಿದ್ದರೆ ಫಲ ಮತ್ತಷ್ಟು ಹೆಚ್ಚಾಗುತ್ತದೆ. ಶನಿವಾರದಂದು ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ, ಭಸ್ಮ ಸ್ಪರ್ಶಿಸಿ, ಸಂಜೆ ಸೂರ್ಯಾಸ್ತ ಸಮಯದಲ್ಲಿ ಉತ್ತರಾಭಿಮುಖವಾಗಿ ಕುಳಿತು, ಪ್ರಶಾಂತವ ಮನಸ್ಸಿನಲ್ಲಿ ಸಂಕಲ್ಪದೊಂದಿಗೆ ಬ್ರೆಸ್ಲೆಟ್ ಧರಿಸಬೇಕು
ಈ ರತ್ನ ಧರಿಸಿದ ಬಳಿಕ ಆಹಾರ ನಿಯಮಗಳಲ್ಲಿ ಯಾವುದೇ ಕಠಿಣ ನಿಬಂಧನೆ ಇಲ್ಲ. ಮಾಂಸಾಹಾರ ತಿನ್ನಬಾರದು, ಪ್ರಯಾಣ ಮಾಡಬಾರದು ಎಂಬ ನಿಯಮಗಳಿಲ್ಲ. ದಿನನಿತ್ಯದ ಜೀವನದಲ್ಲಿ ಯಾವುದೇ ಅಡಚಣೆ ಇಲ್ಲದೆ ಧರಿಸಬಹುದಾದ ಉಪರತ್ನ ಇದು.
2026 ಮೇಷ ರಾಶಿ ವರ್ಷಭವಿಷ್ಯ: ಉದ್ಯೋಗ, ಹಣ, ಆರೋಗ್ಯ – ಸಂಪೂರ್ಣ ವಿಶ್ಲೇಷಣೆ
2026ನೇ ಇಸವಿ ಮೇಷ ರಾಶಿಯವರಿಗೆ ಸವಾಲುಗಳ ವರ್ಷವಾದರೂ ಯೋಗ್ಯ ಪರಿಹಾರದಿಂದ ಅದನ್ನು ನಿಯಂತ್ರಿಸಬಹುದು. ಜಟಿಲ ವಿಧಿವಿಧಾನಗಳಿಲ್ಲದೆ, ಸರಳವಾಗಿ ಧರಿಸಬಹುದಾದ ವ್ಯಾಘ್ರ ನೇತ್ರ ಉಪರತ್ನವು ಈ ವರ್ಷದಲ್ಲಿ ರಕ್ಷಾಕವಚದಂತೆ ಕಾರ್ಯನಿರ್ವಹಿಸಬಲ್ಲದು. ಶ್ರದ್ಧೆ, ನಿಯಮ ಮತ್ತು ಶುದ್ಧ ಸಂಕಲ್ಪ ಇದ್ದರೆ ರತ್ನಧಾರಣೆ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಬಲ್ಲದು ಎಂಬುದರಲ್ಲಿ ಸಂಶಯವಿಲ್ಲ.
ಇನ್ನು ಹೀಗೆ ಶಾಸ್ತ್ರೋಕ್ತವಾಗಿ- ವಿಧಿಬದ್ಧವಾಗಿ ಅಭಿಮಂತ್ರಿಸಿದ ವ್ಯಾಘ್ರನೇತ್ರ ರತ್ನ ಅಥವಾ ಟೈಗರ್ ಐ ಬ್ರೇಸ್ ಲೆಟ್ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಇದ್ದಲ್ಲಿ ಅದಕ್ಕೆ ಮೊಬೈಲ್ ಸಂಖ್ಯೆ- 63602 11237 ಸಂಪರ್ಕಿಸಿ. ಇವರ ಬಳಿ ಎಲ್ಲ ರೀತಿಯೂ ಶಕ್ತಿತುಂಬಿ, ಅಭಿಮಂತ್ರಿಸಲಾದ ಉಪರತ್ನಗಳು ದೊರೆಯುತ್ತವೆ.
ಮೇಷ ರಾಶಿಯವರೇ, 2026ನೇ ಇಸವಿ ಕೇವಲ ಸವಾಲಲ್ಲ, ಅದು ನಿಮ್ಮ ತಾಳ್ಮೆಯ ಪರೀಕ್ಷೆ. ಈ ಪರೀಕ್ಷೆಯಲ್ಲಿ ಗೆಲ್ಲಲು ನಿಮಗೆ ಬೇಕಾಗಿರುವುದು ಒಂದು ಶಕ್ತಿಯುತ ಬೆಂಬಲ. ಅದೇ ಟೈಗರ್ ಐ. ಆತುರದ ನಿರ್ಧಾರ ಮಾಡಬೇಡಿ, ಆದರೆ ವಿಳಂಬವೂ ಮಾಡಬೇಡಿ. ಶಾಸ್ತ್ರೋಕ್ತವಾಗಿ ಶಕ್ತಿ ತುಂಬಿದ ರತ್ನ ನಿಮ್ಮ ಕೈನಲ್ಲಿದ್ದರೆ, ಶನಿಯ ಪ್ರಭಾವವೂ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲಾರದು.
ನಿರೂಪಣೆ- ಶ್ರೀನಿವಾಸ ಮಠ





