ಫೆಬ್ರವರಿ ತಿಂಗಳ ದ್ವಿತೀಯಾರ್ಧವು ಜ್ಯೋತಿಷ್ಯದಲ್ಲಿ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಲಿದೆ. ಕಾಲಪುರುಷನ ಹನ್ನೊಂದನೇ ಮನೆಯಾದ ಕುಂಭ ರಾಶಿಯಲ್ಲಿ ಸೂರ್ಯ, ಮಂಗಳ, ಬುಧ, ಶುಕ್ರ ಮತ್ತು ರಾಹು ಎಂಬ ಐದು ಪ್ರಬಲ ಗ್ರಹಗಳು ಒಂದೇ ಮನೆಯಲ್ಲಿ ಸೇರುತ್ತಿವೆ. ಕಾಲಪುರುಷನ ಹನ್ನೊಂದನೇ ಮನೆಯು ಇಚ್ಛಾ ಪೂರ್ತಿ ಮತ್ತು ಲಾಭದ ಸ್ಥಾನವಾಗಿದೆ. ಇಲ್ಲಿ ರಾಹುವಿನ ಉಪಸ್ಥಿತಿಯು ಗ್ರಹಗಳ ಫಲವನ್ನು ವೃದ್ಧಿಸಿದರೂ ಅಸ್ಥಿರತೆಯನ್ನು ತರುತ್ತದೆ. ಫೆಬ್ರವರಿ 22ರ ನಂತರ ಮಂಗಳನ ಪ್ರವೇಶವು ಈ ಯೋಗವನ್ನು ಮತ್ತಷ್ಟು ತೀವ್ರಗೊಳಿಸುತ್ತದೆ.
ಕಾಲಪುರುಷನ ಹನ್ನೊಂದನೇ ಮನೆಯಾದ ಕುಂಭ ರಾಶಿಯಲ್ಲಿ
- ಸೂರ್ಯ
- ಮಂಗಳ
- ಬುಧ
- ಶುಕ್ರ
- ರಾಹು
ಹೀಗೆ ಐದು ಪ್ರಬಲ ಗ್ರಹಗಳು ಒಂದೇ ಮನೆಯಲ್ಲಿ ಸೇರುತ್ತಿವೆ.
ಪಂಚಗ್ರಹ ಕೂಟದ ರಾಶಿ ಫಲಿತಾಂಶಗಳು
ಮೇಷ ರಾಶಿ
- ಲಾಭ ಸ್ಥಾನದಲ್ಲಿ ಪಂಚಗ್ರಹ ಯೋಗ
- ಆದಾಯದ ಮೂಲಗಳಲ್ಲಿ ವೃದ್ಧಿ
- ಹೂಡಿಕೆಗಳಿಂದ ದೊಡ್ಡ ಮೊತ್ತದ ಲಾಭ
- ಸಾಮಾಜಿಕ ಗೌರವ ಹೆಚ್ಚಳ
ವೃಷಭ ರಾಶಿ
- ಹತ್ತನೇ ಮನೆಯಲ್ಲಿ ಪಂಚಗ್ರಹ ಕೂಟ
- ರಾಜಕೀಯ ಅಥವಾ ಆಡಳಿತ ಕ್ಷೇತ್ರದಲ್ಲಿ ಅಧಿಕಾರ
- ಉದ್ಯೋಗ ಬದಲಾವಣೆಗೆ ಅತ್ಯಂತ ಅನುಕೂಲ ಸಮಯ
ಮಿಥುನ ರಾಶಿ
- ಒಂಬತ್ತನೇ ಮನೆಯಲ್ಲಿ ರಾಹು–ಸೂರ್ಯ ಸಂಯೋಗ
- ತಂದೆಯೊಂದಿಗೆ ಭಿನ್ನಾಭಿಪ್ರಾಯ ಸಾಧ್ಯತೆ
- ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯತ್ನಗಳಲ್ಲಿ ಯಶಸ್ಸು
ಕರ್ಕಾಟಕ ರಾಶಿ
- ಎಂಟನೇ ಮನೆಯಲ್ಲಿ ಪಂಚಗ್ರಹ ಕೂಟ
- ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ
- ಗುಪ್ತ ವಿದ್ಯೆಗಳತ್ತ ಆಸಕ್ತಿ
- ವಿಮೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಲಾಭ
ಸಿಂಹ ರಾಶಿ
- ಏಳನೇ ಮನೆಯಲ್ಲಿ ಗ್ರಹಗಳ ಕೂಟ
- ಸಾರ್ವಜನಿಕ ಜೀವನದಲ್ಲಿ ಸವಾಲುಗಳು
- ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ
- ಹೊಸ ಉದ್ಯಮ ಆರಂಭಕ್ಕೆ ಅಪಾಯದ ಅವಧಿ
ಕನ್ಯಾ ರಾಶಿ
- ಆರನೇ ಮನೆಯಲ್ಲಿ ಐದು ಗ್ರಹಗಳ ಸಂಯೋಗ
- ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲ
- ಸಾಲದ ಹೊರೆ ಕಡಿಮೆಯಾಗುವ ಸಾಧ್ಯತೆ
- ಕೆಲಸದ ಸ್ಥಳದಲ್ಲಿ ಪ್ರಭಾವ ಹೆಚ್ಚಳ
ತುಲಾ ರಾಶಿ
- ಐದನೇ ಮನೆಯಲ್ಲಿ ಪಂಚಗ್ರಹ ಯೋಗ
- ಪ್ರೇಮ ಸಂಬಂಧಗಳಲ್ಲಿ ಬಿರುಕು ಸಂಭವ
- ಷೇರು ಮಾರುಕಟ್ಟೆ ಹೂಡಿಕೆಗೆ ಮುನ್ನ ಎಚ್ಚರಿಕೆ ಅಗತ್ಯ
ವೃಶ್ಚಿಕ ರಾಶಿ
- ನಾಲ್ಕನೇ ಮನೆಯಲ್ಲಿ ಗ್ರಹಗಳ ಸ್ಥಿತಿ
- ಮನೆಯ ವಾತಾವರಣ ಗಂಭೀರವಾಗುವ ಸಾಧ್ಯತೆ
- ಆಸ್ತಿ ಖರೀದಿಯಲ್ಲಿ ಕಾನೂನು ತೊಡಕುಗಳ ಎಚ್ಚರಿಕೆ
ಧನು ರಾಶಿ
- ಮೂರನೇ ಮನೆಯಲ್ಲಿ ಪಂಚಗ್ರಹ ಯೋಗ
- ಸಂವಹನ ಕ್ಷೇತ್ರದಲ್ಲಿ ದೊಡ್ಡ ಅವಕಾಶಗಳು
- ಸಾಹಸ ಪ್ರವೃತ್ತಿಯಿಂದ ವಿಜಯ
ಮಕರ ರಾಶಿ
- ಎರಡನೇ ಮನೆಯಲ್ಲಿ ಗ್ರಹಗಳ ಕೂಟ
- ಆರ್ಥಿಕ ಸಮೃದ್ಧಿ ಸಾಧ್ಯ
- ಕಣ್ಣು ಅಥವಾ ಹಲ್ಲು ಸಂಬಂಧಿತ ಸಮಸ್ಯೆಗಳ ಸೂಚನೆ
- ಕುಟುಂಬದ ರಹಸ್ಯಗಳನ್ನು ಬಹಿರಂಗಪಡಿಸಬಾರದು
ಕುಂಭ ರಾಶಿ
- ನಿಮ್ಮದೇ ರಾಶಿಯಲ್ಲಿ ಬೃಹತ್ ಬದಲಾವಣೆ
- ಹೊಸ ವ್ಯಕ್ತಿತ್ವ ರೂಪುಗೊಳ್ಳುವ ಹಂತ
- ಗೊಂದಲಗಳ ನಡುವೆಯೂ ಅಂತಿಮ ಯಶಸ್ಸು
ಮೀನ ರಾಶಿ
- ಹನ್ನೆರಡನೇ ಮನೆಯಲ್ಲಿ ಪಂಚಗ್ರಹ ಕೂಟ
- ಧಾರ್ಮಿಕ ಕಾರ್ಯಗಳು ಅಥವಾ ಆಸ್ಪತ್ರೆ ವೆಚ್ಚಗಳು
- ಏಕಾಂತದ ಆಸಕ್ತಿ ಹೆಚ್ಚಳ
ಕೊನೆಮಾತು
ಈ ಪಂಚಗ್ರಹ ಕೂಟವು ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಸೂಚಿಸುತ್ತದೆ. ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಭಾರತ ಹೊಸ ಎತ್ತರಕ್ಕೆ ಏರಲಿದೆ ಎಂಬ ಸೂಚನೆಗಳಿವೆ.
ವೈಯಕ್ತಿಕವಾಗಿ ಎಲ್ಲ ರಾಶಿಯವರೂ ಈ ಅವಧಿಯಲ್ಲಿ:
- ಸೂರ್ಯ ನಮಸ್ಕಾರ
- ಹನುಮಾನ್ ಚಾಲೀಸಾ ಪಠಣ
ಮಾಡುವುದರಿಂದ ಗ್ರಹಗಳ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು.
ಲೇಖನ- ಶ್ರೀನಿವಾಸ ಮಠ





