ಲೇಖನ- ಪಂಡಿತ್ ವಿಠ್ಠಲ್ ಭಟ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜೀವನದಲ್ಲೂ ಕಾಲಚಕ್ರದ ಪ್ರಭಾವದಿಂದ ಏರಿಳಿತಗಳು ಸಹಜ. ಆದರೆ ಕೆಲ ವರ್ಷಗಳು ನಿರೀಕ್ಷೆಗಿಂತ ಉತ್ತಮ ಅವಕಾಶಗಳನ್ನು ನೀಡುತ್ತವೆ. 2026ನೇ ಇಸವಿ ಮಿಥುನ ರಾಶಿಯವರಿಗೆ ಅಂಥದೇ ಒಂದು ಅದ್ಭುತ ಸಾಧ್ಯತೆಗಳ ವರ್ಷ. ಈ ವರ್ಷ ಮಿಥುನ ರಾಶಿಯವರಿಗೆ ಶನಿಯ ಬಲ ಸಂಪೂರ್ಣವಾಗಿ ಸಹಕಾರಿ ಆಗದಿದ್ದರೂ ವರ್ಷದ ಮಧ್ಯಭಾಗದ ನಂತರ ಗುರುಬಲ ಆರಂಭವಾಗುವುದು ಶುಭಸೂಚನೆ. ಗುರು ಗ್ರಹವು ಜ್ಞಾನ, ವಿಸ್ತಾರ, ಮಾರ್ಗದರ್ಶನ ಮತ್ತು ಏಳಿಗೆಯ ಪ್ರತಿನಿಧಿ. ಅದರ ಅನುಗ್ರಹ ದೊರೆಯುವ ಕಾಲದಲ್ಲಿ ಉದ್ಯೋಗ, ವ್ಯಾಪಾರ, ಹಣಕಾಸು ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ನಿಧಾನವಾದರೂ ಸ್ಥಿರವಾದ ಪ್ರಗತಿ ಕಾಣುವ ಸಾಧ್ಯತೆ ಇದೆ. ಆದರೆ ಇನ್ನೊಂದು ಕಡೆ ರಾಹು– ಕೇತುಗಳ ಪ್ರಭಾವ ಅಚಾನಕ್ ಗೊಂದಲ, ನಿರ್ಧಾರಗಳಲ್ಲಿ ದ್ವಂದ್ವ ಹಾಗೂ ವಿಳಂಬಕ್ಕೆ ಕಾರಣ ಆಗಬಹುದು.

ಜ್ಯೋತಿಷ್ಯ ಗ್ರಂಥಗಳು ಹೇಳುವಂತೆ, “ಗುರುದೃಷ್ಟಿಃ ಯತ್ರ ಪತತಿ ತತ್ರ ವೃದ್ಧಿಃ ನ ಸಂಶಯಃ”. ಅಂದರೆ ಗುರುದೃಷ್ಟಿ ಇರುವ ಸ್ಥಳದಲ್ಲಿ ವೃದ್ಧಿ ಖಚಿತ, ಆದರೆ ಅದನ್ನು ಸ್ಥಿರಗೊಳಿಸಲು ಸೂಕ್ತ ಉಪಾಯ ಅಗತ್ಯ.
ಮಿಥುನ ರಾಶಿಯವರು 2026ರಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದಾದರೂ ಉದ್ಯೋಗದಲ್ಲಿ ಸುಲಭ, ವ್ಯಾಪಾರದಲ್ಲಿ ಅಪೇಕ್ಷಿತ ಏಳಿಗೆ, ವ್ಯವಹಾರಗಳಲ್ಲಿ ಸ್ಪಷ್ಟತೆ, ಆರೋಗ್ಯದಲ್ಲಿ ಸಮತೋಲನ ಮತ್ತು ಮಾನಸಿಕ ಶಾಂತಿ ಇವುಗಳೆಲ್ಲ ನಿರಂತರವಾಗಿ ಇರಬೇಕಾದರೆ ಸರಳವಾದ ಆದರೆ ಪರಿಣಾಮಕಾರಿ ಪರಿಹಾರ ಬೇಕಾಗುತ್ತದೆ. ಅಂಥ ಪರಿಹಾರ ಯಾವುದು?
ಉತ್ತರ: ಉಪರತ್ನ ಧಾರಣೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನೋಪಚಾರವು ಪ್ರಮುಖ ಸ್ಥಾನ ಪಡೆದಿದೆ. ವಿಶೇಷವಾಗಿ ಗುರುಬಲ ಆರಂಭ ಆಗುವ ವರ್ಷಗಳಲ್ಲಿ ಉಪರತ್ನ ಧಾರಣೆ ಮಾಡಿದರೆ ಆ ಗ್ರಹಬಲವನ್ನು ಇನ್ನಷ್ಟು ಸಕ್ರಿಯಗೊಳಿಸಬಹುದು. ಮುಖ್ಯ ರತ್ನಗಳಿಗೆ ಹೋಲಿಸಿದರೆ ಉಪರತ್ನಗಳು ಸುಲಭವಾಗಿ ಲಭ್ಯವಾಗುತ್ತವೆ ಮತ್ತು ದೀರ್ಘಕಾಲ ಧರಿಸಲು ಅನುಕೂಲಕರವಾಗುತ್ತವೆ.
2026ನೇ ಇಸವಿಯಲ್ಲಿ ಮಿಥುನ ರಾಶಿಯವರಿಗೆ ಅತ್ಯಂತ ಸೂಕ್ತವಾಗಿರುವ ಉಪರತ್ನವೆಂದರೆ— ಹರಿತಾಶ್ವ ರತ್ನ.
2026 ಮಿಥುನ ರಾಶಿ ವರ್ಷಭವಿಷ್ಯ: ಉದ್ಯೋಗ, ಹಣಕಾಸು, ಆರೋಗ್ಯ, ವಿವಾಹಕ್ಕೆ ಗ್ರಹಗೋಚಾರದ ಪ್ರಭಾವ
ಹರಿತಾಶ್ವ ರತ್ನವು ಹಸಿರು ವರ್ಣದ ಶಕ್ತಿಯನ್ನು ಹೊಂದಿರುವ ಅತ್ಯಂತ ಶಕ್ತಿಶಾಲಿ ಉಪರತ್ನವಾಗಿದೆ. ಈ ರತ್ನವು ಮುಖ್ಯವಾಗಿ ಗುರುಗ್ರಹದ ಅನುಗ್ರಹವನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ಮಿಥುನ ರಾಶಿಯವರಿಗೆ ಗುರುಬಲ ವರ್ಷಾರ್ಧದ ನಂತರ ಆರಂಭವಾಗುವುದರಿಂದ ಈ ರತ್ನದ ಧಾರಣೆಯಿಂದಾಗಿ ಗುರುವಿನ ಫಲವನ್ನು ವೇಗವಾಗಿ ಮತ್ತು ಸ್ಥಿರವಾಗಿ ಪಡೆಯಲು ಸಹಾಯಕವಾಗುತ್ತದೆ.
ಹರಿತಾಶ್ವ ರತ್ನ ಧಾರಣೆಯಿಂದ ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗುವುದು, ವ್ಯಾಪಾರ ವ್ಯವಹಾರಗಳಲ್ಲಿ ಸ್ಪಷ್ಟ ನಿರ್ಧಾರಶಕ್ತಿ, ಹಣಕಾಸು ವಿಚಾರಗಳಲ್ಲಿ ಸ್ಥಿರತೆ, ಆರೋಗ್ಯದಲ್ಲಿ ಚೇತರಿಕೆ,
ಆತಂಕ- ಗೊಂದಲ ಮತ್ತು ನಿರ್ಧಾರದಲ್ಲಿನ ದ್ವಂದ್ವವು ಕಡಿಮೆಯಾಗುವುದು. ಇವುಗಳೆಲ್ಲವೂ ಮಿಥುನ ರಾಶಿಯವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಿಗೆ ನೇರ ಪರಿಹಾರಗಳಾಗಿವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳ ಮಹತ್ವವನ್ನು ಹೀಗೆ ವಿವರಿಸಲಾಗಿದೆ— “ರತ್ನೈಃ ಸಂವರ್ಧಿತಾಃ ಗ್ರಹಾಃ ಶುಭಫಲಪ್ರದಾಯಕಾಃ”. ಹೀಗಂದರೆ ಯೋಗ್ಯ ರತ್ನ ಧಾರಣೆಯಿಂದ ಗ್ರಹಗಳು ಶುಭಫಲ ನೀಡುವಂತಾಗುತ್ತವೆ.
ಧಾರಣೆಯ ವಿಧಾನ ಹೀಗಿದೆ:
ಹರಿತಾಶ್ವವರ್ಣ ರತ್ನವನ್ನು ಬ್ರೇಸ್ ಲೆಟ್ ರೂಪದಲ್ಲಿ ಧರಿಸುವುದು ಹೆಚ್ಚು ಪರಿಣಾಮಕಾರಿ ಎಂಬುದು ಅನುಭವಸಿದ್ಧವಾಗಿದೆ. ಆದರೆ ಧಾರಣೆಗೂ ಮುನ್ನ ಶುದ್ಧೀಕರಣ ಹಾಗೂ ಮಂತ್ರಾಭಿಷೇಕ ಮುಖ್ಯ. ಬುಧವಾರದಂದು, ವಿಷ್ಣು ದೇವಾಲಯದಲ್ಲಿ, ಪುರುಷ ಸೂಕ್ತ ಮಂತ್ರಗಳಿಂದ ಅಭಿಷೇಕ ಮಾಡಿಸಿ, ಬ್ರೇಸ್ ಲೆಟ್ ಶುದ್ಧಗೊಳಿಸಬೇಕು. ಉತ್ತರಾಭಿಮುಖವಾಗಿ ಕುಳಿತು, ಮನಸ್ಸಿನಲ್ಲಿ ಶುಭ ಸಂಕಲ್ಪ ಮಾಡಿಕೊಂಡು ಧರಿಸಬೇಕು.
ಈ ಉಪರತ್ನವನ್ನು ಧರಿಸಿದ ಬಳಿಕ ಯಾವುದೇ ಕಠಿಣ ನಿಯಮಗಳಿಲ್ಲ. ಮಾಂಸಾಹಾರ ಸೇವಿಸಬಾರದು ಎಂಬ ನಿರ್ಬಂಧವಿಲ್ಲ, ಹಾಗೆಯೇ ದೈನಂದಿನ ಪ್ರಯಾಣ, ಕೆಲಸ ಅಥವಾ ಜೀವನಶೈಲಿಯಲ್ಲಿ ಯಾವುದೇ ಅಡ್ಡಿಯೂ ಇರುವುದಿಲ್ಲ. ಹೀಗಾಗಿ ಸಾಮಾನ್ಯ ಜೀವನ ನಡೆಸುತ್ತಲೇ ರತ್ನದ ಫಲವನ್ನು ಅನುಭವಿಸಬಹುದು.
ಕೊನೆಮಾತು:
2026ನೇ ಇಸವಿ ಮಿಥುನ ರಾಶಿಯವರಿಗೆ ಅವಕಾಶಗಳ ವರ್ಷ. ಶನಿಬಲದ ಕೊರತೆಯಿದ್ದರೂ ವರ್ಷದ ಅರ್ಧದ ನಂತರ ದೊರೆಯುವ ಗುರುಬಲ ಜೀವನದಲ್ಲಿ ಹೊಸ ದಿಕ್ಕು ತೋರಿಸಬಲ್ಲದು. ಆದರೆ ರಾಹು–ಕೇತುಗಳ ಅಸ್ಥಿರ ಪ್ರಭಾವದಿಂದ ಉಂಟಾಗುವ ಗೊಂದಲವನ್ನು ನಿಯಂತ್ರಿಸಲು ಸೂಕ್ತ ಉಪಾಯ ಅಗತ್ಯ. ಅಂಥ ಸಂದರ್ಭದಲ್ಲಿ ಹರಿತಾಶ್ವವರ್ಣ ಉಪರತ್ನ ಧಾರಣೆ ಒಂದು ಸರಳ, ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಶ್ರದ್ಧೆ, ನಿಯಮ ಮತ್ತು ಸಕಾರಾತ್ಮಕ ಮನೋಭಾವ ಇದ್ದರೆ ಈ ರತ್ನಧಾರಣೆ ಜೀವನದಲ್ಲಿ ನಿರೀಕ್ಷಿತ ಶುಭಪರಿವರ್ತನೆ ತರಬಲ್ಲದು. ಇಂಥ ಅಭಿಮಂತ್ರಿತ ಉಪರತ್ನ ಬ್ರೆಸ್ ಲೇಟ್‌ಗಳಿಗಾಗಿ ಸಂಪರ್ಕಿಸಿ: ಮೊಬೈಲ್ ಫೋನ್ ಸಂಖ್ಯೆ 63602 11237.
ನಿರೂಪಣೆ: ಶ್ರೀನಿವಾಸ ಮಠ





