Jupiter – Venus Conjunction: ಗುರು- ಶುಕ್ರ ಸಂಯೋಗದಿಂದ ಮೇಷದಿಂದ ಮೀನದ ತನಕ ಯಾರಿಗೆ ಶುಭ- ಯಾರಿಗೆ ಅಶುಭ?

ಫೆಬ್ರವರಿ 15ನೇ ತಾರೀಕು ಮೀನ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 12ರ ತನಕ ಅದೇ ರಾಶಿಯಲ್ಲಿ ಶುಕ್ರ ಸಂಚಾರವಿದೆ. ಗುರು- ಶುಕ್ರರು ಮೀನ ರಾಶಿಯಲ್ಲಿ ಇರುವುದರಿಂದ ಒಂದು ಗ್ರಹಕ್ಕೆ ಸ್ವಕ್ಷೇತ್ರವಾದರೆ, ಮತ್ತೊಂದಕ್ಕೆ ಉಚ್ಚ ಕ್ಷೇತ್ರ ಆಗುತ್ತದೆ. ಈ ಅವಧಿಯಲ್ಲಿ ಮಿಥುನ, ಕನ್ಯಾ, ಧನು, ಮೀನ ಲಗ್ನದಲ್ಲಿ ಜನಿಸುವಂಥ ಮಕ್ಕಳಿಗೆ ಗುರುವಿನಿಂದಾಗಿ ಹಂಸ ಯೋಗ, ಶುಕ್ರನಿಂದ ಮಾಲವ್ಯ ಯೋಗ ಆಗುತ್ತದೆ (ಪಂಚ ಮಹಾಪುರುಷ ಯೋಗ). ಈ ಗುರು- ಶುಕ್ರ ಯುತಿ (ಒಟ್ಟಿಗಿರುವುದು) ಯಾವ ರೀತಿಯ ಫಲವನ್ನು ನೀಡುತ್ತದೆ ಎಂಬ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹನ್ನೆರಡೂ ರಾಶಿಗಳಿಗೆ ಭವಿಷ್ಯ ನುಡಿದಿದ್ದಾರೆ.