ಅದೃಷ್ಟ ರತ್ನ ಧಾರಣೆ ಎಂಬುದು ಬಹಳ ಹಿಂದಿನಿಂದಲೂ ನಡೆದುಬಂದಿದೆ. ಶಾಸ್ತ್ರೋಕ್ತ ರೀತಿಯಲ್ಲಿ ಧಾರಣೆ ಮಾಡಿ, ಒಬ್ಬ ವ್ಯಕ್ತಿಯ ಜಾತಕಕ್ಕೂ ಅದು ಸರಿಯಾಗಿ ಹೊಂದಾಣಿಕೆ ಆದಲ್ಲಿ ಶುಭ ಫಲಗಳು ಅನುಭವಕ್ಕೆ ಬರುತ್ತವೆ. ಈ ವಿಚಾರದಲ್ಲಿ ಕೆಲವರು ಏನು ಸಮಸ್ಯೆ ಮಾಡಿಕೊಳ್ಳುತ್ತಾರೆ ಅಂದರೆ, ವಿರುದ್ಧ ಗುಣಧರ್ಮದ ರತ್ನಗಳನ್ನು ಧಾರಣೆ ಮಾಡಿಬಿಡುತ್ತಾರೆ. ತಮಗೆ ರತ್ನ ಧಾರಣೆ ಯಾವ ಅದೃಷ್ಟವನ್ನು ತರಲಿಲ್ಲ ಎಂದು ಆಕ್ಷೇಪಿಸುತ್ತಾರೆ. ರತ್ನಗಳು ಗ್ರಹಗಳನ್ನು ಪ್ರತಿನಿಧಿಸುತ್ತವೆ. ಒಂದು ವೇಳೆ ಎರಡೋ ಮೂರೋ ರತ್ನ ಧಾರಣೆ ಮಾಡಿದ್ದೀರಿ ಎಂದಾದಲ್ಲಿ ಪರಸ್ಪರ ಆ ಗ್ರಹಗಳ ಮಧ್ಯೆ ಸ್ನೇಹ ಇದೆಯೋ ವೈರತ್ವ ಇದೆಯೋ ಎಂಬ ಬಗ್ಗೆ ಪರಿಶೀಲನೆ ಮಾಡಿಕೊಳ್ಳಲೇ ಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರತ್ನವು ಒಂದು ನಿರ್ದಿಷ್ಟ ಗ್ರಹದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಗ್ರಹಗಳ ನಡುವೆ ಹೇಗೆ ಮಿತ್ರತ್ವ ಮತ್ತು ಶತ್ರುತ್ವ ಇರುತ್ತದೆಯೋ ಹಾಗೆಯೇ ಅವುಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸುವಾಗಲೂ ಎಚ್ಚರ ವಹಿಸಬೇಕು. ವಿರುದ್ಧ ಗುಣಲಕ್ಷಣವುಳ್ಳ ರತ್ನಗಳನ್ನು ಒಟ್ಟಿಗೆ ಧರಿಸುವುದು ನಕಾರಾತ್ಮಕ ಪರಿಣಾಮಗಳಿಗೆ ಕಾರಣ ಆಗಬಹುದು.
ವಿವಿಧ ರತ್ನಗಳು ಮತ್ತು ಅವುಗಳ ಜೊತೆಗೆ ಧರಿಸಬಾರದ ಇತರ ಕಲ್ಲುಗಳ ವಿವರ ಇಲ್ಲಿದೆ:
1. ನೀಲಮಣಿ (Blue Sapphire)
ನೀಲಮಣಿಯು ಶನಿ ಗ್ರಹದ ರತ್ನವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯ, ಚಂದ್ರ ಮತ್ತು ಮಂಗಳ ಗ್ರಹಗಳು ಶನಿಗೆ ಶತ್ರುಗಳು.
- ಧರಿಸಬಾರದ ರತ್ನಗಳು: ಮಾಣಿಕ್ಯ (Ruby), ಮುತ್ತು (Pearl) ಮತ್ತು ಹವಳ (Red Coral)ವನ್ನು ನೀಲದ ಜೊತೆಗೆ ಧರಿಸಬಾರದು.
2. ಮಾಣಿಕ್ಯ (Ruby)
ಮಾಣಿಕ್ಯವು ಸೂರ್ಯ ಗ್ರಹಕ್ಕೆ ಸೇರಿದ್ದು. ಶುಕ್ರ ಮತ್ತು ಶನಿ ಗ್ರಹಗಳು ಸೂರ್ಯನಿಗೆ ಶತ್ರುಗಳೆಂದು ಪರಿಗಣಿಸಲಾಗಿದೆ.
- ಧರಿಸಬಾರದ ರತ್ನಗಳು: ನೀಲಮಣಿ (Blue Sapphire) ಮತ್ತು ವಜ್ರ (Diamond)ವನ್ನು ಮಾಣಿಕ್ಯದ ಜೊತೆಗೆ ಧರಿಸಬಾರದು.
3. ಪಚ್ಚೆ (Emerald)
ಪಚ್ಚೆಯು ಬುಧ ಗ್ರಹದ ರತ್ನವಾಗಿದೆ. ಜ್ಯೋತಿಷ್ಯದ ಪ್ರಕಾರ ಚಂದ್ರ ಮತ್ತು ಮಂಗಳ ಗ್ರಹಗಳು ಬುಧನಿಗೆ ಶತ್ರುಗಳು.
- ಧರಿಸಬಾರದ ರತ್ನಗಳು: ಮುತ್ತು (Pearl) ಮತ್ತು ಹವಳ (Red Coral)ವನ್ನು ಪಚ್ಚೆಯ ಜೊತೆಗೆ ಧರಿಸಬಾರದು.
4. ಮುತ್ತು (Pearl)
ಮುತ್ತು ಚಂದ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಚಂದ್ರನಿಗೆ ರಾಹು ಮತ್ತು ಕೇತುಗಳು ಶತ್ರು ಗ್ರಹಗಳಾಗಿವೆ.
- ಧರಿಸಬಾರದ ರತ್ನಗಳು: ಗೋಮೇಧಿಕ (Hessonite) ಮತ್ತು ವೈಡೂರ್ಯ (Cat’s Eye)ವನ್ನು ಮುತ್ತಿನ ಜೊತೆಗೆ ಧರಿಸಬಾರದು.
5. ಹವಳ (Red Coral)
ಹವಳವು ಮಂಗಳ ಗ್ರಹದ ರತ್ನ. ಶುಕ್ರ, ಬುಧ, ಶನಿ, ರಾಹು ಮತ್ತು ಕೇತುಗಳು ಮಂಗಳನಿಗೆ ಶತ್ರು ಗ್ರಹಗಳು.
- ಧರಿಸಬಾರದ ರತ್ನಗಳು: ವಜ್ರ (Diamond), ಪಚ್ಚೆ (Emerald), ನೀಲಮಣಿ (Blue Sapphire), ಗೋಮೇಧಿಕ (Hessonite) ಮತ್ತು ವೈಡೂರ್ಯ (Cat’s Eye) ಇವು ಯಾವುದನ್ನೂ ಹವಳದ ಜೊತೆಗೆ ಧರಿಸಬಾರದು.
6. ಪುಷ್ಯರಾಗ (Yellow Sapphire)
ಪುಷ್ಯರಾಗವು ಗುರು ಗ್ರಹದ ರತ್ನವಾಗಿದೆ. ಶುಕ್ರ, ಬುಧ ಮತ್ತು ಶನಿ ಗ್ರಹಗಳು ಗುರುವಿಗೆ ಶತ್ರುಗಳಾಗಿವೆ.
- ಧರಿಸಬಾರದ ರತ್ನಗಳು: ವಜ್ರ (Diamond), ಪಚ್ಚೆ (Emerald) ಮತ್ತು ನೀಲಮಣಿ (Blue Sapphire) ಇವು ಯಾವುದನ್ನೂ ಪುಷ್ಯರಾಗದ ಜೊತೆಗೆ ಧರಿಸಬಾರದು.
7. ವಜ್ರ (Diamond)
ವಜ್ರವು ಶುಕ್ರ ಗ್ರಹಕ್ಕೆ ಸೇರಿದ್ದು. ಗುರು, ಸೂರ್ಯ ಮತ್ತು ಚಂದ್ರ ಗ್ರಹಗಳು ಶುಕ್ರನಿಗೆ ಶತ್ರುಗಳೆಂದು ಪರಿಗಣಿಸಲಾಗಿದೆ.
- ಧರಿಸಬಾರದ ರತ್ನಗಳು: ಪುಷ್ಯರಾಗ (Yellow Sapphire), ಮಾಣಿಕ್ಯ (Ruby) ಮತ್ತು ಮುತ್ತು (Pearl) ಇವುಗಳನ್ನು ವಜ್ರದ ಜೊತೆಗೆ ಧಾರಣೆ ಮಾಡಬಾರದು.
8. ಗೋಮೇಧಿಕ (Hessonite/Garnet)
ಇದು ರಾಹು ಗ್ರಹದ ರತ್ನ. ಸೂರ್ಯ ಮತ್ತು ಚಂದ್ರರು ರಾಹುವಿಗೆ ಶತ್ರುಗಳು.
- ಧರಿಸಬಾರದ ರತ್ನಗಳು: ಮಾಣಿಕ್ಯ (Ruby) ಮತ್ತು ಮುತ್ತು (Pearl) ಇವೆರಡನ್ನೂ ಗೋಮೇಧಿಕದ ಜೊತೆ ಧರಿಸಬಾರದು.
9. ವೈಡೂರ್ಯ (Cat’s Eye)
ಇದು ಕೇತು ಗ್ರಹದ ರತ್ನವಾಗಿದೆ. ಸೂರ್ಯ ಮತ್ತು ಚಂದ್ರರು ಕೇತುವಿಗೆ ಶತ್ರುಗಳು.
- ಧರಿಸಬಾರದ ರತ್ನಗಳು: ಮುತ್ತು (Pearl) ಮತ್ತು ಮಾಣಿಕ್ಯ (Ruby)ವನ್ನು ವೈಡೂರ್ಯದ ಜೊತೆಗೆ ಧಾರಣೆ ಮಾಡಬಾರದು.
ನಿಮ್ಮ ಅದೃಷ್ಟ ರತ್ನ ಯಾವುದು? ರಾಶಿ ಮತ್ತು ಲಗ್ನಕ್ಕೆ ಅನುಗುಣವಾಗಿ ರತ್ನ ಧರಿಸುವ ಶಾಸ್ತ್ರೋಕ್ತ ಕ್ರಮಗಳು
ಸೂಚನೆ: ಯಾವುದೇ ರತ್ನವನ್ನು ಧರಿಸುವ ಮೊದಲು ನಿಮ್ಮ ಜನ್ಮ ಕುಂಡಲಿಯನ್ನು ರತ್ನಧಾರಣೆ ಬಗ್ಗೆ ಮಾಹಿತಿ ಇರುವ ಪರಿಣತ ಜ್ಯೋತಿಷಿಗಳಿಂದ ವಿಶ್ಲೇಷಿಸಿಕೊಳ್ಳುವುದು ಉತ್ತಮ. ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿ ರತ್ನಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ನೀವು ಶುದ್ಧ ಮತ್ತು ಪ್ರಮಾಣೀಕೃತ (Certified) ಅದೃಷ್ಟ ರತ್ನಗಳನ್ನು ಖರೀದಿಸಲು ಬಯಸಿದಲ್ಲಿ ಇಲ್ಲಿಗೆ ಭೇಟಿ ನೀಡಬಹುದು:
- ಮಳಿಗೆ: ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (JS Gems & Jewellery)
- ವಿಳಾಸ: ಪದ್ಮನಾಭನಗರ, ಬೆಂಗಳೂರು.
- ಸಂಪರ್ಕ ಸಂಖ್ಯೆ: 72047 36365
- ವೆಬ್‌ಸೈಟ್: jsgems.in
ಲೇಖನ: ಶ್ರೀನಿವಾಸ ಮಠ





