“ಎಲ್ಲ ಜಾಣ ತುಸು ಕೋಣ” ಅನ್ನೋದು ರೂಢಿಯಲ್ಲಿರುವ ಮಾತು. ಜ್ಯೋತಿಷ್ಯ ರೀತಿಯಾಗಿಯೂ ಈ ಐದು ರಾಶಿಯವರಿಗೆ ಸಿಟ್ಟಿನ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಹೊಂದಾಣಿಕೆ ಆಗುತ್ತದೆ. ಒಬ್ಬ ವ್ಯಕ್ತಿಯಲ್ಲಿ ಶ್ರಮ, ಬುದ್ಧಿ, ಧೈರ್ಯ ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯವಾದದ್ದು ಸಂಯಮ. ಆದರೆ ಕೆಲವು ರಾಶಿಯವರಿಗೆ ಈ ಸಂಯಮವೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅದರಲ್ಲೂ ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಲ್ಲಿ ಸಿಟ್ಟು ಅತಿಯಾಗಿ ಬಂದಾಗ ತಾವು ಶ್ರಮಪಟ್ಟು ಕಟ್ಟಿಕೊಂಡಿದ್ದ ಜೀವನವನ್ನು ಸಹ ಲೆಕ್ಕಿಸದೆ ಅವಕಾಶಗಳನ್ನು ನೆಲಕ್ಕೆ ಕೆಡವಿದ ತುಪ್ಪದಂತೆ ಮಾಡಿಕೊಂಡು ಬಿಡುತ್ತಾರೆ.
ಇದಕ್ಕೆ ಕಾರಣ ಏನು?
- ಇದು ಕೇವಲ ಸ್ವಭಾವವೋ?
- ಅಥವಾ ಗ್ರಹಗಳ ಪ್ರಭಾವವೋ?
ಜ್ಯೋತಿಷ್ಯ ಶಾಸ್ತ್ರ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುತ್ತದೆ.
1. ಮೇಷ ರಾಶಿ – ಕ್ಷಣಿಕ ಸಿಟ್ಟು, ಶಾಶ್ವತ ನಷ್ಟ
ಮೇಷ ರಾಶಿಯ ಅಧಿಪತಿ ಕುಜ (ಮಂಗಳ). ಕುಜ ಅಗ್ನಿ ತತ್ವದ ಗ್ರಹ. ಇದರಿಂದ ಮೇಷ ರಾಶಿಯವರಿಗೆ ಅಪಾರ ಶಕ್ತಿ, ಧೈರ್ಯ, ನಾಯಕತ್ವ ಗುಣ ಇರುತ್ತದೆ. ಆದರೆ ಅದೇ ಶಕ್ತಿಯು ನಿಯಂತ್ರಣ ತಪ್ಪಿದಾಗ ಸಿಟ್ಟು, ಆವೇಶ, ಹಠದ ರೂಪದಲ್ಲಿ ಹೊರಬರುತ್ತದೆ. ಮೇಷ ರಾಶಿಯವರು ಮಾತನಾಡುವ ಮೊದಲು ಯೋಚಿಸುವುದಿಲ್ಲ. ಕ್ಷಣಿಕ ಕೋಪದಲ್ಲಿ ಹಿರಿಯರನ್ನು ಅವಮಾನಿಸುವುದು, ಉದ್ಯೋಗದಲ್ಲಿ ಅಧಿಕಾರಿಗಳ ವಿರುದ್ಧ ತಿರುಗಿಬೀಳುವುದು ಸಾಮಾನ್ಯ. ಅದರ ಪರಿಣಾಮವಾಗಿ ಇವರಿಗೆ ಸಿಗಬೇಕಾದ ಪದೋನ್ನತಿ, ಗೌರವ, ಸಹಾಯ ಎಲ್ಲವೂ ದೂರವಾಗುತ್ತದೆ.
2. ಕರ್ಕಾಟಕ ರಾಶಿ – ಮನಸ್ಸಿನ ಗಾಯ ಸಿಟ್ಟಾಗಿ ಹೊರಬರುವುದು
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರ ಮನಸ್ಸಿನ ಕಾರಕ. ಈ ರಾಶಿಯವರು ಅತೀ ಸಂವೇದನಾಶೀಲರು. ತುಂಬ ಸೂಕ್ಷ್ಮ- ನಯ- ನಾಜೂಕು ಜಾಸ್ತಿ ಎಂಬ ಮಾತು ಇವರಿಗೆ ಸರಿಯಾಗಿ ಒಪ್ಪುತ್ತದೆ. ಯಾರಾದರೂ ತಮ್ಮ ಭಾವನೆಗಳಿಗೆ ಧಕ್ಕೆ ತಂದರೆ, ಅದನ್ನು ತಕ್ಷಣ ಹೇಳುವುದಿಲ್ಲ; ಒಳಗೇ ಇಟ್ಟುಕೊಳ್ಳುತ್ತಾರೆ. ಈ ಒಳಗಿಟ್ಟ ನೋವು ಒಂದು ಹಂತದಲ್ಲಿ ತೀವ್ರ ಸಿಟ್ಟಾಗಿ ಸ್ಫೋಟಗೊಳ್ಳುತ್ತದೆ. ಆಗ ಸಂಬಂಧಗಳಲ್ಲಿ ಬಿರುಕು, ದಾಂಪತ್ಯ ಕಲಹ, ಕುಟುಂಬದ ಅಶಾಂತಿ ಉಂಟಾಗುತ್ತದೆ. ಕರ್ಕಾಟಕ ರಾಶಿಯವರಲ್ಲಿ “ನನ್ನನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ” ಎಂಬ ಭಾವನೆ ಮೂಡಿ, ತಮಗೆ ಸಿಗಬೇಕಿದ್ದ ಸಹಕಾರವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ.
3. ಸಿಂಹ ರಾಶಿ – ಅಹಂಕಾರದಿಂದ ಹುಟ್ಟುವ ಕೋಪ
ಸಿಂಹ ರಾಶಿಯ ಅಧಿಪತಿ ರವಿ (ಸೂರ್ಯ). ಸೂರ್ಯ ಆತ್ಮಗೌರವ, ಅಧಿಕಾರ, ಅಹಂಕಾರದ ಸಂಕೇತ. ಸಿಂಹ ರಾಶಿಯವರು ಸ್ವಾಭಾವಿಕವಾಗಿಯೇ ನಾಯಕರು. ಆದರೆ ಯಾರಾದರೂ ತಮ್ಮ ಮಾತನ್ನು ಪ್ರಶ್ನಿಸಿದರೆ ಅಥವಾ ಗೌರವ ಕಡಿಮೆ ಮಾಡಿದರೆ, ಸಿಟ್ಟಿನ ಜ್ವಾಲೆ ಬುಗಿಲೆದ್ದುಬಿಡುತ್ತದೆ. “ನಾನು ಹೇಳಿದ್ದೇ ಸರಿ” ಎಂಬ ಮನೋಭಾವದಿಂದ ಸ್ನೇಹ, ಉದ್ಯೋಗ, ವ್ಯವಹಾರ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ತುಂಬ ಸಲ ಸಿಂಹ ರಾಶಿಯವರಿಗೆ ಸಿಗಬೇಕಿದ್ದ ದೊಡ್ಡ ಅವಕಾಶಗಳು ಅಹಂಕಾರದ ಕಾರಣದಿಂದ ಕೈ ತಪ್ಪುತ್ತವೆ.
ನಿಮ್ಮ ಜನನ ಸಂಖ್ಯೆ ನಿಮ್ಮ ಬಗ್ಗೆ ಏನು ಹೇಳುತ್ತದೆ? 1 ರಿಂದ 9 ಸಂಖ್ಯೆಗಳ ಅದೃಷ್ಟದ ರಹಸ್ಯ ಇಲ್ಲಿದೆ!
4. ವೃಶ್ಚಿಕ ರಾಶಿ – ಮೌನದ ಸಿಟ್ಟು, ಭಯಾನಕ ಪರಿಣಾಮ
ವೃಶ್ಚಿಕ ರಾಶಿಯ ಅಧಿಪತಿ ಕೂಡ ಕುಜ. ಆದರೆ ಇಲ್ಲಿ ಅದು ಗೂಢ, ಆಳವಾದ ಸ್ವರೂಪದಲ್ಲಿ ಇರುತ್ತದೆ. ವೃಶ್ಚಿಕ ರಾಶಿಯವರು ಸಿಟ್ಟು ತೋರಿಸುವುದಿಲ್ಲ; ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ನೋವು, ಅವಮಾನವನ್ನು ಮರೆತಂತೆ ನಟಿಸುತ್ತಾರೆ. ಆದರೆ ಸಮಯ ಬಂದಾಗ ಅದನ್ನು ತೀಕ್ಷ್ಣವಾಗಿ ಹೊರಹಾಕುತ್ತಾರೆ. ಈ ಸ್ವಭಾವದಿಂದ ವಿಶ್ವಾಸ ಕಳೆದುಹೋಗುತ್ತದೆ. ಸ್ನೇಹ, ವ್ಯವಹಾರ, ದಾಂಪತ್ಯದಲ್ಲಿ “ಹಠಾತ್ ಸಂಬಂಧ ಮುರಿದುಹೋಗುವಂಥ” ಬೆಳವಣಿಗೆ ನಡೆಯುತ್ತದೆ. ಪರಿಣಾಮವಾಗಿ ಒಳ್ಳೆಯ ಅವಕಾಶಗಳೂ ಶತ್ರುತ್ವದ ಭಾವನೆಕ್ಕೆ ಬಲಿಯಾಗುತ್ತವೆ.
5. ಮೀನ ರಾಶಿ – ಅತೀ ಭಾವನೆಗಳಿಂದ ಹುಟ್ಟುವ ಸಿಟ್ಟು
ಮೀನ ರಾಶಿಯ ಅಧಿಪತಿ ಗುರು. ಮೀನ ರಾಶಿಯವರು ಕನಸುಗಾರರು, ದಯಾಳುಗಳು. ಆದರೆ ಯಾರಾದರೂ ತಮ್ಮ ನಂಬಿಕೆಯನ್ನು ಮುರಿದರೆ ಆಘಾತ ತೀವ್ರವಾಗುತ್ತದೆ. ಆ ಆಘಾತವೇ ಸಿಟ್ಟಾಗಿ ಹೊರಬರುತ್ತದೆ. ಈ ಸಿಟ್ಟು ಕೆಲವೊಮ್ಮೆ ತಮಗೆ ತಾವೇ ಹಾನಿ ಮಾಡಿಕೊಳ್ಳುವ ಮಟ್ಟಕ್ಕೂ ಹೋಗುತ್ತದೆ – ತಪ್ಪು ನಿರ್ಧಾರ, ಸಂಬಂಧ ಮುರಿದುಕೊಳ್ಳುವುದು, ಅವಕಾಶ ಬಿಟ್ಟುಕೊಡುವುದು ಅಲ್ಲಿಯ ತನಕ ಹೋಗುತ್ತದೆ. ಮೀನ ರಾಶಿಯವರು ಸಿಟ್ಟಿನಿಂದ ತಮಗೆ ಸಿಗಬೇಕಿದ್ದ ದೈವಿಕ ಕೃಪೆಯನ್ನೇ ಬೇಡ ಎನ್ನುವ ಮಟ್ಟಕ್ಕೂ ಹೋಗಿಬಿಡುತ್ತಾರೆ.
ಪರಿಹಾರ ಏನು?
ಜ್ಯೋತಿಷ್ಯ ಹೇಳುವುದೇನಂದರೆ – ಸಿಟ್ಟು ಬರುವುದೇ ತಪ್ಪಲ್ಲ, ಅದನ್ನು ನಿಯಂತ್ರಿಸದಿರುವುದೇ ಅಪಾಯ.
- ಈ ಐದು ರಾಶಿಯವರು ಮೌನ, ಧ್ಯಾನ, ಜಪ, ಗುರುಸ್ಮರಣೆ ಮಾಡುವುದರಿಂದ ಮನಸ್ಸಿನ ಸಮತೋಲನ ಪಡೆಯಬಹುದು.
- ಸಿಟ್ಟು ಬಂದ ಕ್ಷಣದಲ್ಲಿ ತಕ್ಷಣ ಪ್ರತಿಕ್ರಿಯಿಸದೇ, ಒಂದು ಕ್ಷಣ ಸುಮ್ಮನಿರುವುದು ಜೀವನದ ದಿಕ್ಕನ್ನೇ ಬದಲಾಯಿಸಬಲ್ಲದು.
- ಜೀವನದಲ್ಲಿ ಅನೇಕ ಬಾರಿ ಶತ್ರು ಹೊರಗೆ ಇಲ್ಲ, ನಮ್ಮೊಳಗೇ ಇರುತ್ತಾನೆ. ಆ ಶತ್ರುವಿನ ಹೆಸರು – ಅತಿಯಾದ ಸಿಟ್ಟು.
ಅದನ್ನು ಜಯಿಸಿದ ದಿನದಿಂದಲೇ ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ಇನ್ನೂ ದೊಡ್ಡದಾಗಿ ತೆರೆದುಕೊಳ್ಳುತ್ತವೆ.
ವಿಶೇಷ ಸೂಚನೆ: ಸ್ಫಟಿಕ ಮಣಿಯ ಹಾರವನ್ನು ಧರಿಸುವುದರಿಂದ ಕೋಪವನ್ನು ನಿಯಂತ್ರಿಸುವುದಕ್ಕೆ ಸಹಕಾರಿ ಆಗುತ್ತದೆ.
ನೀವು ಶುದ್ಧ ಮತ್ತು ಪ್ರಮಾಣೀಕೃತ (Certified) ಸ್ಫಟಿಕ ಮಣಿಯ ಹಾರವನ್ನು ಖರೀದಿಸಲು ಬಯಸಿದಲ್ಲಿ ಇಲ್ಲಿಗೆ ಭೇಟಿ ನೀಡಬಹುದು:
- ಮಳಿಗೆ: ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (JS Gems & Jewellery)
- ವಿಳಾಸ: ಪದ್ಮನಾಭನಗರ, ಬೆಂಗಳೂರು.
- ಸಂಪರ್ಕ ಸಂಖ್ಯೆ: 72047 36365
- ವೆಬ್‌ಸೈಟ್: jsgems.in
ಲೇಖನ: ಶ್ರೀನಿವಾಸ ಮಠ





