ಲೇಖನ: ಪಂಡಿತ್ ವಿಠ್ಠಲ್ ಭಟ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ರಾಶಿಗೂ ಕಾಲಾನುಸಾರವಾಗಿ ವಿಭಿನ್ನ ಫಲಗಳು ದೊರೆಯುತ್ತವೆ. ಕೆಲವು ವರ್ಷಗಳು ಸವಾಲಿನಂತಿದ್ದರೆ, ಇನ್ನಷ್ಟು ವರ್ಷಗಳು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತವೆ. 2026ನೇ ಇಸವಿ ವೃಷಭ ರಾಶಿಯವರಿಗೆ ಅಂಥದೇ ಒಂದು ಅದ್ಭುತ ಮತ್ತು ಭರವಸೆಯ ವರ್ಷ. ಈ ವರ್ಷದಲ್ಲಿ ವೃಷಭ ರಾಶಿಯವರಿಗೆ ಶನಿಬಲ ಹಾಗೂ ಗುರುಬಲ ಎರಡೂ ಸಹಾಯಕವಾಗಿರುವುದು ಪ್ರಮುಖ ವಿಶೇಷ. ಶನಿಯ ಶಿಸ್ತು ಮತ್ತು ಸ್ಥೈರ್ಯ, ಗುರುವಿನ ಕೃಪೆಯಿಂದ ದೊರೆಯುವ ವೃದ್ಧಿ ಹಾಗೂ ಮಾರ್ಗದರ್ಶನ—ಈ ಎರಡರ ಸಂಯೋಜನೆಯಿಂದ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಆದರೆ ಮತ್ತೊಂದು ಕಡೆ, ರಾಹು–ಕೇತುಗಳ ಪ್ರಭಾವ ಹಾಗೂ ವರ್ಷದ ಕೆಲವು ಅವಧಿಯಲ್ಲಿ ಗುರುಬಲದ ಇರುವುದಿಲ್ಲ, ಆ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಅಸ್ಥಿರತೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ದೊರೆಯುವ ಶುಭಫಲಗಳು ಸಂಪೂರ್ಣವಾಗಿ ದಕ್ಕಬೇಕು ಎಂದಾದಲ್ಲಿ ಸೂಕ್ತ ಪರಿಹಾರ ಮಾಡಿಕೊಳ್ಳುವುದು ಅಗತ್ಯ.
ಜ್ಯೋತಿಷ್ಯ ಗ್ರಂಥಗಳು ಹೇಳುವಂತೆ, “ಶುಭಗ್ರಹಾಣಾಂ ಬಲಂ ಯತ್ರ ತತ್ರ ವೃದ್ಧಿಃ ನಿಶ್ಚಯಾ”. ಹೀಗೆ ಅಂದರೆ ಶುಭಗ್ರಹಗಳ ಬಲವಿರುವ ಸ್ಥಳದಲ್ಲಿ ಪ್ರಗತಿ ಖಚಿತ, ಆದರೆ ಅವು ಸ್ಥಿರವಾಗಿರಲು ಯೋಗ್ಯ ಉಪಾಯಗಳನ್ನು ಅನುಸರಿಸುವುದು ಅಗತ್ಯ.

ಸಂಪೂರ್ಣ ಫಲ ಪ್ತಾಪ್ತಿಯಾಗಲು ಹೀಗೆ ಮಾಡಿ:
ವೃಷಭ ರಾಶಿಯವರಿಗೆ 2026ನೇ ಇಸವಿಯಲ್ಲಿ ಉದ್ಯೋಗದಲ್ಲಿ ಯಶಸ್ಸು, ವ್ಯಾಪಾರದಲ್ಲಿ ನಿರೀಕ್ಷಿತ ಏಳಿಗೆ, ಹಣಕಾಸು ವ್ಯವಹಾರಗಳಲ್ಲಿ ಸ್ಥಿರತೆ, ಆರೋಗ್ಯದಲ್ಲಿ ಸುಧಾರಣೆ ಮತ್ತು ಮಾನಸಿಕ ಶಾಂತಿ- ಈ ಎಲ್ಲವೂ ದೊರೆಯುತ್ತವೆ. ಆದರೆ ಈ ಎಲ್ಲ ಶುಭ ವಿಚಾರಗಳು ಸಂಪೂರ್ಣವಾಗಿ ಫಲಿಸಬೇಕಾದರೆ ಸರಳ, ದೀರ್ಘಕಾಲಿಕ ಹಾಗೂ ಪರಿಣಾಮಕಾರಿ ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಏನು ಆ ಪರಿಹಾರ ಎಂಬ ಪ್ರಶ್ನೆ ಮೂಡಿದಲ್ಲಿ ಅದಕ್ಕೆ ಉತ್ತರ: ಉಪರತ್ನಗಳ ಸಂಯೋಜಿತ ಧಾರಣೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಉಪರತ್ನಗಳು ಪ್ರಮುಖ ಪಾತ್ರ ವಹಿಸುತ್ತವೆ. ಮುಖ್ಯ ರತ್ನಗಳಿಗೆ ಪರ್ಯಾಯವಾಗಿ, ಉಪರತ್ನಗಳು ಕಡಿಮೆ ವೆಚ್ಚದಲ್ಲಿ, ಹೆಚ್ಚು ಪರಿಣಾಮ ನೀಡುವ ಶಕ್ತಿಯನ್ನು ಹೊಂದಿವೆ. ವಿಶೇಷವಾಗಿ ಗ್ರಹಬಲ ಒಳ್ಳೆಯದಾಗಿರುವ ವರ್ಷಗಳಲ್ಲಿ ಉಪರತ್ನ ಧಾರಣೆ ಮಾಡಿದರೆ ಆ ಬಲವನ್ನು ಮತ್ತಷ್ಟು ಸ್ಥಿರ ಹಾಗೂ ಸಕ್ರಿಯಗೊಳಿಸುತ್ತದೆ. 2026ನೇ ಇಸವಿಯಲ್ಲಿ ವೃಷಭ ರಾಶಿಯವರಿಗೆ ಎರಡು ವಿಶೇಷ ಮತ್ತು ನಿಗೂಢ ಉಪರತ್ನಗಳನ್ನು ಸಂಯೋಜನೆಯಾಗಿ ಧರಿಸುವುದು ಅತ್ಯಂತ ಶುಭಕರ.
ಆ ನಿಗೂಢ ಉಪರತ್ನಗಳು ಯಾವುವು?
1. ಕನಕ ವರ್ಣಿಕಾ ರತ್ನಗಳು
2. ಶ್ಯಾಮಾಷ್ಮ ರತ್ನಗಳು
ಈ ಎರಡು ಉಪರತ್ನಗಳೂ ತಮ್ಮದೇ ಆದ ಶಕ್ತಿಯನ್ನು ಹೊಂದಿರುವ ಅತ್ಯಂತ ಶಕ್ತಿಶಾಲಿ ರತ್ನಗಳು. ಕನಕ ವರ್ಣಿಕಾ ರತ್ನವು ಧನ, ಐಶ್ವರ್ಯ, ಅವಕಾಶ ಮತ್ತು ಗೌರವವನ್ನು ಆಕರ್ಷಿಸುವ ಶಕ್ತಿಯನ್ನು ಒಳಗೊಂಡಿದ್ದರೆ, ಶ್ಯಾಮಾಷ್ಮ ರತ್ನವು ರಕ್ಷಣೆ, ಸ್ಥೈರ್ಯ, ನಕಾರಾತ್ಮಕ ಶಕ್ತಿಗಳ ನಿಯಂತ್ರಣ ಹಾಗೂ ಮಾನಸಿಕ ಸಮತೋಲನಕ್ಕೆ ಸಹಾಯಕವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳ ಮಹತ್ವವನ್ನು ಹೀಗೆ ವಿವರಿಸಲಾಗಿದೆ— “ಗ್ರಹಾಣಾಂ ಶಾಂತಯೇ ರತ್ನಂ ಧಾರಣೀಯಂ ವಿವೇಕತಃ”. ಹೀಗಂದರೆ, ಗ್ರಹಶಾಂತಿಗಾಗಿ ಯುಕ್ತಿಯಾಗಿ ರತ್ನ ಧಾರಣೆ ಮಾಡಬೇಕು.
2026 ವೃಷಭ ರಾಶಿ ವರ್ಷಭವಿಷ್ಯ: ಈ ವರ್ಷ ಹಣ, ಉದ್ಯೋಗ ಮತ್ತು ಆಸ್ತಿ ವಿಚಾರದಲ್ಲಿ ಏನು ಬದಲಾವಣೆ?
ಧಾರಣೆಯ ಶ್ರೇಷ್ಠ ವಿಧಾನ:
ಈ ಎರಡು ಉಪರತ್ನಗಳನ್ನು ಬ್ರೇಸ್ ಲೆಟ್ ರೂಪದಲ್ಲಿ ಸಂಯೋಜನೆ ಮಾಡಿ, ಧರಿಸುವುದು ಹೆಚ್ಚು ಫಲಪ್ರದ. ಧಾರಣೆಗೆ ಮುನ್ನ ಶುದ್ಧೀಕರಣ ಮತ್ತು ಅಭಿಮಂತ್ರಣ ಅತ್ಯಂತ ಮುಖ್ಯ.
ಗುರುವಾರ, ಶುಕ್ರವಾರ ಮತ್ತು ಶನಿವಾರ— ಈ ಮೂರು ದಿನಗಳು ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ, ರತ್ನದ ಬ್ರೇಸ್ ಲೆಟ್ ಗೆ ಭಸ್ಮ ಹಚ್ಚಿ, ಸಂಜೆ ಸೂರ್ಯಾಸ್ತ ಸಮಯದಲ್ಲಿ ಪಶ್ಚಿಮಾಭಿಮುಖವಾಗಿ ಕುಳಿತು, ಶುದ್ಧ ಮನಸ್ಸಿನಿಂದ ಸಂಕಲ್ಪ ಮಾಡಿಕೊಂಡು, ಧರಿಸಬೇಕು
ಈ ರತ್ನಗಳನ್ನು ಧರಿಸಿದ ಬಳಿಕ ಯಾವುದೇ ಕಠಿಣ ಆಹಾರ ನಿಯಮಗಳಿಲ್ಲ. ಮಾಂಸಾಹಾರ ಸೇವಿಸಬಾರದು ಎಂಬ ನಿಯಮ ಇಲ್ಲ, ಹಾಗೆಯೇ ಪ್ರಯಾಣ ಅಥವಾ ದೈನಂದಿನ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವೂ ಇಲ್ಲ. ಇದರಿಂದ ಸಾಮಾನ್ಯ ಜೀವನಶೈಲಿಗೆ ಅಡ್ಡಿಯಿಲ್ಲದೆ ರತ್ನದ ಫಲವನ್ನು ಅನುಭವಿಸಬಹುದು.
ಕೊನೆ ಮಾತು:
2026ನೇ ಇಸವಿಯು ವೃಷಭ ರಾಶಿಯವರಿಗೆ ಅವಕಾಶಗಳ ವರ್ಷ. ಶನಿ ಮತ್ತು ಗುರುಬಲದ ಅನುಕೂಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಾದರೆ ರಾಹು–ಕೇತು ಪ್ರಭಾವವನ್ನು ಸಮತೋಲನಗೊಳಿಸುವುದು ಅಗತ್ಯ. ಅಂಥ ಸಂದರ್ಭದಲ್ಲಿ ಕನಕ ವರ್ಣಿಕಾ ಮತ್ತು ಶ್ಯಾಮಾಷ್ಮ ಉಪರತ್ನಗಳ ಸಂಯೋಜಿತ ಧಾರಣೆ ಒಂದು ಸರಳ ಆದರೆ ಶಕ್ತಿಶಾಲಿ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಶ್ರದ್ಧೆ, ನಿಯಮ ಮತ್ತು ಸಕಾರಾತ್ಮಕ ಸಂಕಲ್ಪ ಇದ್ದರೆ ಈ ರತ್ನಧಾರಣೆ ಜೀವನದಲ್ಲಿ ಸ್ಪಷ್ಟವಾದ ಶುಭಪರಿವರ್ತನೆಯನ್ನು ತರುವಲ್ಲಿ ಸಹಾಯಕವಾಗುತ್ತದೆ.
ಇಂಥ ಅದ್ಭುತ ರುದ್ರ ಮಂತ್ರಗಳಿಂದ ಅಭಿಮಂತ್ರಿತ ಉಪರತ್ನ ಬ್ರೇಸ್ ಲೆಟ್‌ಗಳಿಗಾಗಿ ಸಂಪರ್ಕಿಸಿ: ಮೊಬೈಲ್ ಫೋನ್ ಸಂಖ್ಯೆ- 63602 11237.
ನಿರೂಪಣೆ: ಶ್ರೀನಿವಾಸ ಮಠ





